Advertisement

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದಾ ರಾವ್ ನಿಧನ

07:11 AM Mar 21, 2019 | |

ಬೆಂಗಳೂರು: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟಿ ಫಣಿಯಮ್ಮ ಖ್ಯಾತಿಯ ಎಲ್.ವಿ ಶಾರದ ರಾವ್ ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಳಿಗ್ಗೆ 7.30 ಸುಮಾರಿಗೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

Advertisement

ವಂಶವೃಕ್ಷ, ಆದಿ ಶಂಕರಾಚಾರ್ಯ, ಫಣಿಯಮ್ಮ ಮುಂತಾದ ಚಿತ್ರಗಳಲ್ಲಿ ಶಾರದಾ ಅವರು ಮನೋಜ್ಞ ಅಭಿನಯ ನೀಡಿದ್ದರು. ವಂಶವೃಕ್ಷ ಚಿತ್ರದ ಅಭಿನಯಕ್ಕಾಗಿ ಎಲ್.ವಿ. ಶಾರದಾ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಫಣಿಯಮ್ಮ ಚಿತ್ರದಲ್ಲಿ ವಿಧವೆಯ ಪಾತ್ರದಲ್ಲಿ ತಲೆ ಬೋಳಿಸಿಕೊಂಡು ಅಭಿನಯಿಸಿದ್ದ ಶಾರದಾ ಅವರು ‘ಫಣಿಯಮ್ಮ’ ಎಂದೇ ಹೆಸರುವಾಸಿಯಾಗಿದ್ದರು. ಕಮರ್ಷಿಯಲ್ ಚಿತ್ರಗಳಿಂದ ದೂರವಿದ್ದು ಕೇವಲ ಅಭಿನಯದ ಮೂಲಕವೇ ಪ್ರಸಿದ್ದಿಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next