ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಪಕ್ಷ ತೊರೆಯುವ ಸಾಧ್ಯತೆ ದಟ್ಟವಾಗಿದೆ. ಪುತ್ರ ನಕುಲ್ ಜತೆಗೆ ಕಮಲನಾಥ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕಮಲನಾಥ್ ಅವರಿಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ್ದೇ, ಅವರ ಈ ನಿರ್ಧಾರಕ್ಕೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
“ಕಮಲನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ, ಆದರೆ ಕಾಂಗ್ರೆಸ್ ನಾಯಕತ್ವವು ಅವರನ್ನು ತಡೆಯುವ ಯಾವ ಪ್ರಯತ್ನವನ್ನು ಮಾಡುತ್ತಿಲ್ಲ. ರಾಜ್ಯಸಭಾ ಟಿಕೆಟ್ ಗಾಗಿ ಕಮಲನಾಥ್ ಅವರು ಸಕ್ರಿಯವಾಗಿ ಲಾಬಿ ನಡೆಸುವುದರೊಂದಿಗೆ ವಿಷಯಗಳು ಕಗ್ಗಂಟಾಗಿದೆ” ಎಂದು ಕಾಂಗ್ರೆಸ್ ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಹೊಟ್ಟೆಯಲ್ಲಿತ್ತು 9.20 ಕೋಟಿ ರೂ. ಮೌಲ್ಯದ 91 ಕೊಕೇನ್ ಕ್ಯಾಪ್ಸುಲ್!
ಪಕ್ಷ ಬದಲಾವಣೆಗಾಗಿ ಕಮಲನಾಥ್ ಮತ್ತು ಪುತ್ರ ನಕುಲ್ ಅವರು ಬಿಜೆಪಿ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ. ಕಮಲನಾಥ್ ಅವರು ಶನಿವಾರ ದೆಹಲಿಗೆ ಆಗಮಿಸುವ ಮೂಲಕ ಈ ಸುದ್ದಿಗೆ ಬಲ ಬಂದಿದೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್, ಇಂತಹ ಬೆಳವಣಿಗೆ ಏನಾದರು ನಡೆದರೆ ಮೊದಲು ಮಾಧ್ಯಮಕ್ಕೆ ತಿಳಿಸುತ್ತೇನೆ ಎಂದರು.
2019 ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆದ್ದಿತ್ತು. ಛಿಂದವಾಡ ಕ್ಷೇತ್ರದಿಂದ ಪ್ರಬಾವ ಬೀರಿದ್ದ ನಕುಲ್ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಏಕೈಕ ಸಂಸದರಾಗಿದ್ದಾರೆ.