Advertisement

ನೇಣು ಬಿಗಿದ ಸ್ಥಿತಿಯಲ್ಲಿ ‘ಕಾಂಚನಾ-3’ ನಟಿ ಶವ ಪತ್ತೆ

03:44 PM Aug 23, 2021 | Team Udayavani |

ಪಣಜಿ: ರಷ್ಯಾ ಮೂಲದ ರೂಪದರ್ಶಿ ಹಾಗೂ ಚಿತ್ರ ನಟಿ ಅಲೆಕ್ಸಾಂಡ್ರಾ ಜಾವು ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಶುಕ್ರವಾರ (ಆ.22) ಗೋವಾದಲ್ಲಿರುವ ಆಕೆಯ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತ ವಾಗಿದೆ.

ಈ ನಟಿ ಕಾಲಿವುಡ್‍ನಲ್ಲಿ ಸೂಪರ್ ಡೂಪರ್ ಹಿಟ್ ಪಡೆದಿದ್ದ ಕಾಂಚನಾ-3 ಸಿನಿಮಾದಲ್ಲಿ ನಟಿಸಿದ್ದರು. ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಲೆಕ್ಸಾಂಡ್ರಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ನೆರೆಹೊರೆ ಮನೆಯವರು ಕೆಲವು ದಿನಗಳ ಹಿಂದೆ ಅಲೆಕ್ಸಾಂಡ್ರಾ ಬಾಯ್ ಫ್ರೆಂಡ್ ಅವರ ಮನೆಯಿಂದ ಹೊರಬಂದಿದ್ದನ್ನು ನೋಡಿದೇವು. ಅಂದಿನಿಂದ ಅಲೆಕ್ಸಾಂಡ್ರಾ ಬಹಳ ಖಿನ್ನತೆಯಲ್ಲಿದ್ದರು ಮತ್ತು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸದ್ಯ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.

ಅಲೆಕ್ಸಾಂಡ್ರಾ ಮೂಲತಃ ರಷ್ಯಾದವರಾಗಿದ್ದು, ಅವರ ಕುಟುಂಬಸ್ಥರು ರಷ್ಯಾದಲ್ಲಿರುವುದರಿಂದ ಮಾಹಿತಿ ನೀಡಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ನಡೆಸಲು ಆರಂಭಿಸಿದ್ದಾರೆ.

Advertisement

ಕಾಲಿವುಡ್ ನಟ ರಾಘವ್ ಲಾರೆನ್ಸ್‌ಗೆ ಜೋಡಿಯಾಗಿ ಅಲೆಕ್ಸಾಂಡ್ರಾ ಕಾಂಚನಾ-3 ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಕಾಲಿವುಡ್‍ನಲ್ಲಿ ಯಶಸ್ಸು ಕೂಡ ಕಂಡಿತ್ತು.

ಮಾನಸಿಕ ಖಿನ್ನತೆ ?

ಅಲೆಕ್ಸಾಂಡ್ರಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಕೆಲದಿನಗಳ ಹಿಂದೆ ಆಕೆಯ ಭಾಯ್ ಫ್ರೆಂಡ್ ಬ್ರೇಕಪ್ ಮಾಡಿಕೊಂಡಿದ್ದ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next