Advertisement

ಕನ್ನಡ ನಿರ್ಲಕ್ಷ್ಯ:ಎಚ್‌ಡಿಕೆ ಆಕ್ರೋಶ

05:20 PM Jun 07, 2021 | Team Udayavani |

ಬೆಂಗಳೂರು: ಕನ್ನಡ ಧ್ವಜಅವಮಾನಿಸಿದ ಕೆನಡಾದ ಅಮೆಜಾನ್‌ಗೆ ಕನ್ನಡಿಗರು ಬಿಸಿ ಮುಟ್ಟಿಸಿದ್ದಾರೆ.ಅಮೆಜಾನ್‌ ತನ್ನ ತಪ್ಪು ಸರಿಪಡಿಸಿಕೊಂಡಿದೆ.

Advertisement

ಇದರಲ್ಲಿಕಾಣುವಂತದ್ದು ಕನ್ನಡಿಗರ ಅಭಿಮಾನಎಂದು ಮಾಜಿ ಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಈ ಕುರಿತುಟೀÌಟ್‌ ಮಾಡಿ,ಕನ್ನಡಅವಮಾನಿಸಿದಗೂಗಲ್‌ಹಾಗೂಅಮೆಜಾನ್‌ಗೆಪಾಠ ಕಲಿಸಿದ ಕನ್ನಡದ ಮನಸ್ಸುಗಳನ್ನುಅಭಿನಂದಿಸುತ್ತೇನೆಂದು ತಿಳಿಸಿದ್ದಾರೆ.

ಕನ್ನಡ, ಕರ್ನಾಟಕ ವಿಚಾರದಲ್ಲಿಇತ್ತೀಚೆಗೆ ಬಹುರಾಷ್ಟ್ರೀಯಕಂಪನಿಗಳು ಅತ್ಯಂತಅಜಾಗರೂಕವಾಗಿ, ಅಸೂಕ್ಷ್ಮವಾಗಿವರ್ತಿಸುತ್ತಿವೆ. ಗೂಗಲ್‌ ನಂತರಅಮೆಜಾನ್‌ ಪ್ರಕರಣ ನೋಡಿದರೆಯಾಕೆ ಈ ಕಂಪನಿಗಳು ಭಾಷೆವಿಚಾರದಲ್ಲಿ ಇಂತಹ ನಿರ್ಲಕ್ಷéವಹಿಸುತ್ತಿವೆ ಎಂದು ಪ್ರಶ್ನಿಸಿದ್ದಾರೆ.

ಇಂತಹ ಅವಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸಆಗುತ್ತಲೇ ಇವೆ. ಕನ್ನಡಿಗರ ಕೋಪಸಿಡಿಯುವ ಕಿಡಿಯಿಂದಅನಾಹುತಗಳು ಸಂಭವಿಸಿದರೆ ಅದನ್ನುತಾಳಿಕೊಳ್ಳುವ ಶಕ್ತಿ ಈಸಂಸ್ಥೆಗಳಿಗೆಉಳಿಯಲಾರದು. ಪರಿಸ್ಥಿತಿ ಅಲ್ಲಿಗೆತಲುಪುವ ಮುಂಚೆ ಕ್ಷಮೆ ಕೋರಿಸರಿಪಡಿಸಿಕೊಳ್ಳಲಿ ಎಂದುಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next