Advertisement
ಕಂದಾವರ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ದ್ವಿತೀಯ ಹಂತದ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮ ಸಭೆಯು ಬುಧವಾರ ಗ್ರಾಮ ಪಂಚಾಯತ್ ಸಭಾಭವನದಲ್ಲಿನಡೆಯಿತು. ಮಂಗಳೂರು ಅಕ್ಷರ ದಾಸೋಹ ಇಲಾಖೆಯ ಜೀವನ್ ಅವರು ನೋಡಲ್ ಅಧಿಕಾರಿಯಾಗಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳ ಭೇಟಿ ಸಂದರ್ಭ ಜೆಸಿಂತಾ ಹಾಗೂ ಜೇಮ್ಸ್ ಡಿ’ಸೋಜಾ ಅವರು ಕೆಲಸ ಮಾಡದೇ ಇದ್ದರೂ ಅವರ ಖಾತೆಗೆ ತಲಾ 3,540 ರೂ. ಹಣ ಬಂದಿದೆ. ಪ್ಲೊರೀನ್ ಡಿ’ಸೋಜಾ ಅವರು ನಿಧನ ಹೊಂದಿ 2 ವರ್ಷಗಳಾಗಿವೆ. ಜೈಸನ್ ಡಿ’ಸೋಜಾ ವಿದೇಶದಲ್ಲಿದ್ದಾರೆ ಅವರ ಖಾತೆಗೂ ಹಣ ಜಮೆಯಾಗಿದೆ. ಸೆಲಿನ್ ಲೋಬೋ ಅವರು ಕೆಲಸ ಮಾಡದೇ ಬೇರೆಯವರಿಗೆ ಹಣ ತೆಗೆಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ ಇದನ್ನು ಕೂಡ ವಸೂಲಾತಿಗೆ ಬರೆದಿದ್ದಾನೆ ಎಂದು ಪವಿತ್ರಾ ತಿಳಿಸಿದರು. ಕೊಳಂಬೆ ಗ್ರಾಮದ ಕಾಲು ಸಂಕ ಕಾಮಗಾರಿಯಲ್ಲಿ ಇಬ್ಬರು ಮಹಿಳೆಯರು ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ
ಆದರೂ ಹಣ ಪಾವತಿಯಾಗಿದೆ. ಒಟ್ಟು ವಸೂಲಾತಿಗೆ 24,308 ರೂ. ಬರೆಯಲಾಗಿದೆ ಎಂದರು.
Related Articles
Advertisement
ನಿಧನ ಹಾಗೂ ವಿದೇಶದಲ್ಲಿದ್ದವರ ಖಾತೆಗೆ ಹಣ ವರ್ಗಾವಣೆ ಆದ ಬಗ್ಗೆ ಭಾರೀ ಚರ್ಚೆಯಾಯಿತು. ಜೈಸನ್ ಇತ್ತೀಚಿಗೆವಿದೇಶಕ್ಕೆ ಹೋಗಿದ್ದಾರೆ. ಮನೆಯವರ ಹೆಸರಲ್ಲಿ ಅವರು ಕೆಲಸ ಮಾಡಿದ್ದಾರೆ. ಮನೆಯವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದು
ಗ್ರಾ.ಪಂ. ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಹೇಳಿದರು. ಕಾರ್ಯಕ್ಕೆ ಬಂಧು ನೇಮಿಸಿದರೂ ಆ ಕಾರ್ಯಕ್ಕೆ ಯಾರೂ ಬರುವುದಿಲ್ಲ. ವಸೂಲಾತಿಗೆ ಬರೆಯುವುದರಿಂದ ಬರುವವರೂ ಇಲ್ಲದಂತಾಗುತ್ತದೆ ಎಂದು ಪಿಡಿಒ ರೋಹಿಣಿ ತಿಳಿಸಿದರು. ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿ ಉಷಾರಾಣಿ ಯೋಜನೆಯ ಕಾಮಗಾರಿಯ ವಿವರ ನೀಡಿ, ಒಟ್ಟು 671 ಉದ್ಯೋಗ ಚೀಟಿಯಲ್ಲಿ 486 ಸಕ್ರಿಯವಾಗಿದ್ದು, ಒಟ್ಟು 33 ಕಾಮಗಾರಿಯಲ್ಲಿ 31 ಗ್ರಾಮ ಪಂಚಾಯತ್, 2 ತೋಟಗಾರಿಕೆಗೆ ಸಂಬಂಧಪಟ್ಟದ್ದಾಗಿದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಪಾಧ್ಯಕ್ಷ ದೇವೇಂದ್ರ, ಯೋಜನೆಯ ಎಂಜಿನಿಯರ್ ರೇಷ್ಮಾ, ಗ್ರಾಮ ಸಂಪನ್ಮೂಲ ವ್ಯಕ್ತಿ ಮಂಗಳಾಶ್ರೀ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ನಿರೂಪಿಸಿದರು. ನರೇಗಾ ಬೇಡ
ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಯಾದರೂ ಹಣ ಬಿಡುಗಡೆಯಾಗುತ್ತಿಲ್ಲ. ವಿಶೇಷ ಗ್ರಾಮ ಸಭೆ ಕರೆದು ಈ ಯೋಜನೆ ನಮಗೆ ಅಗತ್ಯವಿಲ್ಲ ಎಂದು ನಿರ್ಣಯ ಮಾಡುತ್ತೇವೆ ಎಂದು ಗ್ರಾ.ಪಂ. ಸದಸ್ಯ ಶಿವಶಂಕರ್
ಆರೋಪಿಸಿದರು. ಇದಕ್ಕೆ ಉತ್ತರಿಸಿದ ನೋಡೆಲ್ ಅಧಿಕಾರಿ ಜೀವನ್, ಲೋಪದೋಷಗಳಿಲ್ಲದೆ ಕಾಮಗಾರಿ ಮಾಡಬೇಕಾಗಿದೆ. ವಿದೇಶದಲ್ಲಿ ರೊಬೋಟ್‌ಗಳನ್ನು ಅಳವಡಿಸಲಾಗುತ್ತದೆ. ಹಾಗಾಗಿ ಅಲ್ಲಿ ಆಮಿಷಕ್ಕೊಳಗಾಗದೆ
ಕಾರ್ಯಗಳು ಸಾಗುತ್ತವೆ. ನರೇಗಾ ಯೋಜನೆ ತಿರಸ್ಕರಿಸುವ ಅಧಿಕಾರ ಯಾವ ಪಂಚಾಯತ್‌ಗೂ ಇಲ್ಲ ಎಂದರು.