Advertisement

ಕಂಚನಾಳ ಬ್ರಿಡ್ಜ್ ಕಂ ಬ್ಯಾರೇಜ್‌ ಅಡಿಗಲ್ಲು

01:07 PM Jan 25, 2022 | Team Udayavani |

ಕಾಳಗಿ: ತಾಲೂಕಿನ ಕಂಚನಾಳ ಗ್ರಾಮದಲ್ಲಿ 2021-22ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆ ಅಡಿ ಸುಮಾರು 3.31ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್‌ ಕಾಮಗಾರಿಗೆ ಶಾಸಕ ಡಾ| ಅವಿನಾಶ ಜಾಧವ ಅಡಿಗಲ್ಲು ನೆರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ಕಂಚನಾಳ ಗ್ರಾಮದ ಜನರ ಇಪ್ಪತ್ತು ವರ್ಷಗಳ ಕನಸು ಇಂದು ನನಸಾಗಿದ್ದು, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣದಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಇದರಿಂದ ಸುಮಾರು 110 ಹೆಕ್ಟೇರ್‌ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುತ್ತದೆ. ಅಂರ್ತಜಲ ಮಟ್ಟವು ಹೆಚ್ಚಳವಾಗುತ್ತದೆ ಎಂದರು.

ಮಳೆಗಾಲ ಸಮಯದಲ್ಲಿ ಎಷ್ಟೇ ಹಳ್ಳ ತುಂಬಿ ಹರಿದರೂ ಕೂಡ ಗ್ರಾಮಸ್ಥರು ಸೇತುವೆ ಮೂಲಕ ದಾಟಿ ಹೋಗಬಹುದು. ಹಿಂದೆ ಪಟ್ಟಿರುವ ಕಷ್ಟಗಳೆಲ್ಲ ಈಗ ಪರಿಹಾರವಾಗಲಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಪಡೆದು ಮಳೆಗಾಲ ಪ್ರಾರಂಭಗೊಳ್ಳುವುದರೊಳಗೆ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದದರು.

ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಶಾಸಕರ ಪರಿಶ್ರಮದಿಂದ ಇಂದು ಕಂಚಾನಾಳ ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣವಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗುವುದರ ಜೊತೆಗೆ ಸುಮಾರು 200 ರೈತರಿಗೆ ನೀರಾವರಿ ವ್ಯವಸಾಯಕ್ಕೆ ಉಪಯೋಗವಾಗಲಿದೆ ಎಂದರು.

ಚಿಂಚೋಳಿ ಮತಕ್ಷೇತ್ರದಲ್ಲಿ ನೀರಿನ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಂಚನಾಳ ಗ್ರಾಮದಲ್ಲಿ 3 ಕೋಟಿ ಹಾಗೂ ಕನಕಪೂರ ಗ್ರಾಮದಲ್ಲಿ 5 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

Advertisement

ರಟಕಲ್‌ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ತೇಜಮ್ಮ ಆಳಂದ, ಉಪಾಧ್ಯಕ್ಷ ನಾಗರಾಜ ಹಂದ್ರೋಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೊಡ, ಮಾಜಿ ಗ್ರಾಪಂ ಉಪಾಧ್ಯಕ್ಷೆ ರೇಣುಕಾ ಬಿರೆದಾರ, ಶಿವರಾಜ ಪಾಟೀಲ ಗೊಣಗಿ, ಎಸಿ ಉಮೇಶ ಚವ್ಹಾಣ, ಪ್ರಶಾಂತ ಪಾಟೀಲ, ಸಂತೋಷ ಗುತ್ತೇದಾರ, ರಾಜು ಜಾಧವ, ಸಿದ್ದು ಬಿರೆದಾರ, ರೇವಣಸಿದ್ದ ಬಡಾ, ವಿಜಯಕುಮಾರ ಚೆಂಗಟಿ, ಪ್ರಶಾಂತ ಕದಮ, ರಮೇಶ ಕಿಟ್ಟದ, ಸಂತೋಷ ಜಾಧವ, ಗಣೇಶ ಸಿಂಗಶೆಟ್ಟಿ, ಸಣ್ಣನೀರಾವರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಶರಣಪ್ಪ ಕೇಶ್ವಾರ ಇದ್ದರು. ಮಹೇಶ ಪಾಟೀಲ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next