Advertisement

ಹೊಸ ಸಿನಿಮಾಗಳ ಮೇಲೆ ‘ಅಪೂರ್ವ’ ನಿರೀಕ್ಷೆ: ಕೈಯಲ್ಲಿ ಸಾಲು ಸಾಲು ಚಿತ್ರಗಳು

08:40 AM May 03, 2021 | Team Udayavani |

“ಅಪೂರ್ವ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಬಿಗ್‌ ಎಂಟ್ರಿ ಪಡೆದುಕೊಂಡ ಅಪೂರ್ವ, ನಾಲ್ಕು ವರ್ಷಗಳಲ್ಲಿ ಸುಮಾರು ಐದಕ್ಕೂ ಹೆಚ್ಚು ಚಿತ್ರಗಳ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ನಂತರ “ವಿಕ್ಟರಿ-2′, “ಕೃಷ್ಣ ಟಾಕೀಸ್‌’ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಇನ್ನೂ ಮೂರು  ಚಿತ್ರಗಳು ಬಿಡುಗಡೆಯಾಗಬೇಕಿದೆ. ಜೊತೆಗೆ “ಪುರುಷೋತ್ತಮ’ ಚಿತ್ರ ದಲ್ಲೂ ಅಪೂರ್ವ ನಾಯ ಕಿಯಗಿ ನಟಿಸುತ್ತಿದ್ದಾರೆ.

Advertisement

“”ಅಪೂರ್ವ’ ನಂತರ ಸಾಕಷ್ಟು ಅವಕಾಶಗಳು ಬಂದುವು. ಆದರೆ, ಬಹುತೇಕ ಹೊಸಬರದು. ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಅವಕಾಶ ಬಂದಿದ್ದು ಸುಳ್ಳಲ್ಲ. ಆದರೆ, ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ಲಾಂಚ್‌ ಆಗಬೇಕೆಂಬ ಆಸೆ ಇದೆ. ಅದರ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದೇನೆ. “ಮೊಡವೆ’, “ಕಾಲಾಪತ್ಥಾರ್‌’ ಸೇರಿದಂತೆ ಇನ್ನೆರಡು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದೇನೆ. ಇನ್ನೂ ಎರಡು ಸಿನಿಮಾಗಳ ಮಾತುಕಥೆ ನಡೆಯುತ್ತದೆ’ ಎನ್ನುತ್ತಾರೆ ಅಪೂರ್ವ.

ಕೆಲವು ನಟಿಯರು ತಮಗೆ ಇಷ್ಟವಾದ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ವಿಚಾರದಲ್ಲಿ ಫ್ರೆಂಡ್ಸ್‌, ಫ್ಯಾಮಿಲಿ … ಹೀಗೆ ಯಾರನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಅದು ಅವರ ಸ್ವತಂತ್ರ ನಿರ್ಧಾರವಾಗಿರುತ್ತದೆ. ಆದರೆ, ಅಪೂರ್ವ ವಿಷಯದಲ್ಲಿ ಇದು ಹಾಗಲ್ಲ. ತನ್ನ ಸಿನಿಮಾ ಕಥೆ ಮತ್ತು ಪಾತ್ರಗಳ ಆಯ್ಕೆ ವಿಚಾರದಲ್ಲಿ ಕುಟುಂಬ ವರ್ಗವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರಂತೆ ಅಪೂರ್ವ.

ಎಲ್ಲರೂ ಒಟ್ಟಿಗೆ ಸೇರಿ ಕಥೆ ಕೇಳಿ, ಎಲ್ಲರ ಸಮ್ಮತದೊಂದಿಗೆ ಕಥೆ ಒಪ್ಪುತ್ತಾರಂತೆ. ಈ ಮೂಲಕ ಫ್ಯಾಮಿಲಿ ನೋಡುವ ಸಿನಿಮಾ ಮಾಡಬೇಕೆಂಬುದು ಅವರ ಇಂಗಿತ. “ನಮ್ಮ ಮನೆಗೆ ಯಾರಾದರೂ ಕಥೆ ಹೇಳಲು ಬಂದರೆ ಎಲ್ಲರೂ ಜೊತೆಯಾಗಿ ಕುಳಿತು ಕಥೆ  ಕೇಳುತ್ತೇವೆ. ನಾನು ಈಗಷ್ಟೇ ಚಿತ್ರರಂಗಕ್ಕೆ ಬಂದವಳು. ಕೆಲವೊಮ್ಮೆ ನನ್ನ ನಿರ್ಧಾರ ಸರಿ ಇಲ್ಲದೇ ಇರಬಹುದು. ಹಾಗಾಗಿ, ಕುಟುಂಬದವರು ಒಟ್ಟಿಗೆ ಇರುತ್ತಾರೆ. ಅವರು ಭಾಗಿಯಾಗುತ್ತಾರೆ’ ಎಂದು ತಮ್ಮ ಕಥೆಯ ಆಯ್ಕೆ ಬಗ್ಗೆ ಹೇಳುತ್ತಾರೆ ಅಪೂರ್ವ.

Advertisement

Udayavani is now on Telegram. Click here to join our channel and stay updated with the latest news.

Next