Advertisement

ಗಡಿಯಲ್ಲಿ ಕನ್ನಡದ ಜಾಗೃತಿ ಅತ್ಯಗತ್ಯ: ಪಾಟೀಲ

03:16 PM Feb 08, 2022 | Team Udayavani |

ಭಾಲ್ಕಿ: ಗಡಿ ಭಾಗದಲ್ಲಿ ನಿರಂತರ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಗಣೇಶ ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಭಾಟಸಾಂಗವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾಟಸಾಂಗವಿ ಬುದ್ಧ ಬಸವ ಕನಕದಾಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ತನ್ನದೇ ಭವ್ಯ ಪರಂಪರೆ, ಶ್ರೀಮಂತಿಕೆಯಿಂದ ಕೂಡಿದೆ. ಗಡಿಯಲ್ಲಿ ಪ್ರತಿಯೊಬ್ಬರು ಕನ್ನಡದ ಬಗ್ಗೆ ಅಭಿಮಾನ ಹೊಂದಿರಬೇಕು. ಎಲ್ಲರೂ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹಾರ ಮಾಡುವುದರ ಜತೆಗೆ ಮಾತೃ ಭಾಷೆ ಕನ್ನಡ ಮಾತನಾಡುವಂತಾಗಬೇಕು. ಈ ನಿಟ್ಟಿನಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಅಶೋಕ ತಾಂಬೋಳಿ, ಬುದ್ಧ ಬಸವ ಕನಕದಾಸ ಸಂಸ್ಥೆಯ ಅಧ್ಯಕ್ಷ ಕೃಷ್ಣ ಪಾಟೀಲ್‌ ಮಾತನಾಡಿದರು. ಮುಖ್ಯಗುರು ಬಬನ್‌ ಬಿರಾದಾರ್‌, ಪ್ರಮುಖರಾದ ಮಾಧವರಾವ ಪಟವಾರಿ, ದೀಪಕ ಠಮಕೆ, ಗುರುಪ್ರಸಾದ ಮೆಂಟೆ, ಸಂತೋಷ ಟೋಕರೆ, ಬಾಲಾಜಿ ರಜೂರಿ, ಎಸ್‌ಡಿಎಂಸಿ ಅಧ್ಯಕ್ಷ ವಿನೋದ ಭೋಸ್ಲೆ, ಪಾಂಡುರಂಗ ಜಾಧವ, ಕಮಲಾಕರ್‌, ದೇವಾನಂದ, ಸಚಿನ ರೈಪಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next