Advertisement

ಕಂಬಳ ಚಿತ್ರ ರಚನೆ

11:17 AM Dec 27, 2017 | |

ಸುರತ್ಕಲ್‌: ಸುರತ್ಕಲ್‌ ಪೇಟೆಯ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಫ್ಲೈ ಓವರ್‌ ಕಂಬಗಳಲ್ಲಿ ಭಿತ್ತಿಚಿತ್ರ ಬಿಡಿಸುವ ಚಿತ್ರ ಚಿತ್ತಾರ ಯೋಜನೆಗೆ ಚಾಲನೆ ನೀಡಲಾಯಿತು.

Advertisement

ಶಾಸಕ ಮೊದಿನ್‌ ಬಾವಾ ಉದ್ಘಾಟಿಸಿ ಮಾತನಾಡಿ, ಸುರತ್ಕಲ್‌ ಅಭಿವೃದ್ಧಿಯ ಎಲ್ಲ ಯೋಜನೆಗಳಿಗೆ ಸಹಕಾರ ನೀಡಲು ಸಿದ್ಧ. ಫ್ಲೈ ಓವರ್‌ ಸುಂದರಗೊಳಿಸುವ ಯೋಜನೆಯನ್ನು ಸುಂದರೀಕರಣ ಸಮಿತಿ, ನಾಗರಿಕ ಸಲಹಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವುದು ಇತರರಿಗೆ ಮಾದರಿ ಎಂದರು.

ಕ್ಯಾನ್ಸರ್‌ ಮುಕ್ತ ಅಭಿಯಾನ
ಡಾ| ಎ.ಎ. ಶೆಟ್ಟಿ ಮಾತನಾಡಿ ಸಾಮಾಜಿಕ ಸ್ವಾಸ್ಥ್ಯ ಕಾರ್ಯಕ್ರಮದ ಅಂಗವಾಗಿ ಕ್ಯಾನ್ಸರ್‌ ಮುಕ್ತ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಲಯನ್ಸ್‌ನ ವೈ.ಡಿ. ಸಾಲ್ಯಾನ್‌, ಕೇಶವ ಸಾಲ್ಯಾನ್‌, ಲಯನ್ಸ್‌ ಸಹಾಯಕ ಗವರ್ನರ್‌ ಮೊದಿನ್‌ ಕುಂಜಿ, ರೋಟರಿ ಅಧ್ಯಕ್ಷ
ಡಾ| ಹರಿಕೃಷ್ಣ, ನವೀನ್‌ ಕುಮಾರ್‌, ಜೆ.ಡಿ. ವೀರಪ್ಪ, ಗೋವಿಂದದಾಸ ಕಾಲೇಜು ಆಡಳಿತ ನಿರ್ದೇಶಕ ಪಿ.ಮಧುಸೂದನ್‌ ರಾವ್‌, ರಾಜ್‌ ಮೋಹನ್‌ ರಾವ್‌, ಗಣೇಶ್‌ ಸೋಮಯಾಜಿ, ಪ್ರಸಾದ್‌ ಆರ್ಟ್‌ ಗ್ಯಾಲರಿಯ ಕೋಟಿಪ್ರಸಾದ್‌ ಆಳ್ವ, ಮಂಗಳೂರು ಉತ್ತರ ಸಂಚಾರ ಠಾಣೆ ಪಿ.ಐ. ಮಂಜುನಾಥ, ಅಗರಿ ರಾಘವೇಂದ್ರ ರಾವ್‌, ನಾಗರಿಕ ಸಲಹಾ ಸಮಿತಿಯ ಲೋಕೇಶ್‌, ಸತೀಶ್‌ ಸದಾನಂದ, ಹೊಸಬೆಟ್ಟು ನಾಗರಿಕ ಸಮಿತಿ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಫ್ಲೈ ಓವರ್‌ ಕಂಬಗಳಲ್ಲಿ ಚಿತ್ರ ಬಿಡಿಸಲಿರುವ ಸ್ಪರ್ಶ ಕಲಾತಂಡದ ವಿನೋದ್‌, ಸಂಘ ಸಂಸ್ಥೆಗಳ ಪ್ರತಿನಿಗಳು ಉಪಸ್ಥಿತರಿದ್ದರು. ಪ್ರೊ| ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಜಾಗೃತಿ ಸಂದೇಶ
ಫ್ಲೈ ಓವರ್‌ ಕಂಬಗಳಲ್ಲಿ ಜಾಗೃತಿ ಸಂದೇಶ, ಯಕ್ಷಗಾನ, ಕಂಬಳ ಇತ್ಯಾದಿ ತುಳುನಾಡಿನ ಕಲಾ ಪ್ರಕಾರಗಳನ್ನು ಚಿತ್ರಗಳ ಮೂಲಕ ಬಿಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಕಲಾ ಪ್ರಕಾರಗಳು ವರ್ಲಿ ಆರ್ಟ್‌ನಲ್ಲಿ ಮೂಡಿಸುವುದು ಯೋಜನೆಯಲ್ಲಿ ಸೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next