Advertisement

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

10:48 AM Oct 27, 2021 | Team Udayavani |

ಆಳಂದ: ಕೋವಿಡ್‌ ಹರಡದಂತೆ ಸರ್ಕಾರಿ ನಿಯಮಗಳನ್ನು ಪಾಲಿಸಿ ನ. 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕನ್ನಡಪರ ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಎಲ್ಲ ಸಭೆ, ಸಮಾರಂಭ, ಚುನಾವಣೆಗಳ ಪ್ರಚಾರಕ್ಕೆ ಕೋವಿಡ್‌ ನಿಯಮಾವಳಿ ಅನುಸರಿಸಲಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಚುನಾವಣೆ ಪ್ರಚಾರಗಳಿಗೆ ಜನರ ದಂಡು ಕಟ್ಟಿಕೊಂಡೇ ಓಡಾಡುತ್ತಿದ್ದಾರೆ. ಆದರೆ ರಾಜ್ಯೋತ್ಸವಕ್ಕೆ ಯಾಕೆ ನಿಯಮಾವಳಿ ಹೇರಿ ಉತ್ಸವದಿಂದ ನುಣುಚಿಕೊಳ್ಳುತ್ತಿರಿ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಪ್ರಶ್ನಿಸಿದರು.

ಕನ್ನಡಿಗರ ಅಸ್ಮಿತೆಯಾದ ರಾಜ್ಯೋತ್ಸವ ಆಚರಣೆ ಅದ್ಧೂರಿಯಾಗಿ ನಡೆಸಬೇಕು. ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಹಾಗೂ ವೇದಿಕೆ ಸಮಾರಂಭ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರಾಗಿದ್ದಾರೆ. 23 ಇಲಾಖೆಗಳ ಪೈಕಿ 8-9 ಇಲಾಖೆ ಅಧಿಕಾರಿಗಳ ಮಾತ್ರ ಬಂದಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರರು ಸಭೆಗೆ ಗೈರಾದಾವರಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಉತ್ಸವದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡಿ ಕನ್ನಡ ಧ್ವಜ ಹಾರಿಸಬೇಕು. ಸಾಧಕರನ್ನು ಗುರುತಿಸಿ ಸನ್ಮಾನಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಘಟಕರು ಒತ್ತಾಯಿಸಿದರು.

Advertisement

ಕರುನಾಡು ವಿಜಯ ಸೇನೆ ತಾಲೂಕು ಅಧ್ಯಕ್ಷ ಗುರು ಬಂಗರಗಿ, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ನಾಗರಾಜ ಘೋಡಕೆ, ಗಂಗಾಧರ ಕುಂಬಾರ ಖಜೂರಿ, ಕನಸೇ ಜಿಲ್ಲಾಧ್ಯಕ್ಷ ರಮೇಶ ಜಗತಿ, ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಬೀರಣ್ಣಾ ಎಸ್‌. ಭೂಸನೂರ, ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಅಭಿಷೇಕ ಪಾಟೀಲ, ಕರವೇ ವಕ್ತಾರ ದವಲಪ್ಪ ವಣದೆ, ಪ್ರಭು ಪಾಟೀಲ ಮತ್ತಿತರರು ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: ಆದರ್ಶ ನಂಬಿದ ಬದುಕು ಮಾದರಿ: ಡಾ|ಅಪ್ಪ

ರಾಜ್ಯೋತ್ಸವ ಆಚರಣೆ ಕುರಿತು ಇಲಾಖೆ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಜೆಸ್ಕಾಂ ಎಇಇ ಮಾಣಿಕರಾವ್‌ ಕುಲಕರ್ಣಿ, ಸಿಪಿಐ ಮಂಜು ನಾಥ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next