ಬೆಂಗಳೂರು: ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಅಭಿನಯಗೆ ಹೈಕೋರ್ಟ್ ಏಕಸದಸ್ಯ ಪೀಠವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದರು ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ 2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು. 1998 ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆ ವೇಳೆ ಶ್ರೀನಿವಾಸ್ ಅವರು 80 ಸಾವಿರ ನಗದು, 250 ಗ್ರಾಂ ಚಿನ್ನಭರಣ ಪಡೆದಿದ್ದರು ಎಂದು ಹೇಳಲಾಗಿತ್ತು. ನಂತರ ಮತ್ತೆ ಒಂದು ಲಕ್ಷ ಹಣ ತರುವಂತೆ ಅಭಿನಯ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿತ್ತು ಎಂದು ದೂರು ದಾಖಲಾಗಿತ್ತು.
ಇದನ್ನೂ ಓದಿ:ಜಿ.ಪಂ, ತಾಲೂಕು ಪಂಚಾಯತ್ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು.
ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಲಕ್ಷ್ಮೀದೇವಿ. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ ಅದೇಶ.