ಕಲ್ಯಾಣ್: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ವತಿ ಯಿಂದ ಕರ್ನಾಟಕ ರಾಜ್ಯೋತ್ಸವ, ಸಂಸ್ಥೆಯ 17ನೇ ವಾರ್ಷಿಕೋತ್ಸವ ನ. 4ರಂದು ಕಲ್ಯಾಣ್ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು.
ಸಾಹಿತಿ, ಸಮಾಜ ಸೇವಕ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಂಬಯಿ ಮಹಾನಗರದ ಹೆಸರಾಂತ ಅರುಣೋದಯ ಕಲಾನಿಕೇತನದ ಮುಖ್ಯಸ್ಥೆ ಡಾ| ಮೀನಾಕ್ಷಿ ರಾಜು ಶ್ರೀಯಾನ್ ದಂಪತಿ ಹಾಗೂ ಹಿರಿಯ ಪತ್ರಕರ್ತ ನ್ಯಾಯವಾದಿ, ಕರ್ನಾಟಕ ಸಂಘ ಡೊಂಬಿವಲಿ ಮಾಜಿ ಅಧ್ಯಕ್ಷ ವಸಂತ ಕಲಕೋಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಹಿರಿಯ ಸದಸ್ಯ ಮಂಜುನಾಥ ರೈ ಮತ್ತು ಗಂಗಾಧರ ಜಮ್ಮ ದಂಪತಿ ಯನ್ನು ಸಮ್ಮಾನಿಸಲಾಯಿತು.
ಅತಿಥಿಗಳಾಗಿ ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ, ಚಿಣ್ಣರ ಬಿಂಬದ ಪ್ರಕಾಶ್ ಭಂಡಾರಿ, ಮೆಹ್ತಾ ಪದವಿ ಕಾಲೇಜಿನ ಉಪಾಧ್ಯಕ್ಷ ವಿ.ಎನ್. ಹೆಗ್ಡೆ, ಮೈಸೂರು ಅಸೋಸಿಯೇಶನ್ ಮುಂಬಯಿ ಟ್ರಸ್ಟಿ ಕೆ. ಮಂಜುನಾಥಯ್ಯ, ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಇದರ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ, ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಂ.ಬಿ. ಬಿರಾದಾರ, ಪ್ರಕಾಶ್ ನಾಯ್ಕ ಹೊಸಕೋಟಿ, ರವೀಂದ್ರ ಶೆಟ್ಟಿ, ಪ್ರಕಾಶ್ ಗೋರೆ, ಪ್ರಕಾಶ್ ಹೆಗ್ಡೆ ಕುಂಠಿನಿ, ಶಾಲಿನಿ ಶೆಟ್ಟಿ ಅಜೆಕಾರು ಉಪಸ್ಥಿತರಿದ್ದರು.
ಪತ್ರಕರ್ತರ ಪ್ರಕಾಶ್ ಹೆಗ್ಡೆ ಕುಂಠಿನಿ ಮತ್ತು ಪ್ರಕಾಶ್ ನಾಯ್ಕ ಅವರು ಅತಿಥಿಗಳನ್ನು ಪರಿಚಯಿಸಿದರು. ಶಾಲಿನಿ ಶೆಟ್ಟಿ ಅಜೆಕಾರು ಸಮ್ಮಾನ ಪತ್ರ ವಾಚಿಸಿದರು.
ಸುಜಾತಾ ಶೆಟ್ಟಿ ಪ್ರಾರ್ಥನೆಗೈದರು. ಶಾಲಿನಿ ಶೆಟ್ಟಿ ಅಜೆಕಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.