Advertisement

ಕನ್ನಡ ಬಾವುಟ, ಸಿಗದ ಮಾನ್ಯತೆ

09:20 AM Nov 01, 2018 | |

ಬೆಂಗಳೂರು: ಕನ್ನಡಿಗರ ಅಸ್ಮಿತೆಯ ಸಂಕೇತವಾದ ನಾಡ ಬಾವುಟ ಹೊಸ ವಿನ್ಯಾಸ ನೀಡಿ, ಕಾನೂನಿನ ಮಾನ್ಯತೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರ್ನಾಟಕದ ಹೊಸ ಧ್ವಜಕ್ಕೆ ಮಾನ್ಯತೆ ಸಿಕ್ಕರೆ ಅದೊಂದು ಇತಿಹಾಸವಾಗಲಿದೆ. ಕರ್ನಾಟಕದಲ್ಲಿ ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಪ್ರತ್ಯೇಕ ನಾಡಧ್ವಜ ರಚನೆಗೆ ಹಿಂದಿನ ಸರ್ಕಾರ ಧ್ವಜ ಸಮಿತಿ ನೇಮಕ ಮಾಡಿತ್ತು. ಆ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಎಲ್ಲ ಬಗೆಯ ಮಾಹಿತಿ ಪಡೆದು ಹೊಸ ಧ್ವಜವನ್ನು ಸರ್ಕಾರಕ್ಕೆ ಒಪ್ಪಿಸಿದೆ. ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ
ಸಲ್ಲಿಸಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ.

Advertisement

ಬಾವುಟದ ಇತಿಹಾಸ: ಕನ್ನಡಿಗರ ಹೋರಾಟದಲ್ಲಿ ಕಂಗೊಳಿಸುವ ಹಳದಿ, ಕೆಂಪು ಬಣ್ಣದ ಧ್ವಜವನ್ನು ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿಯವರು ರಚಿಸಿದ “ಕನ್ನಡ ಪಕ್ಷದ’ ಅಧಿಕೃತ ಬಾವುಟ. ಅದನ್ನೇ ಕನ್ನಡಿಗರು 1965ರಿಂದಲೂ ಗೋಕಾಕ್‌ ಚಳವಳಿ ಸೇರಿದಂತೆ ಕನ್ನಡ ಪರ ಉತ್ಸವ, ಕಾರ್ಯಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಈ ಧ್ವಜದ ರಚನೆಗೂ ಪೂರ್ವದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಈಗಿನ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹಾಗೂ ಮ.ರಾಮಸ್ವಾಮಿ ಸೇರಿಕೊಂಡು ಭಗವಧ್ವಜದ ಆಕಾರ ಹೋಲುವ ಹಳದಿ ಬಣ್ಣದ ಧ್ವಜ ರಚಿಸಿದ್ದರು. ಧ್ವಜದ ಮಧ್ಯದಲ್ಲಿ ಕರ್ನಾಟಕದ ಲಾಂಛನ ಹಾಗೂ ಏಳು ಪೈರುಗಳಿದ್ದವು. ಹಲವು ಕಾರಣದಿಂದಾಗಿ ಈ ಧ್ವಜ ಹೆಚ್ಚುಕಾಲ ಜನಮಾನಸದಲ್ಲಿ ಉಳಿಯಲಿಲ್ಲ. ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರವನ್ನು ಆಗ್ರಹಿಸಿತ್ತು. ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗಿರಲಿಲ್ಲ. ನಂತರ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಲು ಸುತ್ತೋಲೆ ಹೊರಡಿಸಿದ್ದರು. ಹೈಕೋರ್ಟ್‌ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಧ್ವಜ ವಿನ್ಯಾಸ ಸಮಿತಿ: ಈಗಿರುವ ಧ್ವಜಕ್ಕೆ ನಾಡಧ್ವಜ ಎನ್ನುವುದಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಇದನ್ನು ಪಕ್ಷದ ಅಧಿಕೃತ ಧ್ವಜ ಎಂದು ಚುನಾವಣಾ ಆಯೋಗವೇ ಮಾನ್ಯ ಮಾಡಿದೆ. ಹೀಗಾಗಿ ಇದೇ ಧ್ವಜವನ್ನು ನಾಡಧ್ವಜವಾಗಿಸಲು ಕಾನೂನು ತೊಡಕು ಎದುರಾಗಲಿದೆ. ಹೀಗಾಗಿ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರನ್ನು ಸದಸ್ಯರನ್ನಾಗಿಸಿ, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿತ್ತು. ಈ ಸಮಿತಿ ಈಗಾಗಲೇ ವರದಿಯನ್ನು ಸರ್ಕಾರಕ್ಕೆ ನೀಡಿ¨ ಹೊಸ ಧ್ವಜ ಕನ್ನಡ ಧ್ವಜ ವಿನ್ಯಾಸಕ್ಕೆ ರಾಜ್ಯ ಸರ್ಕಾರ ನೇಮಿಸಿದ್ದ 9 ಮಂದಿ ತಜ್ಞರ ಸಮಿತಿ ಈಗಾಗಲೇ ಧ್ವಜ¨
‌ ಸ್ವರೂಪವನ್ನು ಸ್ಪಷ್ಟಪಡಿಸಿ ಸರ್ಕಾರಕ್ಕೆ ವರದಿ ಒಪ್ಪಿಸಿದೆ. ಹಳದಿ ಮತ್ತು ಕೆಂಪು ಬಣ್ಣದ ಮಧ್ಯೆ ಶಾಂತಿ, ಸೌಹಾರ್ದತೆ
ಹಾಗೂ ಬ್ರಾತೃತ್ವ ದ ಸಂಕೇತವಾಗಿ ಬಿಳಿ ಬಣ್ಣವನ್ನು ಸೇರಿಸಿದೆ. ನಾಡಧ್ವಜವಾಗಿರುವುದರಿಂದ ಬಿಳಿ ಬಣ್ಣದ ಮಧ್ಯದಲ್ಲಿ ಗಂಡಭೇರುಂಡ ಲಾಂಛನ ಇರುವ ಧ್ವಜ ವಿನ್ಯಾಸ ಮಾಡಿದ್ದಾರೆ. ಸಾಹಿತಿ ಡಾ.ಪಾಟೀಲ ಪುಟ್ಟಪ್ಪಸೇರಿ ಕನ್ನಡಪರ ಹೋರಾಟಗಾರರು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರಚಿಸಿ, ಕಾನೂನಿನ ಮಾನ್ಯತೆ ಪಡೆಯುವಂತೆ ಸರ್ಕಾರವವನ್ನು ಕೋರಿದ್ದರು. ಈ ಕುರಿತು ಅನೇಕ
ಚರ್ಚೆಗಳು ನಡೆದಿತ್ತು.

ಹಳದಿ-ಕೆಂಪು ಪ್ರತಿಪಾದಿಸುವುದೇನು?
ಈಗಿರುವ ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕ. ಜತೆಗೆ ಕನ್ನಡ ನಾಡು ಚಿನ್ನದ ಬೀಡು ಎಂಬುದನ್ನು ಪ್ರತಿಪಾದಿಸುತ್ತದೆ. ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕ ಎಂದು ಮ.ರಾಮಮೂರ್ತಿಯವರೇ ಧ್ವಜ ರಚನೆಯಾದ ನಂತರ ನಡೆದ ಸಮಾವೇಶದಲ್ಲಿ ಹೇಳಿದ್ದರು. ಎಂಬುದನ್ನು ಕನ್ನಡ ಕಾರ್ಯಕರ್ತ ರಾ.ನಂ.ಚಂದ್ರಶೇಖರ್‌ ಮಾಹಿತಿ ನೀಡಿದರು.

ಹಳದಿ-ಕೆಂಪು ಕನ್ನಡ ಧ್ವಜ ಇದೆ.
ಸರ್ಕಾರವೇ ರಾಜ್ಯೋತ್ಸವದಲ್ಲಿ ಈ ಧ್ವಜಾರೋಹಣ ಮಾಡಿದೆ. ಧ್ವಜ ಬದಲಾವಣೆಗೆ ಸಮಿತಿ ಮಾಡಿದ್ದೇ ಅವೈಜ್ಞಾನಿಕ, ಅದನ್ನು ಕೇಂದ್ರಕ್ಕೆ ಕಳುಹಿಸಿದ್ದು ಸರಿಯಲ್ಲ. ಕನ್ನಡಿಗರು ಒಪ್ಪಿಕೊಂಡಿರುವ ಬಾವುಟವೇ ಮುಂದುವರಿಯಬೇಕು.
● ವಾಟಾಳ್‌ ನಾಗರಾಜ್‌, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ,

Advertisement

ರಾಜ್ಯವೊಂದು ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪಿಲ್ಲ. ಕೇಂದ್ರ ಸರ್ಕಾರ ಆದಷ್ಟು ಬೇಗ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ನೀಡಬೇಕು. ಈ ಸಂಬಂಧ ಕನ್ನಡ ಸಂಘಟನೆಗಳು ಹೋರಾಟ ನಡೆಸಬೇಕು. ನಾವಂತೂ ಹೋರಾಟಕ್ಕೆ ಸಿದ್ಧರಿದ್ದೇವೆ.
● ಚಂದ್ರಶೇಖರ್‌ ಪಾಟೀಲ್‌, ಸಾಹಿತಿ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next