Advertisement

ಎಂಟ್ರಿ ಕೊಡಲು ‘ಪದ್ಮಾವತಿ’ ರೆಡಿ

03:59 PM Jun 14, 2022 | Team Udayavani |

“ರಾವ್‌ ಅಂಡ್‌ ರಾವ್‌ ಸಿನಿಮಾಸ್‌’ ಲಾಂಛನದಲ್ಲಿ ದಾಮೋದರ್‌ ಪಾರಗೆ ಮತ್ತು ನಾಮದೇವ ಭಟ್ಟರ್‌ ಸೇರಿ ನಿರ್ಮಿಸಿರುವ “ಪದ್ಮಾವತಿ’ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

Advertisement

ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ “ಯು’ ಪ್ರಮಾಣ ಪತ್ರ ಸಿಕ್ಕಿದೆ. ವಿಕ್ರಮ್‌ ಆರ್ಯ ಹಾಗೂ ದಾಮೋದರ್‌ ಪಾರಗೆ ಈ ಚಿತ್ರದ ಇಬ್ಬರು ನಾಯಕರಾಗಿ ಅಭಿನಯಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು, ಒಪ್ಪುಗಳನ್ನು ಹೇಳುವಂತಹ ಕಥಾಹಂದರವಿದ್ದು, ಇದರ ಜೊತೆಗೆ ಒಂದು ಪಕ್ಕಾ ಲವ್‌ ಸ್ಟೋರಿಯನ್ನೂ ಕೂಡ ಈ ಚಿತ್ರ ಒಳಗೊಂಡಿದೆ. ಜೊತೆಗೆ ಇದೊಂದು ಮಹಿಳಾ ಪ್ರಧಾನ ಚಿತ್ರವೂ ಆಗಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರವನ್ನು ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ರಿಲೀಸ್‌ ಮಾಡುವುದಾಗಿ ನಿರ್ಮಾಪಕ ವಿಕ್ರಮ್‌ ಆರ್ಯ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಜುಲೈ 8ಕ್ಕೆ ಪೃಥ್ವಿ ಅಂಬಾರ್‌ ನಟನೆಯ ‘ಶುಗರ್‌ಲೆಸ್‌’ ರಿಲೀಸ್‌

ಮಿಥುನ್‌ ಚಂದ್ರಶೇಖರ್‌ ಅವರ ಕಥೆ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶೋಯಬ್‌ ಅಹಮ್ಮದ್‌ ಅವರ ಛಾಯಾಗ್ರಹಣವಿದೆ. ಚಿತ್ರದ 8 ಹಾಡುಗಳಿಗ ದಿನೇಶ್‌ ಕುಮಾರ್‌ ಸಂಗೀತವಿದೆ. ವಿಕ್ರಮ್‌ ಆರ್ಯ, ಸಾಕ್ಷಿ ಮೇಘನಾ, ದಾಮೋದರ್‌ ಪಾರಗೆ, ರಾಘವ ಕಲಾಲ್, ನಭಿರಸುಲ್, ಸುರೇಶ್‌ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next