Advertisement

ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಕಿರಣ್‌ ಕುಮಾರ್‌

03:20 AM Nov 29, 2018 | Team Udayavani |

ಸೋಮವಾರಪೇಟೆ: ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ, ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಹಾಗೂ ಬರಹಗಾರ ಕಿರಣ್‌ಕುಮಾರ್‌ ಮಾತನಾಡಿ, ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕೆಲವರು ಕನ್ನಡ ಪರ ಸಂಘಟನೆಗಳ ಹೆಸರಿನಲ್ಲಿ ಸ್ವಾರ್ಥಕ್ಕಾಗಿ ಹೋರಾಟಗಳನ್ನು ನಡೆಸುತ್ತಿದ್ದು, ಇದರಿಂದ ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರಕ್ಕೆ ಯಾವದೇ ಲಾಭವಿಲ್ಲ ಎಂದರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್‌.ಡಿ. ವಿಜೇತ್‌ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕ ನ.ಲ. ವಿಜಯ, ವಲಯ ಅರಣ್ಯಾಧಿಕಾರಿ ಲಕ್ಷೀಕಾಂತ್‌, ವಕೀಲರಾದ ಹೆಚ್‌.ಸಿ. ನಾಗೇಶ್‌ ಅವರುಗಳು ಉಪಸ್ಥಿತರಿದ್ದರು. ಕಸಾಪ ಪದಾಧಿಕಾರಿಗಳಾದ ಪ್ರೇಮಾ, ಜವರಪ್ಪ, ಎ.ಪಿ. ವೀರರಾಜು ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಾಧಕರಿಗೆ ಸಮ್ಮಾನ
ಚಿತ್ರಕಲೆ ಮತ್ತು ಕ್ರೀಡಾ ಕ್ಷೇತ್ರದಿಂದ ಎಸ್‌. ಕೃತಿಕ, ಪತ್ರಿಕೋದ್ಯಮ ಕ್ಷೇತ್ರದಿಂದ ಶಕ್ತಿ ಸೋಮವಾರಪೇಟೆ ವರದಿಗಾರ ವಿಜಯ್‌ ಹಾನಗಲ್‌, ಜಾನಪದ ಕಲೆ-ಎಸ್‌.ಪಿ. ಕುಟ್ಟಪ್ಪ, ಶಿಲ್ಪಕಲೆ ಮಾದರಿ ರಚನೆ-ಬಿ. ದಯಾನಂದ, ಶಿಕ್ಷಣ- ಡಿ.ಪಿ. ಸತೀಶ್‌, ಸಾಹಿತ್ಯ- ಡಿ.ಎಂ. ಕುಮಾರಪ್ಪ, ವಿಶೇಷ ಕಲಾವಿದ-ಎಸ್‌.ಆರ್‌. ಶ್ರೀನಿವಾಸ್‌, ಸಮಾಜಸೇವೆ ಕ್ಷೇತ್ರದಿಂದ ಆಶಾ ಸತೀಶ್‌ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬಹುಮಾನ ವಿತರಣೆ


ಸಾಹಿತ್ಯ ಕೃಷಿಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಮಾಪ್ರಾ ಶಾಲೆ, ಸೋಮವಾರಪೇಟೆಯ ಜೆ.ಕೆ. ರಮೇಶ್‌ ಪ್ರಥಮ, ಓಎಲ್‌ವಿ ಶಾಲೆಯ ಚಿರಂತ್‌ ದ್ವಿತೀಯ, ಪ್ರೌಢಶಾಲೆ ವಿಭಾಗದಲ್ಲಿ ಜ್ಞಾನವಿಕಾಸ ಶಾಲೆಯ ಎಂ. ವೀಕ್ಷಿತ್‌ (ಪ್ರ) ಕುವೆಂಪು ಶಾಲೆಯ ಭವ್ಯ (ದ್ವಿ) ಕುಶಾಲನಗರ ಫಾತಿಮಾ ಶಾಲೆಯ ಆಸ್ಟನ್‌ ಗೋನ್ಸಾಲ್ವೇಸ್‌ ಮತ್ತು ಕುವೆಂಪು ಶಾಲೆಯ ಪೂರ್ವಿ ಅವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.

ಆಶುಭಾಷಣ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಸಂತ ಜೋಸೆಫ‌ರ ಶಾಲೆಯ ಬಿ.ಎಂ. ದರ್ಶನ್‌ (ಪ್ರ) ಫಾತಿಮ ಕಾನ್ವೆಂಟ್‌ನ ಸೇವಂತ್‌ ಪ್ರಭುದ್‌ (ದ್ವಿ) ಮೊರಾರ್ಜಿ ಶಾಲೆಯ ನವ್ಯ ಜಿ.ಕೆ.  (ತೃ), ಕಾಲೇಜು ವಿಭಾಗದಲ್ಲಿ ಸೋಮವಾರಪೇಟೆ ಸ.ಪ.ಪೂ. ಕಾಲೇಜಿನ ಅಶ್ವಿ‌ತ್‌ ಆಳ್ವ (ಪ್ರ), ಜೆಸ್ಸಿ (ದ್ವಿ) ತೇಜಸ್ವಿನಿ (ತೃ) ಅವರುಗಳಿಗೆ ಬಹುಮಾನ ನೀಡಲಾಯಿತು. ಭಾವಗೀತೆ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೂಡಿಗೆ ಜ್ಞಾನೋದಯ ಶಾಲೆಯ ಐಶ್ವರ್ಯ (ಪ್ರ) ಸೋಮವಾರಪೇಟೆ ಸಾಂದೀಪನಿ ಶಾಲೆಯ ಸಮೀಕ್ಷ (ದ್ವಿ) ಓಎಲ್‌ವಿ ಶಾಲೆಯ ಮಾನ್ಯ ಎಂ. ಶೆಟ್ಟಿ (ತೃ) 5 ರಿಂದ 7ನೇ ತರಗತಿ ವಿಭಾಗದಲ್ಲಿ ಸಾಂದೀಪನಿಯ ಸುಧೀಕ್ಷ (ಪ್ರ) ಸುಧನ್ವ (ದ್ವಿ) ಆ]ತ (ತೃ), 8 ರಿಂದ 10ನೇ ತರಗತಿ ವಿಭಾಗದಲ್ಲಿ ಜ್ಞಾನೋದಯ ಶಾಲೆಯ ರಕ್ಷಿತ್‌ (ಪ್ರ) ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯ ಅನುಷ (ದ್ವಿ) ಜ್ಞಾನವಿಕಾಸ ಶಾಲೆಯ ಭೂಮಿಕ ಮತ್ತು ಸಂತ ಜೋಸೆಫ‌ರ ಶಾಲೆಯ ದರ್ಶನ್‌ ಅವರುಗಳು ತೃತೀಯ ಬಹುಮಾನ ಪಡೆದರು.

Advertisement

ಚಿತ್ರಕಲೆ ಸ್ಪರ್ಧೆಯ 1 ರಿಂದ 4ನೇ ತರಗತಿ ವಿಭಾಗದಲ್ಲಿ ಜ್ಞಾನವಿಕಾಸ ಶಾಲೆಯ ಮೇಘನ (ಪ್ರ) ಓಎಲ್‌ವಿ ಶಾಲೆಯ ಮೋದಕ್‌ (ದ್ವಿ),  5 ರಿಂದ 7ನೇ ತರಗತಿ ವಿಭಾಗದಲ್ಲಿ ಸಾಂದೀಪನಿಯ ತನು ಮಹೇಶ್‌ (ಪ್ರ) ಜ್ಞಾನವಿಕಾಸ ಶಾಲೆಯ ಮೇಘನ ಗೌಡ (ದ್ವಿ) ಸಾಂದೀಪನಿಯ ವಿನ್ಯಾಸ್‌ (ತೃ), 8 ರಿಂದ 10ನೇ ತರಗತಿ ವಿಭಾಗದಲ್ಲಿ ಸಾಂದೀಪನಿಯ ನಯನ (ಪ್ರ) ಸಂತ ಜೋಸೆಫ‌ರ ತರುಣ್‌ (ದ್ವಿ) ಸಾಂದೀಪನಿಯ ಮಾನ್ಯ ನಂದ (ತೃ) ಅವರುಗಳು ಬಹುಮಾನ ಸ್ವೀಕರಿಸಿದರು.

ಸಾರ್ವಜನಿಕ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಮೋಹನ್‌ದಾಸ್‌ (ಪ್ರ) ಎಸ್‌. ಪುರುಷೋತ್ತಮ್‌ (ದ್ವಿ) ಸೌಮ್ಯ ಶೆಟ್ಟಿ (ತೃ), ಕಸಾಪ ಸದಸ್ಯರಿಗೆ ಆಯೋಜಿಸಲಾಗಿದ್ದ ಬಸ್‌ ಹುಡುಕಾಟ ಸ್ಪರ್ಧೆಯಲ್ಲಿ ಕೆ.ಪಿ. ದಿನೇಶ್‌ (ಪ್ರ) ಸಿ.ಕೆ. ಮಲ್ಲಪ್ಪ (ದ್ವಿ) ಎಸ್‌.ಡಿ. ವಿಜೇತ್‌ (ತೃ), ಬಿಂದಿಗೆಯೊಳಗೆ ನಿಂಬೆ ಹಣ್ಣು ಹಾಕುವ ಸ್ಪರ್ಧೆಯಲ್ಲಿ ಎಸ್‌.ಎಂ. ಆಶಾ (ಪ್ರ) ನ.ಲ. ವಿಜಯ (ದ್ವಿ) ಎಸ್‌.ಡಿ. ವಿಜೇತ್‌ (ತೃ) ಅವರುಗಳು ಬಹುಮಾನ ಪಡೆದರು.

ಯುವ ಸಾಹಿತ್ಯ ಸೌರಭ
ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‌ ಸಾಗರ್‌ ಮಾತನಾಡಿ, ಕಸಾಪದಿಂದ ಯುವ ಜನಾಂಗದಲ್ಲಿ ಸಾಹಿತ್ಯ ಅಭಿರುಚಿ ಮೂಡಿಸುವ ಉದ್ದೇಶದಿಂದ ಯುವ ಸಾಹಿತ್ಯ ಸೌರಭ, ಮಹಿಳಾ ಸಾಹಿತ್ಯ ಸಮ್ಮೇಳನ, ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು. ಕೊಡಗು ಜಿಲ್ಲಾ ಕಸಾಪದಿಂದ ಕನ್ನಡ
ದಲ್ಲೂ ತಾಂತ್ರಿಕ, ವೃತ್ತಿಪರ, ವೈದ್ಯಕೀಯ ವ್ಯಾಸಂಗ, ಸಿಇಟಿ  ಪರೀಕ್ಷೆಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದರು. ಕನ್ನಡ ಭಾಷೆಯ ಉಳಿವಿಗಾಗಿ ಕಸಾಪ ನಡೆಸುವ ಆಂದೋಲನಗಳಿಗೆ ಮುಂದಿನ ದಿನಗಳಲ್ಲಿ ಸದಸ್ಯರೊಂದಿಗೆ ಕನ್ನಡಿಗರು ಕೈಜೋಡಿಸಬೇಕು ಎಂದು ಅಭಿಪ್ರಾಯಿಸಿದರು

Advertisement

Udayavani is now on Telegram. Click here to join our channel and stay updated with the latest news.

Next