Advertisement

ಕಠಿನ ಸವಾಲು: ವಿಲಿಯಮ್ಸನ್‌

06:30 AM Oct 22, 2017 | Team Udayavani |

ಮುಂಬಯಿ: ಭಾರತವನ್ನು ಅವರದೇ ನೆಲದಲ್ಲಿ ಎದುರಿಸುವುದು ನಿಜಕ್ಕೂ ಕಠಿನ ಸವಾಲು ಎಂದಿದ್ದಾರೆ ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌. 

Advertisement

ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.”ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ತವರಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ತಂಡ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡುವುದು ಅನಿವಾರ್ಯ. ಕಳೆದ ಸಲ ನಮ್ಮ ಆಟ ಶ್ರೇಷ್ಠವಲ್ಲದಿದ್ದರೂ ಉತ್ತಮ ಮಟ್ಟದಲ್ಲೇ ಇತ್ತು. ಈ ಬಾರಿ ಅದಕ್ಕಿಂತಲೂ ಮಿಗಿಲಾದ ಪ್ರದರ್ಶನ ನೀಡುವುದು ಮುಖ್ಯ’ ಎಂದು ವಿಲಿಯಮ್ಸನ್‌ ಹೇಳಿದರು.

ಕಳೆದ ವರ್ಷ ಭಾರತಕ್ಕೆ ಬಂದಾಗ ನ್ಯೂಜಿಲ್ಯಾಂಡ್‌ ಏಕದಿನ ಸರಣಿಯನ್ನು 3-2 ಅಂತರದಿಂದ ಕಳೆದುಕೊಂಡಿತ್ತು. ವಿಶಾಖಪಟ್ಟಣದ ಸರಣಿ ನಿರ್ಣಾಯಕ ಪಂದ್ಯವನ್ನು ಕಿವೀಸ್‌ 190 ರನ್ನುಗಳಿಂದ ಸೋತದ್ದನ್ನು ವಿಲಿಯಮ್ಸನ್‌ ನೆನಪಿಸಿಕೊಂಡರು. ಇಂಥ ಫ‌ಲಿತಾಂಶ ಮರುಕಳಿಸಬಾರದು ಎಂದರು.

“ಗಪ್ಟಿಲ್‌-ಮುನ್ರೊ ನಮ್ಮ ಆರಂಭಿಕರು. ಇಬ್ಬರೂ ಬೀಸು ಹೊಡೆತದ ಬ್ಯಾಟ್ಸ್‌ಮನ್‌ಗಳು. ಲ್ಯಾಥಂ ಮಧ್ಯಮ ಕ್ರಮಾಂಕದಲ್ಲಿ ಬರಲಿದ್ದಾರೆ’ ಎಂದೂ ಕಿವೀಸ್‌ ಕಪ್ತಾನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next