ಗುಂಡ್ಲುಪೇಟೆ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸುವ ಘಟನೆ ಖಂಡಿಸಿ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಪಟ್ಟಣ ಪ್ರವಾಸಿ ಮಂದಿರದಿಂದ ಜಾಥಾ ಹೊರಟ ಪ್ರತಿಭಟನಾಕಾರರು, ಎಂಡಿಸಿಸಿ ಬ್ಯಾಂಕ್ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಹೆದ್ದಾರಿ ತಡೆನಡೆಸಿದರು. ನಂತರ ತಾಲೂಕು ಕಚೇರಿ ಮುಂದೆಜಮಾಯಿಸಿ ಎಂಇಎಸ್ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಕರುಬರ ಮಹಾಸಭಾದ ರಾಜ್ಯಾಧ್ಯಕ್ಷ ಉತ್ತಂಗೆರೆಹುಂಡಿ ಶಿವಮೂರ್ತಿ ಮಾತನಾಡಿ, ಕರ್ನಾಟಕ ಸೌಲಭ್ಯ ಪಡೆದು ಕೆಲ ಕಿಡಿಗೇಡಗಳು ಮಹಾರಾಷ್ಟ್ರದ ಪರ ಕೆಲಸ ಮಾಡುತ್ತಿದ್ದಾರೆ. ಈ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದರು.
ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ, ಕಾವಲು ಪಡೆ, ಎಸ್ಡಿಪಿಐ, ಪಿಎಫ್ಐ, ಮಾನವ ಬಂಧುತ್ವ ವೇದಿಕೆ, ತಾಲೂಕು ಕುರುವ ಸಂಘ ಸೇರಿದಂತೆ ಇತರೆ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆಸಾಥ್ ನೀಡಿದರು. ಈ ವೇಳೆ ಶಿರಸ್ತೇದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕುರುಬ ಸಮುದಾಯದ ಮುಖಂಡ ಎಲ್.ಸುರೇಶ್, ಕರವೇ ತಾಲೂಕುಅಧ್ಯಕ್ಷ ಸುರೇಶನಾಯಕ, ರಾಜೇಂದ್ರ ವಿ.ನಾಯಕ್, ಕಾವಲು ಪಡೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್, ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಶೀದ್, ಗೌರವಾಧ್ಯಕ್ಷ ವೆಂಕಟೇಶ್ ಗೌಡ, ಟೌನ್ ಸಂಚಾಲಕ ಮಿಮಿಕ್ರಿ ರಾಜು, ಪಿಎಫ್ಐ ತಾಲೂಕು ಘಟಕದ ಅಧ್ಯಕ್ಷ ಇಮ್ರಾನ್ ಖಾನ್, ಎಸ್ಡಿಪಿಐ ತಾಲೂಕು ಅಧ್ಯಕ್ಷ ಅಕ್ರಮ ಪಾಷ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಶುಭಾಷ್ ಮಾಡ್ರಹಳ್ಳಿ, ತಾಲೂಕು ಸಂಚಾಲಕ ಸೋಮಣ್ಣ ಇತರರಿದ್ದರು.