ನಟಿ ಪ್ರಿಯಾಂಕಾ ಉಪೇಂದ್ರ ಅವರ ಸಹೋದರ ವಿನಾಯಕ್ “ಯು-ಐ’ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಸಿನಿಮಾ ಲೋಕಕ್ಕೆ ಇವರು ಹೊಸಬೇರನಲ್ಲ. ಈಗಾಗಲೇ ವಿವೇಕ್ ತ್ರಿವೇದಿ ಹೆಸರಿನಲ್ಲಿ 21 ಬಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ಯು-ಐ ಚಿತ್ರದಲ್ಲಿ ವಿನಾಯಕ್ ಅವರಿಗೆ, ಬಾವ ಉಪೇಂದ್ರ ನಟಿಸಲು ಅವಕಾಶ ನೀಡಿದ್ದರು. ಈ ಬಗ್ಗೆ ಮಾತು ಹಂಚಿಕೊಂಡ ವಿನಾಯಕ್, “ನಾಲ್ಕು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಮರೆಯಲಾಗದ ಅನುಭವ. ಮನೆಯಲ್ಲಿ ಸಂಬಂಧಿಯಾದರೂ, ಸೆಟ್‌ನಲ್ಲಿ ನಿರ್ದೇಶಕರು. ಹೆಚ್ಚು ಮಾತನಾಡದೆ ಎಲ್ಲರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದರು. ಅವರ ಬದ್ಧತೆ ನೋಡಿ ಖುಷಿಯಾಗಿದೆ. ಬಂಗಾಲಿ, ಕನ್ನಡ ಚಿತ್ರಗಳಲ್ಲಿ ಹೆಚ್ಚು ವ್ಯತ್ಯಾಸ ಕಂಡಿಲ್ಲ. ಇತ್ತೀಚೆಗೆ ನಡೆದ ಸೆಲೆಬ್ರಿಟಿ ಪ್ರದರ್ಶನದಲ್ಲಿ ನನ್ನ ಪಾತ್ರವನ್ನು ಅನೇಕರು ಗುರುತಿಸಿ ಶುಭ ಹಾರೈಸಿದರು.
ಮುಂದೆಯೂ ಕನ್ನಡದಲ್ಲಿ ಒಳ್ಳೆ ಪಾತ್ರಗಳು ಸಿಗಬಹುದೆಂಬ ಭರವಸೆ ಇದೆ’ ಎಂದರು.