Advertisement

ವಿಲನ್ ಗಳಿಲ್ಲ, ಲವ್ವೇ ಎಲ್ಲಾ..: ಜುಲೈ 14ರಂದು ‘ಅಪರೂಪ’ ರಿಲೀಸ್

03:06 PM Jul 11, 2023 | Team Udayavani |

ಮಹೇಶ್‌ ಬಾಬು ನಿರ್ದೇಶನ “ಅಪರೂಪ’ ಚಿತ್ರ ಜುಲೈ 14ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ನಟ ಧನಂಜಯ್‌ ಸಾಥ್‌ ನೀಡಿದ್ದಾರೆ. ಈ ಚಿತ್ರದಲ್ಲಿ ಸುಘೋಷ್‌ ಹಾಗೂ ಹೃತಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

Advertisement

ನಿರ್ದೇಶಕ ಮಹೇಶ್‌ ಬಾಬು ಮಾತನಾಡಿ, “ಅಪರೂಪ ಅನ್ನೋದು ಲವ್‌ ಸ್ಟೋರಿ. ನಾನು ಹೆಚ್ಚಾಗಿ ಲವ್‌ಸ್ಟೋರಿ ಸಿನಿಮಾಗಳನ್ನೇ ಮಾಡಿದ್ದೇನೆ. ಈ ಚಿತ್ರದಲ್ಲಿ ವಿಲನ್‌ಗಳಿಲ್ಲ. ಹೀರೋ-ಹೀರೋಯಿನ್‌ಗಳೇ ವಿಲನ್‌ಗಳು. ಉಳಿದಿದ್ದು ತೆರೆಮೇಲೆ ನೋಡಿ. ಹೊಸ ನಾಯಕ ನಾಯಕಿ ಮೇಲೆ ನಿಮ್ಮ ಹಾರೈಕೆ ಇರಲಿ’ ಎಂದರು.

ನಾಯಕ ಸುಘೋಷ್‌ ಮಾತನಾಡಿ, “ಜುಲೈ 14ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸಬರಿಗೆ ಗೆಲ್ಲುವುದು ತುಂಬಾ ಕಷ್ಟವಿದೆ. ಜನ ಅಷ್ಟಾಗಿ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿಲ್ಲ. ಈ ಚಿತ್ರದಿಂದ ನಾನು ತುಂಬಾ ಕಲಿತಿದ್ದೇನೆ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿ’ ಎಂದರು.

ಇದನ್ನೂ ಓದಿ:CBI ಕೇವಲ ಬುರುಡೆ..: ಜೈನ ಮುನಿ ಪ್ರಕರಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

ಅಪರೂಪ ಸಿನಿಮಾ ಮೂಲಕ ಸುಘೋಷ್‌ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕ ನಾಯಕಿಯ ನಡುವೆ ಬರುವ ಅಹಂ ಬಂದು ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎನ್ನುವುದನ್ನು ಚಿತ್ರದ ಮೂಲಕ ಹೇಳಿದ್ದಾರಂತೆ ನಿರ್ದೇಶಕ ಮಹೇಶ್‌ ಬಾಬು.

Advertisement

ಮಹೇಶ್‌ ಬಾಬು ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದ ಸುಘೋಷ್‌ ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಶೋಕ್‌, ಅರುಣಾ ಬಲರಾಜ್‌, ಅವಿನಾಶ್‌, ಕುರಿಪ್ರತಾಪ್‌, ದಿನೇಶ್‌ ಮಂಗಳೂರು, ವಿಜಯ್‌ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್‌ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್‌ ಪೈ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next