Advertisement
ಸ್ಥಳ ಪುರಾಣ ಇಲ್ಲಿನ ಸ್ಥಳಪುರಾಣದಂತೆ ಒಮ್ಮೆ ಶನಿದೇವನ ಕಾಟದಿಂದ ಪಾರಾಗಲು ಪಾರ್ವತಿ ದೇವಿಯು ಭೂಮಿಗಿಳಿದು ಬಂದು, ಮೈಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ಅಲ್ಲಿಂದ ಈ ದೇವಾಲಯವಿರುವ ಸ್ಥಳಕ್ಕೆ ಬಂದು ಗಣೇಶನಿಗೆ ಪೂಜೆ ಮಾಡಲು ಸಿದ್ಧಳಾಗುತ್ತಾಳೆ. ಆದರೆ ಪೂಜೆಗೆ ನೀರಿರುವುದಿಲ್ಲ. ನೀರಿಗಾಗಿ ಬ್ರಹ್ಮದೇವನನ್ನು ಬೇಡಿಕೊಂಡಾಗ, ಬ್ರಹ್ಮ ದೇವ ಭೂಮಿಗೆ ಬಾಣ ಹೊಡೆದು ನೀರು ಸೃಷ್ಟಿಸಿದನಂತೆ ಎಂಬುದು ಇಲ್ಲಿನ ಇತಿಹಾಸ. ಇದನ್ನೇ ಬ್ರಾಹ್ಮಿàನದಿಯ ಉಗಮ ಸ್ಥಾನವೆಂತಲೂ ಹೇಳಲಾಗುತ್ತದೆ. ಇನ್ನು ಇಲ್ಲಿನ ಗಣೇಶನ ವಿಗ್ರಹ ಬಹಳ ಅಪರೂಪದ್ದಾಗಿದೆ. ಅದು ಹೇಗೆಂದರೆ ಇಲ್ಲಿರುವ, ಗಣೇಶ, ಯೋಗ ಮುದ್ರೆಯಲ್ಲಿ ಕುಳಿತಿರುವುದು. ಈ ರೀತಿಯ ವಿಗ್ರಹ ಬೇರೆಯಾವ ದೇವಸ್ಥಾನದಲ್ಲಿಯೂ ನಮಗೆ ಕಾಣಸಿಗದು. ಹಾಗೇ, ಈ ಗಣೇಶನ ವಿಗ್ರಹದ ಮುಂದೆ ಒಂದು ಕಮಲದ ಆಕಾರವಿರುವ ತೀರ್ಥಕುಂಡವಿದೆ. ಇಲ್ಲಿ ವರ್ಷವಿಡೀ ತೀರ್ಥ ಹರಿಯುತ್ತಲೇ ಇರುತ್ತದೆ. ಹಾಗೆ ಹರಿದ ನೀರು ದೇವಸ್ಥಾನದ ಹೊಂಡದಲ್ಲಿ ಶೇಖರಣೆಯಾಗುತ್ತದೆ. ಈ ತೀರ್ಥವನ್ನು ಕಮಂಡಲ ತೀರ್ಥ ಎನ್ನಲಾಗುತ್ತದೆ. ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ತೀರ್ಥ ಗಣೇಶ ಎಂಬ ಹೆಸರು ಬಂದಿದೆ ಅಂತಲೂ ಹೇಳುತ್ತಾರೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಶನಿದೋಷ ಪರಿಹಾರವಾಗುತ್ತದಂತೆ. ಇಲ್ಲಿನ ತೀರ್ಥ ತೆಗೆದುಕೊಂಡು ಮಕ್ಕಳಿಗೆ ಕುಡಿಸಿದರೆ ಒಳಿತಾಗುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ.
ದೇಶದ ಪ್ರಮುಖ ನಗರಗಳಿಂದ ಚಿಕ್ಕಮಗಳೂರಿಗೆ ಸಾಕಷ್ಟು ಬಸ್, ರೈಲುಗಳ ಸೌಕರ್ಯವಿದೆ. ಬೆಂಗಳೂರಿನಿಂದ ಕೊಪ್ಪ 359ಕಿ.ಮೀ ದೂರದಲ್ಲಿದೆ.
Related Articles
Advertisement