Advertisement

ಗ್ರಾಹಕರ ಕೂಟದ ಕನ್ನಡ ಜಾಗೃತಿ ಪಾಠ

12:33 PM Nov 07, 2017 | |

ಕನ್ನಡವನ್ನು ವ್ಯಾವಹಾರಿಕವಾಗಿ ಜೀವಂತವಾಗಿರಿಸುವಲ್ಲಿ ಕನ್ನಡ ಗ್ರಾಹಕರ ಕೂಟದ ಉಪಕಾರ ದೊಡ್ಡದು. ಯಾವುದೇ ಗ್ರಾಹಕ ಒಂದು ವಸ್ತುವನ್ನು ದುಡ್ಡು ಕೊಟ್ಟು ಖರೀದಿಸುತ್ತಾನೆ ಅಂದ್ರೆ, ಆ ಸಂಸ್ಥೆ ಆತನಿಗೆ ಪ್ರಾದೇಶಿಕ ಭಾಷೆಯಲ್ಲಿ ಸೇವೆ ಒದಗಿಸಬೇಕು. ಆದರೆ, ಅನೇಕ ಸಂಸ್ಥೆಗಳು ಹಾಗೆ ಮಾಡುವುದಿಲ್ಲ. ಇಂಥ ವೇಳೆ ಆ ಸಂಸ್ಥೆಗೂ,

Advertisement

ಕನ್ನಡ ಗ್ರಾಹಕನಿಗೂ ಕೊಂಡಿಯಾಗಿ ಕೆಲಸ ಮಾಡುತ್ತಾ, ಸಂಸ್ಥೆಗೆ ಕನ್ನಡದ ಮಾರುಕಟ್ಟೆಯನ್ನು ತಿಳಿಸುತ್ತಾ, ಆದಷ್ಟು ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಕೂಟ ಮಾಡುತ್ತಿದೆ. ಇದರ ಸಂಚಾಲಕರಲ್ಲಿ ಒಬ್ಬರಾದ ಜಯಂತ್‌ ಸಿದ್ಮಲ್ಲಪ್ಪ, ಕನ್ನಡ ಗ್ರಾಹಕ ಸೇವೆಗಾಗಿ ಹಲವು ಮಹತ್ವದ ಹೆಜ್ಜೆ ಇಟ್ಟವರು. ಇವರು ಶಿವಮೊಗ್ಗ ಮೂಲದವರು.

ಎಚ್‌ಡಿಎಫ್ಸಿ, ಸಿಟಿ ಬ್ಯಾಂಕಿನ ಎಟಿಎಂನಲ್ಲಿ ಇಂದೇನಾದರೂ ಕನ್ನಡ ಕಾಣಿಸಿಕೊಳ್ಳುತ್ತಿದೆಯೆಂದಾದರೆ, ಅದು ಇದೇ ಕೂಟದ ಹೋರಾಟದ ಫ‌ಲ. “ಕನ್ನಡದಲ್ಲಿಯೇ ಸೇವೆ ಕೊಡಿ ಎಂದು ಅಭಿಯಾನ ಶುರುಮಾಡಿದಾಗ, ಆ ಸಂಸ್ಥೆಯವರು ಗ್ರಾಹಕ ಸೇವಾ ಕೇಂದ್ರ ತೆರೆದು, ಕನ್ನಡದವರನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ’ ಎನ್ನುತ್ತಾರೆ ಜಯಂತ್‌.

ಕೂಟದ ಈ ಪ್ರಯತ್ನದಿಂದ ಅಮೇಜಾನ್‌.ಇನ್‌ಗೂ ಕನ್ನಡ ಪ್ರವೇಶಿಸಿದೆ. ಇಂಥ ಕನ್ನಡೀಕರಣ ಕೆಲಸಕ್ಕಾಗಿ ನಾಡಿನಾದ್ಯಂತ ಸಹಿ ಚಳವಳಿಗಳೂ ನಡೆಯುತ್ತವೆ. ಜಯಂತ್‌ ಈ ಕೂಟದ ಅಭಿಯಾನವಾಗಿ “ಕಲಿ ಕನ್ನಡ’ವನ್ನು ಆರಂಭಿಸಿದವರು. ಟ್ವಿಟ್ಟರಿನಲ್ಲಿ ನಡೆದ ಈ ಅಭಿಯಾನ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಗೊತ್ತಿದ್ದವರು ನೆರವಾಗುತ್ತಿದ್ದರು. ಅಂದರೆ, ಈ ಕೂಟದಿಂದ ಯಾವುದೇ ತರಗತಿಗಳು ಆಯೋಜಿಸುವುದಿಲ್ಲ.

ಆದರೆ, ಭಾಷೆ ಗೊತ್ತಿಲ್ಲದವರಿಗೆ, ಕನ್ನಡ ತರಗತಿ ಎಲ್ಲಿ ನಡೆಯುತ್ತೆ, ಯಾರು ನಡೆಸುತ್ತಾರೆ ಎನ್ನುವ ಸಂಗತಿಯನ್ನು ಈ ಕೂಟ ತಲುಪಿಸುತ್ತದೆ. “ಅಂಗಡಿಗಳಲ್ಲಿ ಕನ್ನಡ ನುಡಿ’ ಎಂಬ ಫೇಸ್‌ಬುಕ್‌ ಪುಟವನ್ನೂ ತೆರೆಯಲಾಯಿತು. ಅದು ಕೂಡ ಗ್ರಾಹಕರಿಗೆ ಹಲವು ರೀತಿಯಲ್ಲಿ ಉಪಯೋಗವಾಯಿತು. ಈ ಕೂಟದಲ್ಲಿ ಹಲವು ಚಳವಳಿಗಳನ್ನು ಹುಟ್ಟುಹಾಕಿದ ವ್ಯಕ್ತಿಗಳು ಬಹಳಷ್ಟು ಮಂದಿಯಿದ್ದಾರೆ.

Advertisement

* ಕೀರ್ತಿ

Advertisement

Udayavani is now on Telegram. Click here to join our channel and stay updated with the latest news.

Next