Advertisement

The Kashmir Files; ಬಾಲಿವುಡ್ ನ ಪಾಪಗಳೆಲ್ಲಾ ತೊಳೆದು ಹೋಗಿದೆ: ನಟಿ ಕಂಗನಾ ರಣಾವತ್

12:58 PM Mar 15, 2022 | Team Udayavani |

ಮುಂಬಯಿ: ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆ ಕಾಣುತ್ತಿದ್ದು, ಏತನ್ಮಧ್ಯೆ ನಟಿ ಕಂಗನಾ ರಣಾವತ್ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ನಂತರ, ಬಾಲಿವುಡ್ ನ ಪಾಪಗಳೆಲ್ಲಾ ತೊಳೆದು ಹೋಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದನ್ನೂ ಓದಿ:ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತ ಪ್ರತಿಕ್ರಿಯೆ ವಿಡಿಯೋದಲ್ಲಿ, ಕಾಶ್ಮೀರ ಫೈಲ್ಸ್ ಸಿನಿಮಾ ತಂಡ ಕೆಲಸಕ್ಕೆ ಅಭಿನಂದನೆಗಳು. ಎಲ್ಲರೂ ಒಟ್ಟು ಸೇರಿ ಬಾಲಿವುಡ್ ನ ಪಾಪಗಳನ್ನು ತೊಳೆಯುವಂತೆ ಮಾಡಿದ್ದಾರೆ. ಇದರೊಂದಿಗೆ ಬಾಲಿವುಡ್ ಮಾಡಿದ ಪಾಪಗಳೆಲ್ಲಾ ಕಳೆದು ಹೋದಂತಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಎಷ್ಟೊಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಇಂತಹ ಉತ್ತಮವಾದ ಸಿನಿಮಾದ ಬಗ್ಗೆ ಸಿನಿಮಾದ ಬಗ್ಗೆ ಸಿನಿಮಾ ರಂಗ ಪ್ರಚಾರ ಕೊಡೊದನ್ನು ಬಿಟ್ಟು ಇಲಿಗಳಂತೆ ಬಿಲಗಳಲ್ಲಿ ಅಡಗಿಕೊಂಡಿದ್ದಾರೆ. ಅವರು ನಿಷ್ಪ್ರಯೋಜಕ ಸಿನಿಮಾಗಳ ಪ್ರಚಾರದಲ್ಲಿ ತೊಡಗಿರುತ್ತಾರೆ. ಬಾಲಿವುಡ್ ಸ್ಟಾರ್ ನಟ, ನಟಿಯರು ಇಂತಹ ಉತ್ತಮ ಸಿನಿಮಾದ ಬಗ್ಗೆ ಪ್ರಚಾರ ಮಾಡಬೇಕು ಎಂದು ನಟಿ ಕಂಗನಾ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಇಡೀ ದೇಶದಲ್ಲಿಯೇ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋವಿಡ್ ನಂತರ ಅತೀ ಹೆಚ್ಚು ಸಿನಿಮಾ ಮಂದಿರಗಳಲ್ಲಿ ತೆರೆಕಂಡಿದೆ. ಆದರೂ ಬಾಲಿವುಡ್ ನ ಖ್ಯಾತ ನಟ, ನಟಿಯರು ಸಿನಿಮಾದ ಬಗ್ಗೆ ಮೌನ ತಾಳಿದ್ದಾರೆ ಎಂದು ಕಂಗನಾ ರಣಾವತ್ ಟ್ವೀಟ್ ನಲ್ಲಿ ಆರೋಪಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next