Advertisement

ಇಂಧನ ಇಲಾಖೆ ನೇಮಕದಲ್ಲಿ ಕನ್ನಡ ಕಡ್ಡಾಯ

12:51 AM Feb 07, 2022 | Team Udayavani |

ಬೆಂಗಳೂರು: ಇಂಧನ ಇಲಾಖೆಯ ವಿವಿಧ ಹುದ್ದೆಗಳ ನೇಮಕಕ್ಕೆ ಇನ್ನು ಮುಂದೆ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾದ್ದು ಕಡ್ಡಾಯ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಅಪ್ಟಿಟ್ಯೂಡ್‌ ಪರೀಕ್ಷೆಗೂ ಮುನ್ನ ಕಡ್ಡಾಯವಾಗಿ ಕನ್ನಡ ಪರೀಕ್ಷೆ ಬರೆಯಬೇಕು ಹಾಗೂ ಅದರಲ್ಲಿ ಕನಿಷ್ಠ 50 ಅಂಕವನ್ನೂ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಅನ್ಯಾಯ ಸರಿಪಡಿಸುವ ಕಸರತ್ತು
2015ರಲ್ಲಿ ವಿವಿಧ ಹುದ್ದೆ ಗಳ ನೇಮಕದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಅನ್ಯರಾಜ್ಯಗಳ ಅಭ್ಯರ್ಥಿಗಳಿಗೆ ಅನುಕೂಲವಾಗಿತ್ತು. ಪರಿಣಾಮ 60ಕ್ಕೂ ಹೆಚ್ಚು ಹು¨ªೆಗಳು ಅನ್ಯರಾಜ್ಯದವರ ಪಾಲಾಗಿತ್ತು. ಈ ಬಾರಿ ಅಂತಹ ಲೋಪಗಳು ಆಗಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ನೀಡಿದ ಸೂಚನೆಯಂತೆ ಕೆಪಿಟಿಸಿಎಲ್‌ ನೇಮಕದಲ್ಲಿ ಕನ್ನಡ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.

ಗ್ರೂಪ್‌ “ಬಿ’ ಮತ್ತು “ಸಿ’ ಹುದ್ದೆಗಳಿಗಿರುವ ನಿಬಂಧನೆಗಳು
01.ಎಸೆಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊ ಮಾತರ ಗತಿಗಳಲ್ಲಿ ಕನ್ನಡ ವ್ಯಾಸಂಗ ಮಾಡಿದ್ದರೆ, “ಕಡ್ಡಾಯ ಕನ್ನಡ ಪರೀಕ್ಷೆ’ ಇರುವುದಿಲ್ಲ.
02. ಉಳಿದವರು ಅಪ್ಟಿಟ್ಯೂಡ್‌ ಪರೀಕ್ಷೆಗೆಮುನ್ನ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದು ಉತ್ತೀರ್ಣರಾಗಬೇಕು. ಆದರೆ ಈ ಅಂಕವನ್ನು ಹುದ್ದೆಗಳ ಆಯ್ಕೆಗೆ ಪರಿಗಣಿಸುವುದಿಲ್ಲ.
03. ಕಡ್ಡಾಯ ಕನ್ನಡ ಪರೀಕ್ಷೆ ಎಸೆಸೆಲ್ಸಿ ಪ್ರಥಮ ಭಾಷೆ ಮಟ್ಟದ್ದಾಗಿರುತ್ತದೆ.
ಒಂದಕ್ಕಿಂತ ಹೆಚ್ಚು ಹುದ್ದೆ ಗೆ ಅರ್ಜಿ ಸಲ್ಲಿಸಿದವರು ಕಡ್ಡಾಯ ಕನ್ನಡದ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಕು.

ಯಾವ ಹುದ್ದೆಗಳು?
– ಸಹಾಯಕ ಎಂಜಿನಿಯರ್‌(ವಿದ್ಯುತ್‌): 393, ಕಲ್ಯಾಣ ಕರ್ನಾಟಕ: 106
– ಸಹಾಯಕ ಎಂಜಿನಿಯರ್‌(ಸಿವಿಲ್‌ ): 21, ಕಲ್ಯಾಣ ಕರ್ನಾಟಕ: 7
– ಕಿರಿಯ ಎಂಜಿನಿಯರ್‌ (ವಿದ್ಯುತ್‌ ): 477, ಕಲ್ಯಾಣ ಕರ್ನಾಟಕ: 82
– ಕಿರಿಯ ಎಂಜಿನಿಯರ್‌ (ಸಿವಿಲ್‌ ): 21, ಕಲ್ಯಾಣ ಕರ್ನಾಟಕ : 8
– ಕಿರಿಯ ಸಹಾಯಕ: 357, ಕಲ್ಯಾಣ ಕರ್ನಾಟಕ: 3

Advertisement

ನೇಮಕ ಎಲ್ಲೆಲ್ಲಿ?
ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ವ್ಯಾಪ್ತಿಯ ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾ ನಿಸಿದ್ದು, ಫೆ. 1ರಂದು ಅಧಿಸೂಚನೆ ಹೊರ ಡಿಸಲಾಗಿದೆ. ಫೆ. 7ರಿಂದ ಮಾ. 7ರ ತನಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next