ಬೆಂಗಳೂರು : ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನಿಗಳ ಅಟ್ಟಹಾಸವನ್ನು ಉದಾಹರಣೆಯನ್ನಾಗಿರಿಸಿಕೊಂಡು ‘ಹಿಂದು ಭಯೋತ್ಪಾದನೆ’ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ನಟಿ ಪ್ರಣಿತಾ ಸುಭಾಷ್ ಆಕ್ರೋಶ ಹೊರಹಾಕಿದ್ದಾರೆ.
”ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಹಿಂಸಾಚಾರವನ್ನು ಉದಾಹರಣೆಯಾಗಿ ನೀಡುತ್ತಾ ‘ಹಿಂದೂ ಭಯೋತ್ಪಾದನೆ’ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. ‘ಹಿಂದು ಭಯೋತ್ಪಾದನೆ’ ಎಂಬ ತಮ್ಮ ಕಲ್ಪನೆಯನ್ನು ಸಾರ್ವಜನಿಕಗೊಳಿಸುವ ಯತ್ನ ಮಾಡುತ್ತಿದ್ದಾರೆ. ಭಾರತ ದೇಶವು ಎಚ್ಚರಿಕೆಯಿಂದರಬೇಕು, ವೈರಿಗಳು ದೇಶದ ಗಡಿಗಳ ಹೊರಗೆ ಮಾತ್ರವೇ ಇಲ್ಲ ದೇಶದ ಒಳಗೂ ಇದ್ದಾರೆ” ಎಂದಿದ್ದಾರೆ ಪ್ರಣಿತಾ.
ಪ್ರಣಿತಾ ಅವರ ಈ ಟ್ವೀಟ್ ಗೆ ಬಹುತೇಕ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಣಿತಾ ಧೈರ್ಯವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ‘ಎಡಪಂಥೀಯರಿಗೆ ತಕ್ಕುದಾದ ಉತ್ತರ ನೀಡಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಮುಸ್ಲಿಂ ಭಯೋತ್ಪಾದನೆ’ ವಿಷಯವನ್ನು ಮರೆಮಾಚಲು ‘ಹಿಂದು ಭಯೋತ್ಪಾದನೆ’ ಪದ ಬಳಸಲಾಗುತ್ತಿದೆ” ಎಂದು ಸಹ ಕೆಲವರು ಪ್ರಣಿತಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಭಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಪ್ರಣಿತಾ ಅವರು ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಪೌಂಡೇಶನ್ ಮೂಲಕ ಸಾಕಷ್ಟು ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸುವ ಅಭಿಯಾನಕ್ಕೆ ಬೆಂಬಲ ನೀಡಿರುವ ಈ ನಟಿ ಕೆಲವು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.