Advertisement

ಬಿರುಸುಗೊಂಡ ಕಸಾಪ ಚುನಾವಣೆ ಪ್ರಚಾರ

12:50 PM Apr 12, 2021 | Team Udayavani |

ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ರಾಜಕೀಯ ಚುನಾವಣೆಯಂತೆ ದಿನದಿಂದ ದಿನಕ್ಕೆರಂಗೇರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Advertisement

ರಾಜಕೀಯ ಚುನಾವಣೆಯನ್ನೂ ಮೀರಿಸುವಂತೆಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳು ಸಾಹಿತ್ಯ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲೆ ಸುತ್ತುತ್ತಿರುವ ಅಭ್ಯರ್ಥಿಗಳು: ಬೆಂಗಳೂರು ಜಿಲ್ಲೆಹೊರತುಪಡಿಸಿ ಮಂಡ್ಯ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿ ಒಟ್ಟು 24,204ಮತದಾರರಿದ್ದಾರೆ. ಮಂಡ್ಯ 11,616, ಶ್ರೀರಂಗಪಟ್ಟಣ1,644, ಪಾಂಡವಪುರ 2,755, ಕೆ.ಆರ್‌.ಪೇಟೆ 1,672,ನಾಗಮಂಗಲ 1,164, ಮದ್ದೂರು 3,224 ಹಾಗೂಮಳವಳ್ಳಿ ತಾಲೂಕಿನಲ್ಲಿ 2,129 ಮತ ಹಕ್ಕು ಪಡೆದಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಜಿಲ್ಲೆಯಾದ್ಯಂತಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ.

ಪ್ರತಿಸ್ಪರ್ಧಿಗಳ ಮನವೊಲಿಕೆ ಯತ್ನ: ಸೋಮವಾರ ನಾಮಪತ್ರ ವಾಪಸ್‌ ಪಡೆಯಲು ಕೊನೇ ದಿನವಾಗಿದ್ದು, ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳ ಉಮೇದುವಾರಿಕೆವಾಪಸ್‌ ಪಡೆಯಲು ಮನವೊಲಿಕೆ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ 6 ಮಂದಿ ನಾಮಪತ್ರಸಲ್ಲಿಸಿದ್ದು, ಅದರಲ್ಲಿ ಚಂದ್ರಕಲಾ ಅವರು ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಇನ್ನುಳಿದ ಐದು ಮಂದಿ ಅಭ್ಯರ್ಥಿಗಳಲ್ಲಿ ಯಾರು ಅಂತಿಮ ಕಣದಲ್ಲಿರಬೇಕು. ಯಾರಿಗೆ ಲಾಭ, ಯಾರಿಗೆನಷ್ಟ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ವಾಪಸ್‌ ತೆಗೆಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿವೆ. ಅಲ್ಲದೆ, ಗೆದ್ದರೆ ಸಾಹಿತ್ಯ ಪರಿಷತ್ತಿನಲ್ಲಿ ಹುದ್ದೆ ಕೊಡುವ ಮಾತುಕತೆಗಳು ಜೋರಾಗಿ ನಡೆಯುತ್ತಿವೆ.

Advertisement

ಒಮ್ಮತ ಅಭ್ಯರ್ಥಿ ಗೊಂದಲದ ಹೊಗೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಂದಾಗಲೆಲ್ಲಕರ್ನಾಟಕ ಸಂಘ ಮುಂಚೂಣಿಯಲ್ಲಿದೆ. ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಸೇರಿದಂತೆ ಇತರೆ ಮಾಜಿಅಧ್ಯಕ್ಷರು ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಒಂದುಬಾರಿ ಅಧ್ಯಕ್ಷರಾದವರು ಎರಡನೇ ಬಾರಿಗೆಅಧ್ಯಕ್ಷರಾಗುವಂತಿಲ್ಲ ಎಂಬ ಅಲಿಖೀತ ನಿಯಮದಂತೆ ಪ್ರತಿ ಬಾರಿಯೂ ಹೊಸಬರನ್ನು ಗೆಲ್ಲಿಸಿಕೊಂಡುಬರುವುದು ಇದರ ಉದ್ದೇಶವಾಗಿತ್ತು. ಆದರೆ ಈ ಬಾರಿಒಮ್ಮತದ ಅಭ್ಯರ್ಥಿಯ ಗೊಂದಲದಿಂದ ಭಿನ್ನಾಭಿಪ್ರಾಯ ಹೊಗೆಯಾಡಿದೆ.

ಪೈಪೋಟಿ: ಈಗಾಗಲೇ ಅಭ್ಯರ್ಥಿಗಳ ನಡುವೆಪೈಪೋಟಿ ಎದುರಾಗಿದೆ. ಸಾಹಿತಿ ಎಸ್‌.ಕೃಷ್ಣಸ್ವರ್ಣಸಂದ್ರ, ಹಾಲಿ ಅಧ್ಯಕ್ಷ ಸಿ.ಕೆ.ರವಿಕುಮಾರನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಪ್ರಚಾರದಲ್ಲಿತೊಡಗಿದ್ದಾರೆ. ಇನ್ನುಳಿದಂತೆ ಪಿ.ಡಿ.ತಿಮ್ಮಪ್ಪ, ಕೆ.ಎಂ.ಕೃಷ್ಣೇಗೌಡ ಕೀಲಾರ ಹಾಗೂ ಕ್ರಾಂತಿಸಿಂಹ ಕೂಡ ಕಣದಲ್ಲಿದ್ದಾರೆ.

ಪ್ರಚಾರದಲ್ಲಿ ಅಭ್ಯರ್ಥಿಗಳು :

ಸಾಹಿತಿ ಕೃಷ್ಣಸ್ವರ್ಣಸಂದ್ರ ಅವರು, ಕಳೆದ ಬಾರಿ ಸೋತಿದ್ದು, ಈ ಬಾರಿ ಕನ್ನಡ ತೇರು ಎಳೆಯಲು ಅವಕಾಶ ಮಾಡಿಕೊಡಬೇಕು ಎಂದು ಅನುಕಂಪ ಹಾಗೂ ಗೆಲ್ಲುವ ವಿಶ್ವಾಸದೊಂದಿಗೆ ಮತಯಾಚಿಸುತ್ತಿದ್ದಾರೆ. ಇತ್ತ ಹಾಲಿ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಅವರು ಎರಡನೇ ಬಾರಿಗೆ ಆಯ್ಕೆ ಬಯಸಿ ಮತದಾರರ ಮನೆಗೆಎಡತಾಕುತ್ತಿದ್ದಾರೆ. ಎರಡನೇ ಬಾರಿ ಸ್ಪರ್ಧೆಗೆ ತೀವ್ರ ವಿರೋಧವಿದ್ದರೂ ಗೆಲ್ಲುವ ಭರವಸೆಯೊಂದಿಗೆಕಣದಲ್ಲಿದ್ದಾರೆ. ಇತ್ತ ಪಿ.ಡಿ.ತಿಮ್ಮಪ್ಪ ಅವರು ಸಹ ತಮ್ಮದೇ ಆದ ವರ್ಚಸ್ಸಿನಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದರೆ, ಕೆ.ಎಂ.ಕೃಷ್ಣೇಗೌಡ ಹಾಗೂ ಸಿ.ಎಂ.ಕ್ರಾಂತಿಸಿಂಹ ಗೆಲುವಿನ ಭರವಸೆಯಲ್ಲಿದ್ದಾರೆ.

ಮಾಜಿ ಅಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ :  ಕರ್ನಾಟಕ ಸಂಘದ ಆವರಣದಲ್ಲಿಯೇ ನಡೆದಿದ್ದಸಭೆಯಲ್ಲಿ ಪೊ›.ಜಯಪ್ರಕಾಶ್‌ಗೌಡ, ಎಚ್‌.ಎಸ್‌.ಮುದ್ದೇಗೌಡ, ಡಿ.ಪಿ.ಸ್ವಾಮಿ ಸೇರಿದಂತೆ ಇತರೆಮಾಜಿ ಅಧ್ಯಕ್ಷರು ಒಮ್ಮತದ ಅಭ್ಯರ್ಥಿ ಆಯ್ಕೆಗೆ ಮುನ್ನುಡಿ ಬರೆದಿದ್ದರು. ನಂತರದ ದಿನಗಳಲ್ಲಿನಡೆದ ವಿದ್ಯಮಾನಗಳಿಂದ ಒಮ್ಮತದ ಅಭ್ಯರ್ಥಿಯಾಗಿ ಸಾಹಿತಿ ಎಸ್‌.ಕೃಷ್ಣ ಸ್ವರ್ಣ ಸಂದ್ರಅವರನ್ನು ಘೋಷಿಸಿದರು. ಈ ಬೆಳವಣಿಗೆಯಿಂದಬೇಸತ್ತ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ ಅವರುಕೆ.ಎಂ.ಕೃಷ್ಣೇಗೌಡ ಕೀಲಾರ ಅವರನ್ನುಬಹುಮತದ ಅಭ್ಯರ್ಥಿ ಎಂದು ಘೋಷಿಸಿರುವುದು ಮಾಜಿ ಅಧ್ಯಕ್ಷರ ನಡುವೆ ಒಡಕಿಗೆ ಕಾರಣವಾಗಿದೆ. ಎರಡೂ ಬಣದ ಅಜೆಂಡಾ ಒಂದೇ ಆಗಿದ್ದು, ಬೇರೆ ಬೇರೆಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವುದು ಯಾರಿಗೆ ಅನುಕೂಲವಾಗಲಿದೆ ಕಾದು ನೋಡಬೇಕ

 

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next