Advertisement

ಭತ್ತ ಕಟಾವಿಗೆ ಹೆಚ್ಚಿನ ಹಣ ಆಕರಿಸಿದರೆ ಕ್ರಮ: ರೇಣುಕಾ

06:00 PM Apr 22, 2020 | Naveen |

ಕಂಪ್ಲಿ: ತಾಲೂಕಿನಲ್ಲಿ ಭತ್ತದ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ ರೂ. 2200ಗಳನ್ನು ನಿಗದಿಪಡಿಸಿದ್ದು ಇದಕ್ಕಿಂತ ಅಧಿಕ ಹಣ ಪಡೆದರೆ ಅಂತವರ ವಿರುದ್ಧ
ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಹಶೀಲ್ದಾರ್‌ ಎಂ. ರೇಣುಕಾ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕಿನ ಭತ್ತ ಕಟಾವು ಯಂತ್ರಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ನಿಗಧಿ
ಪಡಿಸಿದಂತೆಯೇ ಭತ್ತದ ಕಟಾವು ಮಾಡಬೇಕು. ಹೆಚ್ಚಿನ ಬಾಡಿಗೆಗೆ ಆಗ್ರಹಿಸಿಬಾರದು. ಭತ್ತದ ಕೊಯ್ಲು ಯಂತ್ರದ ಬಾಡಿಗೆಯನ್ನು ಅಧಿಕವಾಗಿ ಪಡೆಯಲಾಗುತ್ತಿದೆ ಎನ್ನುವ ರೈತರ ದೂರಿನ ಮೇರೆಗೆ ಸಭೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಹಣಕ್ಕಾಗಿ ರೈತರನ್ನು ಪೀಡಿಸಬಾರದು. ಮಧ್ಯವರ್ತಿಗಳಿಗೆ ಮಾಲೀಕರು ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.

ಸಿಪಿಐ ಡಿ. ಹುಲುಗಪ್ಪ, ಕೃಷಿ ಚಟುವಟಿಕೆಗೆ ಪೊಲೀಸರಿಂದ ತೊಂದರೆ ಆಗುವುದಿಲ್ಲ, ಆದರೆ ಇದೇ ನೆಪದಲ್ಲಿ ಪದೇ ಪದೇ ರಸ್ತೆ ಮೇಲೆ ಓಡಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾವುದು ಎಂದರು. ಪುರಸಭೆ ಮುಖ್ಯಾಧಿ ಕಾರಿ ರಮೇಶ್‌ ಬಡಿಗೇರ್‌, ಭತ್ತ ಕಟಾವು ಯಂತ್ರಗಳ ಮಾಲೀಕರಾದ ರಾಜಶೇಖರರೆಡ್ಡಿ, ರಮೇಶ, ಗೋವಿಂದರೆಡ್ಡಿ, ಗೋಪಾಲ್‌, ಖಾಜಾವಲಿ, ನಾರಾಯಣಸ್ವಾಮಿ, ವೆಂಕಟೇಶ್‌, ತಿಪ್ಪೇಸ್ವಾಮಿ, ರಾಮಾಂಜಿನೇಯಲು ವೆಂಕಟೇಶ್ವರರಾವು, ವಾಸು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next