Advertisement
ಬ್ರಿಟಿಷರ ಕಾಲದ ಸುಮಾರು 300 ವರ್ಷಗಳ ಇತಿಹಾಸವಿರುವ ಈ ರಸ್ತೆಗೆ ಅಂದು ಡಿಸ್ಟ್ರಿಕ್ಟ್ ರೋಡ್ ಎಂದು ಹೆಸರಿತ್ತು. ಸದ್ಯ ಕಂಕನಾಡಿ ಓಲ್ಡ್ ರೋಡ್ ಎಂದು ಬದಲಾಗಿದೆ. ಇಷ್ಟೊಂದು ಹೆಸರುಗಳಿಸಿರುವ ಈ ಪ್ರದೇಶದ ರಸ್ತೆ ಸದ್ಯ ಕಾಂಕ್ರಿಟ್‌ಮಯವಾದರೂ ಇನ್ನೂ ಕೂಡ ಕೆಲವೊಂದು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದೆ.
ಕಂಕನಾಡಿ ಓಲ್ಡ್ ರೋಡ್‌ನ ಕೊಚ್ಚಿನ್ ಬೇಕರಿ ಪರಿ ಸ ರ ಸೇಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರು ಹರಿಯಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲ. ಇದೇ ಕಾರಣದಿಂದ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆ ಕಾಮಗಾರಿಗೆಂದು ಈ ರಸ್ತೆಯ ಪಕ್ಕದಲ್ಲಿ ಹಾಕಲಾದ ಮಣ್ಣಿನಿಂದ ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದು, ಮಳೆ ಬಂದರೆ ಸಾಕು ವಾಹನಗಳು ಸ್ಕಿಡ್ ಆಗುತ್ತಿದೆ. ಅಲ್ಲದೆ, ಸುತ್ತಮುತ್ತ ವಾಹನಗಳನ್ನು ನಿಲ್ಲಿಸುವುದಂತೂ ಕಷ್ಟ ಸಾಧ್ಯವಾಗಿದೆ. ರಸ್ತೆ ಸ್ವಚ್ಛತೆ ಮಾಡುತ್ತಿಲ್ಲ
ಸ್ಥಳೀಯರು ಹೇಳುವಂತೆ, ‘ಪಾಲಿಕೆಯು ಸುತ್ತಮುತ್ತಲಿನ ಮನೆಯವರಿಂದ ರಸ್ತೆ ಸ್ವಚ್ಛತೆಗೆಂದು ಹಣ ತೆಗೆದುಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಕೆಲವು ದಿನಗಳಿಂದ ರಸ್ತೆ ಸ್ವಚ್ಛತೆ ಮಾಡಲು ಯಾರೂ ಬರುತ್ತಿಲ್ಲ. ಇದೇ ಕಾರಣಕ್ಕೆ ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ಮಣ್ಣಿನಿಂದ ಅಪಾಯ ಕಾದಿದೆ’ ಎನ್ನುತ್ತಾರೆ.
Related Articles
Advertisement
ಪರಿಶೀಲನೆ ನಡೆಸುತ್ತೇನೆಕಂಕನಾಡಿ ಓಲ್ಡ್ ರಸ್ತೆಯಲ್ಲಿ ಮಳೆ ನೀರು ಹರಿಯಲು ತೋಡಿನ ವ್ಯವಸ್ಥೆ ಕಲ್ಪಿಸಿದ್ದೇವೆ. ಆದರೆ ಈ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಬರಲಿಲ್ಲ. ಕೂಡಲೇ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ.
– ಭಾಸ್ಕರ್ ಕೆ.,
ಪಾಲಿಕೆ ಮೇಯರ್