Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ 533ನೇ ಜಯಂತಿಯಲ್ಲಿ ಮಾತನಾಡಿದ ಅವರು, ತಾರತಮ್ಯ, ಜಾತೀಯತೆ ಎಲ್ಲೆಡೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನಕದಾಸರದ್ದು ಆದರ್ಶ ವ್ಯಕ್ತಿತ್ವವಾಗಿದೆ. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಬಡಿದೆಚ್ಚರಿಸಿದ ಕನಕದಾಸರು ಇಂದಿಗೂ ಅನುಕರಣೀಯರಾಗಿದ್ದಾರೆ ಎಂದು ಸ್ಮರಿಸಿದರು.
Related Articles
Advertisement
ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲಿ ಮನೆಮಾಡಿದ್ದ ಮೌಡ್ಯತೆ. ಕಂದಾಚಾರ, ಅಂಕುಡೊಂಕುಗಳನ್ನು ತಿದ್ದಿದ ಬಸವಣ್ಣನವರು, ಶರಣರ ಪರಂಪರೆಯನ್ನು ಕನಕದಾಸರು ಮಂದುವರೆಸಿದ್ದರು ಎಂದರೆ ತಪ್ಪಾಗಲಾರದು. ಕನಕದಾಸರು ಸಂತರಷ್ಟೆ ಅಲ್ಲ,ಅವರು ಸಮಾಜ ಹಾಗೂ ವ್ಯಕ್ತಿಯ ನಡುವಿನ ಸಮನ್ವಯ ಕೊಂಡಿಯಾಗಿದ್ದಾರೆ. ಸಮಾಜವನ್ನುಎದುರು ಹಾಕಿಕೊಳ್ಳದೇ ಅದನ್ನು ತಿದ್ದುವ ಕಾರ್ಯಮಾಡಿದಕನಕದಾಸರು ಹೊಸ ಹೊಸ ವಿಚಾರಧಾರೆಗಳತ್ತ ಜನರನ್ನುಕೊಂಡೊಯ್ದರು ಎಂದರು.
ಪುಟ್ಟರಾಜ ಗವಾಯಿಯವರ ಶಿಷ್ಯ ಹಾಗೂ ದೀಪಾ ಅಂಧ ಮಕ್ಕಳ ಶಾಲೆಯ ಸಂಗೀತ ಶಿಕ್ಷಕ ಏಕನಾಥ್ ಅವರು ನಡೆಸಿಕೊಟ್ಟ ಕನಕದಾಸರ ಕೀರ್ತನೆ ಗಳ ಗಾಯನ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದವು. ಜಿಪಂ ಸದಸ್ಯ ಕೆರೆಹಳ್ಳಿ ನವೀನ್,ಜಿ.ಪಂ. ಸಿಇಒ ಹರ್ಷಲ್ ಭೊಯರ್ ನಾರಾಯಣ ರಾವ್, ಎಡೀಸಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಕೆ. ಗಿರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಇತರರು ಹಾಜರಿದ್ದರು.
ದಂಡನಾಯಕರಾಗಿದ್ದ ಕನಕದಾಸರಿಂದ ಭಕ್ತಮಾರ್ಗ ಆಯ್ಕೆ :
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಕುಲಗಾಣ ಶಾಂತಮೂರ್ತಿ ಮಾತನಾಡಿ, ದೇಶದಲ್ಲಿ ಆದರ್ಶವನ್ನು ಗುರಿಯಾಗಿಸಿಕೊಂಡ ಸಾಕಷ್ಟು ಮಂದಿ ಸಂತರು, ಮಹಾವ್ಯಕ್ತಿಗಳು ಆಹಿ ಹೋಗಿದ್ದಾರೆ. ದಂಡನಾಯಕರಾಗಿದ್ದಕನಕದಾಸರು ಯುದ್ದವೊಂದರ ಸಾವು-ನೋವುಕಂಡು ಅಧಿಕಾರ ತ್ಯಜಿಸಿ ಜೀವನಮುಕ್ತಿಗೆ ಭಕ್ತಿಮಾರ್ಗವನ್ನೆ ಸೂಕ್ತ ದಾರಿಯಾಗಿ ಕಂಡುಕೊಂಡರು. ತಮ್ಮ ಸರಳಕೀರ್ತನೆಗಳಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿದರು ಎಂದು ತಿಳಿಸಿದರು.