Advertisement

ಕಾಲು ಜಾರಿ ಬಿದ್ದ ಹಿರಿಯ ನಟಿ ಲೀಲಾವತಿ : ಸೊಂಟ ಹಾಗೂ ಕಾಲಿಗೆ ಪೆಟ್ಟು

02:33 PM Aug 08, 2021 | Team Udayavani |

ಬೆಂಗಳೂರು: ಚಂದನವನದ ಹಿರಿಯ ನಟಿ ಲೀಲಾವತಿ ಅಮ್ಮನವರು ಬಿದ್ದು ಗಾಯಮಾಡಿಕೊಂಡಿದ್ದಾರೆ. ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಪೆಟ್ಟು ಆಗಿದೆಯಂತೆ.

Advertisement

ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಲೀಲಾವತಿಯವರು ಜಾರಿ ಬಿದ್ದಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಲ್ಲದೇ ವೈದ್ಯರು ಅವರಿಗೆ ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಲೀಲಾವತಿ ಪುತ್ರ ವಿನೋದ್ ರಾಜ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಲೀಲಾವತಿಯವರು ಬಚ್ಚಲು ಮನೆಗೆ ಹೋದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಾಗಿಲನ್ನು ತೆರೆಯಲಾಗದೇ ಸುಮಾರು ಅರ್ಧ, ಮೂಕ್ಕಾಲು ಗಂಟೆ ಬಿದ್ದು ನರಳಾಡಿದ್ದಾರೆ. ಬಳಿಕ ಕಷ್ಟಪಟ್ಟು ಆದ್ಯಾಗೋ ಬಾಗಿಲು ತೆರೆದು ನಿಧಾನವಾಗಿ ಹೊರ ಬಂದಿದ್ದಾರೆ ಎಂದು ಘಟನೆ ಕುರಿತಂತೆ ವಿನೋದ್ ರಾಜ್ ಮಾಹಿತಿ ನೀಡಿದ್ದಾರೆ.

83 ವರ್ಷ ವಯಸ್ಸಿನ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲಿಯವರೆಗೂ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಣ್ಣಹಚ್ಚಿದ್ದು, ಕೊನೆಯದಾಗಿ ಪುತ್ರ ವಿನೋದ್ ರಾಜ್ ನಟಿಸಿರುವ ಕನ್ನಡದ ಯಾರದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next