Advertisement

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

05:57 PM Nov 07, 2024 | Team Udayavani |

ಚೆನ್ನೈ: ಕಾಲಿವುಡ್‌ ಚಿತ್ರರಂಗದ ಜನಪ್ರಿಯ ನಟ ಕಂ ರಾಜಕೀಯ ಮುಖಂಡ ನೆಪೋಲಿಯನ್ (Napoleon) ತಮ್ಮ ಕಿರಿಯ ಪುತ್ರನ ಮದುವೆಯನ್ನು ಅದ್ಧೂರಿಯಾಗಿಯೇ ನೆರವೇರಿಸಿದ್ದಾರೆ.

Advertisement

ನಟ ನೆಪೋಲಿಯನ್‌ ಅವರ ಕಿರಿಯ ಪುತ್ರ ಧನೂಷ್ ಅವರಿಗೆ ಬಾಲ್ಯದಿಂದಲೇ ಸ್ನಾಯು ಕ್ಷಯ (Muscular Dystrophy) ಕಾಯಿಲೆ ಇದೆ. ಇದೊಂದು ಅಪರೂಪದ ಕಾಯಿಲೆ ಆಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸಬೇಕಾಗುವ ಸ್ಥಿತಿ ರೋಗಿಗೆ ಇರುತ್ತದೆ.

ಹೀಗಾಗಿ ನೆಪೋಲಿಯನ್‌ ಅವರ ಪುತ್ರ ಧನೂಷ್ ವೀಲ್‌ ಚೇರ್‌ನಲ್ಲೇ ಇದ್ದಾರೆ. ಮಗನ ಈ ಸ್ಥಿತಿಯಿಂದ ನೆಪೋಲಿಯನ್‌ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. 25 ವರ್ಷದ ಧನೂಷ್‌ ಅವರಿಗೆ ಮದುವೆ ಮಾಡಿಸಿಕೊಡಬೇಕೆನ್ನುವ ಕನಸು ನೆಪೋಲಿಯನ್‌ ಅವರಿಗಿತ್ತು. ಆದರೆ ಮಗನ ಆರೋಗ್ಯ ಸ್ಥಿತಿ ಅದಕ್ಕೆ ಅಡ್ಡಿ ಆಗುತ್ತಿತ್ತು.

ಅಂತೂ ಚೆನ್ನೈ ಮೂಲದ ಅಕ್ಷಯ ಎಂಬಾಕೆ ವಿವಾಹವಾಗಲು ಮುಂದೆ ಬಂದಿದ್ದಳು. ನಿಶ್ಚಿತಾರ್ಥಕ್ಕೂ ಧನೂಷ್‌ ಬರಲು ಆಗದ  ಕಾರಣ ವಿಡಿಯೋ ಕಾಲ್‌ನಲ್ಲಿ ನಿಶ್ಚಿತಾರ್ಥ ನೆರವೇರಿತ್ತು.

Advertisement

ಸೋಶಿಯಲ್‌ ಮೀಡಿಯಾದಲ್ಲಿ ಈ ನಿಶ್ಚಿತಾರ್ಥದ ಬಗ್ಗೆ ಚರ್ಚೆ ನಡೆದಿತ್ತು. ಯುವತಿ ಧನೂಷ್‌ ಅವರನ್ನು ದುಡ್ಡಿಗೋಸ್ಕರ ವಿವಾಹವಾಗಲು ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಮದುವೆಯೂ ಮುನ್ನ ಭಾವಿ ಪತ್ನಿ ಜತೆ ಧನೂಷ್‌ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು. ಗುರುವಾರ (ನ.7ರಂದು) ಹಿಂದೂ ಸಂಪ್ರದಾಯದಂತೆ ಜಪಾನಿನಲ್ಲಿ ಧನೂಷ್-‌ ಅಕ್ಷಯ ವಿವಾಹ ನೆರವೇರಿದೆ.

ಪತ್ನಿಯ ಕತ್ತಿಗೆ ತಾಳಿ ಹಾಕಲು ಕೂಡ ಸರಿಯಾಗಿ ಆಗದೆ ಇದ್ದಾಗ, ಧನೂಷ್ ತಾಯಿ ಮಗನ ಕೈಹಿಡಿದು ತಾಳಿಯನ್ನು ಹಾಕಿಸಿದ್ದಾರೆ. ಮಗನ ಆರೋಗ್ಯ ಸ್ಥಿತಿಯಿಂದ ಆತನಿಗೆ ಮದುವೆಯೇ ಆಗಲ್ಲ ಎಂದುಕೊಂಡಿದ್ದ ನೆಪೋಲಿಯನ್‌ ಪುತ್ರನ ಮದುವೆ ಸಂಭ್ರಮವನ್ನು ನೋಡಿ ಕಣ್ಣೀರಿಟ್ಟಿದ್ದಾರೆ.

ಈ ವಿವಾಹ ಸಮಾರಂಭಕ್ಕೆ ಕಾಲಿವುಡ್‌ ಕಲಾವಿದರ ದಂಡೇ ಹರಿದು ಬಂದಿದೆ. ಕಾರ್ತಿ, ಶರತ್‌ಕುಮಾರ್, ರಾಧಿಕಾ, ಮೀನಾ, ಖುಷ್ಬು, ಸುಹಾಸಿನಿ, ಕಲಾ ಮಾಸ್ಟರ್ ಮುಂತಾದವರು ಬಂದು ನವ ಜೋಡಿಗೆ ಶುಭಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next