Advertisement

ನಾನು ನಿಜವಾದ ದೇಶ ಭಕ್ತೆ, ಹರಾಮ್ ಕೋರ್ ಅಲ್ಲ : ಮಹಾರಾಷ್ಟ್ರ ಸರ್ಕಾರವನ್ನು ಕುಟುಕಿದ ಕಂಗನಾ

12:10 PM Mar 22, 2021 | Team Udayavani |

ಮುಂಬೈ : ಬಾಲವುಡ್ ನಟಿ ಕಂಗನಾ ರನೌತ್ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರದ ಮೇಲೆ ಸಾಮಾಜಿಕ ಜಾಲತಾನದ ಮೂಲಕ ವಾಗ್ದಾಳಿ ಮಾಡಿದ್ದಾರೆ.

Advertisement

ಪ್ರತಿ ತಿಂಗಳು 100 ಕೋಟಿ ವಸೂಲಿ ಮಾಡುವಂತೆ ಮಹಾರಾಷ್ಟ್ರದ ಗೃಹ ಸಚಿವ ದೇಶ್ ಮುಖ್ ಸೂಚಿಸಿದ್ದರು ಎಂಬ ನಿರ್ಗಮಿತ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಸ್ಫೋಟಕ ಹೇಳಿಕೆ ಮಹಾ ರಾಷ್ಟ್ರದ ರಾಜಕಾರನವನ್ನು ತಲ್ಲಣಗೊಳಿಸಿದ್ದ ಪ್ರಕರಣವನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕಾರ ತೆಗೆದುಕೊಳ್ಳುವಂತೆ ಎತ್ತಿದ್ದಾರೆ.

ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಕುಸಿತ, 14,700ಕ್ಕೆ ಕುಸಿದ ನಿಫ್ಟಿ

ಸುದ್ದಿ ತುಣುಕೊಂದನ್ನು ಉಲ್ಲೇಖಿಸಿ, ಟ್ವೀಟ್ ಮಾಡಿದ ಕಂಗನಾ, “ಮಹಾರಾಷ್ಟ್ರ ಸರ್ಕಾರದ ಕೆಟ್ಟ ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡಿದಾಗ, ನಿಂದನೆ, ಬೆದರಿಕೆ ಟೀಕೆಯನ್ನು ನಾನು ಎದುರಿಸಬೇಕಾಯಿತು. ನಾನು ಪ್ರತಿಕಾರವನ್ನು ತೀರಿಸಿದೆ. ಅವರು ಅಕ್ರಮವಾಗಿ ನನ್ನ ಮನೆಯನ್ನು ನೆಲಸಮಗೊಳಿಸಿದಾಗ, ಕೆಲವರು ಹುರಿದುಂಬಿಸಿದರು, ಕೆಲವರು ಅದನ್ನು ಸಂಭ್ರಮಿಸಿದರು.”

“ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗಗೊಳ್ಳುತ್ತದೆ. ಇಂದು ನಾನು ಸಮರ್ಥನೆಯನ್ನು ಹೊಂದಿದ್ದೇನೆ. ಆದ್ದರಿಂದ ಇದು ನನ್ನ ಧೈರ್ಯವನ್ನು ಸಾಬೀತುಪಡಿಸಿದೆ. ನನಗೆ ಮತ್ತು ನನ್ನ ಕುಟುಂಬದ ಹೊಟ್ಟೆ ತುಂಬಿಸುತ್ತಿರುವ ಭೂಮಿಯ ಮೇಲಿನ ನಿಷ್ಠೆ ಮತ್ತು ಪ್ರೀತಿ ರಜಪೂತಾನ್ ರಕ್ತದಲ್ಲಿ ಹರಿಯುತ್ತಿದೆ. ನಾನು ನಿಜವಾದ ದೇಶ ಭಕ್ತೆ, ಹರಾಮ್ ಕೋರ್ ಅಲ್ಲ  #MahaVasooliAghadi #AnilDeshmukh #ParambirSingh,” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

Advertisement

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೃಹನ್‌ ನಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಕ್ರಮ ನಿರ್ಮಾಣವನ್ನು ಉಲ್ಲೇಖಿಸಿ ಬಾಂದ್ರಾದಲ್ಲಿರುವ ಕಂಗನಾ ಕಚೇರಿಯ ಕೆಲವು ಭಾಗಗಳನ್ನು ನೆಲಸಮ ಮಾಡಿತ್ತು. ಸೆಪ್ಟೆಂಬರ್ 9 ರಂದು ಬಾಂಬೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಿದ ನಂತರ ನೆಲಸಮಗೊಳಿಸುವ ಕಾರ್ಯವನ್ನು ಮಧ್ಯದಲ್ಲಿ ನಿಲ್ಲಿಸಲಾಗಿತ್ತು.

ಕಂಗನಾ ಇತ್ತೀಚೆಗೆ ತನ್ನ ಬಾಂದ್ರಾ ಕಚೇರಿಗೆ ಸಭೆಯ ಉದ್ದೇಶದಿಂದ ಭೇಟಿ ನೀಡಿದ್ದು, ಅದರ ಸ್ಥಿತಿಯನ್ನು ನೋಡಲು ಮತ್ತೊಮ್ಮೆ ಆಘಾತವಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ವ್ಯಕ್ತಪಡಿಸಿದ್ದಾರೆ.

ಓದಿ :    ಜಾತ್ರೆಯಿಂದ ಬರುತ್ತಿದ್ದವನಿಗೆ ಎದುರಾಯಿತು ಮೃತ್ಯು: ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next