ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಉದಯಭಾನು ಕಲಾಸಂಘದ ವತಿಯಿಂದ “ಕನ್ನಡ ನಾಟಕೋತ್ಸವ’ ನಡೆಯುತ್ತಿದೆ. 9 ದಿನಗಳ ಈ ಉತ್ಸವವನ್ನು, ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ನಟಿ ಸಿಂಧು ಲೋಕನಾಥ್, ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಲಾಸಂಘದ ಅಧ್ಯಕ್ಷ ಬಿ.ಕೃಷ್ಣ ಭಾಗವಹಿಸಲಿದ್ದಾರೆ. ಟಿ.ಪಿ.ಕೈಲಾಸಂ, ಚಂದ್ರಶೇಖರ ಕಂಬಾರ, ಜಯಂತ ಕಾಯ್ಕಿಣಿ, ಜಿ.ಜಿ., ಎಸ್.ವಿ.ಕೃಷ್ಣ ಶರ್ಮ ಮುಂತಾದವರು ಬರೆದ 16 ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕೋತ್ಸವದ ಕೊನೆಯ ದಿನ ರಂಗ ಗೌರವ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ರಂಗ ಕಲಾವಿದರಾದ ಸುರೇಶ್ ದೇವರಮನಿ ಹಾಗೂ ಹೆಲನ್ ಮೈಸೂರು ಈ ಗೌರವಕ್ಕೆ ಭಾಜನರಾಗಿದ್ದಾರೆ. ನಟಿ ಗಿರಿಜಾ ಲೋಕೇಶ್ ಅವರು ಸಮಾರೋಪ ಭಾಷಣ ಮಾಡಲಿದ್ದು, ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಹಿರಿಯ ವಕೀಲ ಶ್ರೀರಾಮ ರೆಡ್ಡಿ, ಸಮಾಜ ಸೇವಕ ಬಾಗೇಗೌಡ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಲ್ಲಿ?: ಉದಯಭಾನು ಕಲಾಸಂಘ, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ
ಯಾವಾಗ?: ನ.10-18, ಪ್ರತಿದಿನ ಸಂಜೆ 5.30