Advertisement
ಇದರಿಂದಾಗಿ ತಾಪಂ ಭವನದಲ್ಲಿ ನಡೆದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು. ಶಾಸಕ ಟಿ.ವೆಂಕಟರಮಣಯ್ಯ ಸೇರಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕನ್ನಡಪರ ಹೋರಾಟಗಾರರ ಮಾತಿಗೆ ಗೌರವ ನೀಡದೆ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಚಿ.ಮಾ.ಸುಧಾಕರ್ ಕ್ಷಮೆಯಾಚಿಸದೆ ಸಭೆಯಿಂದ ಹೊರ ನಡೆದರು.
ಸಾಹಿತ್ಯ ಪರಿಷತ್ ಲೆಕ್ಕಪತ್ರಗಳು ಪಾರದರ್ಶಕವಾಗಿಲ್ಲ. ದತ್ತಿನಿಧಿಯಿಂದ ತಾಲೂಕಿಗೆ ಬರಬೇಕಿರುವ ಹಣ ಬಂದಿಲ್ಲ. ಕನ್ನಡ
ಪರ ಹೋರಾಟಗಾರರು ಸಮ್ಮೇಳನ ಅಧ್ಯಕ್ಷರಾಗಲು ಅವಕಾಶ ಇಲ್ಲ ಎಂದು ಎಲ್ಲೂ ನಿಯಮ ಇಲ್ಲ. ಜಿಲ್ಲಾ ಅಧ್ಯಕ್ಷರು
ಯಾವುದೇ ಬರವಣಿಗೆಯನ್ನು ಮಾಡಿಲ್ಲ. ಹೀಗಾಗಿ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾಗಲು ಅರ್ಹತೆ ಇಲ್ಲ ಎಂದು
ಟೀಕಿಸಿದರು. ಮುಖಂಡರಾದ ಮಂಜು ನಾಥ್, ರಾಜು ಸಣ್ಣಕ್ಕಿ, ಸಂಜೀವ್ ನಾಯಕ್ ಮಾತನಾಡಿ, ಸಾಹಿತ್ಯ ಸಮ್ಮೇಳದಲ್ಲಿ ಹೊಸ ಕೃಷಿ ಕಾಯ್ದೆಗಳು, ರಾಜ್ಯದಲ್ಲಿ ಹಿಂದಿ ಭಾಷೆ ಏರಿಕೆ ಕುರಿತ ವಿಚಾರ ಗೋಷ್ಠಿಗಳು ನಡೆಯಬೇಕು ಎಂದರು. ಇದನ್ನೂ ಓದಿ:ಲಂಚ ಪ್ರಕರಣ: ಕಂದಾಯ ಸಚಿವ ಅಶೋಕ್ ಪಿಎ ವಿರುದ್ಧ ದೂರು ದಾಖಲು
Related Articles
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರ ನಡವಳಿಕೆ ಖಂಡನೀಯವಾಗಿದೆ. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಲೆಕ್ಕ ಪತ್ರಗಳನ್ನು ಪಾರದರ್ಶಕ ವಾಗಿಟ್ಟು ಕೊಳ್ಳುವುದು ಕಡ್ಡಾಯ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಆಡಳಿತದಿಂದ 1 ಲಕ್ಷ ರೂ. ನೆರವು ನೀಡಲಾಗುವುದು ಎಂದು ವಿವರಿಸಿದರು. ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಹಾದೇವ್ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಮುಂದೂಡಲ್ಲಪಟ್ಟಿದ ಜಿಲ್ಲಾ ಸಾಹಿತ್ಯ ಸಮ್ಮೇಳನ ಫೆಬ್ರವರಿ ಮೊದಲ ವಾರದಲ್ಲಿ ಬಸವ ಭವನದಲ್ಲಿ ನಡೆಯಲಿದೆ. ಈ ಹಿಂದೆ ನಿರ್ಧರಿಸಿ ದಂತೆಯೇ ಗೋಷ್ಠಿಗಳು ನಡೆಯಲಿವೆ. ಸಮ್ಮೇಳನ ಅಧ್ಯಕ್ಷರನ್ನಾಗಿ ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭು
ದೇವ್ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಎಲ್ಲಾ ಸಂಘಟನೆಗಳನ್ನು ಒಳಗೊಂಡಂತೆ ಸಮಿತಿ ರಚಿಸಿಕೊಂಡು
ಸಮ್ಮೇಳನ ನಡೆಸಲಾಗುವುದು ಎಂದರು. ಎಸಿ ಅರುಳ್ ಕುಮಾರ್, ತಹಶೀಲ್ದಾರ್ ಶಿವರಾಜ್, ತಾಪಂ ಅಧ್ಯಕ್ಷ ನಾರಾಯಣ ಗೌಡ, ಇಇಒ ಮುರುಡಯ್ಯ ಇದ್ದರು.
Advertisement