ಚೆನ್ನೈ: 28 ವರ್ಷಗಳ ಹಿಂದೆ ಮೋಡಿ ʼಇಂಡಿಯನ್ʼ(Indian) ಮೂಲಕ ಮೋಡಿ ಮಾಡಿದ್ದ ಶಂಕರ್(Director Shankar) ʼಇಂಡಿಯನ್ -2ʼ(Indian-2) ಮೂಲಕ ಅದೇ ರೀತಿಯ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಖ್ಯಾತ ನಿರ್ದೇಶಕ ಈ ಪ್ರಯೋಗದಲ್ಲಿ ಎಡವಿದ್ದಾರೆ.
1996ರಲ್ಲಿ ಶಂಕರ್ ಕಮಲ್ ಹಾಸನ್(Kamal Hasan) ಅವರೊಂದಿಗೆ ʼಇಂಡಿಯನ್ʼ ಸಿನಿಮಾವನ್ನು ಮಾಡಿದ್ದರು. ಭ್ರಷ್ಟರ ವಿರುದ್ಧ ʼಸೇನಾಪತಿʼಯನ್ನು ಕಾಣಲು ಥಿಯೇಟರ್ ಹೌಸ್ ಫುಲ್ ಆಗಿತ್ತು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಹಾದಿಯ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರನಾಗಿ ಸೇನಾಪತಿ ಹಾಗೂ ಮಗ ಚಂದ್ರಬೋಸ್ ಆಗಿ ಡಬಲ್ ರೋಲ್‌ನಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದರು.
ಅಂದು ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಕಂಡಿತ್ತು. 28ವರ್ಷದ ಬಳಿಕ ಚಿತ್ರದ ಸೀಕ್ವೆಲ್ ತೆರೆಗೆ ಕಂಡಿದೆ. ಆದರೆ ಅಂದು ʼಇಂಡಿಯನ್ʼ ನೋಡಿದವರು ಇಂದು ʼಇಂಡಿಯನ್ -2ʼ ನೋಡಿ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಕಮಲ್ ಹಾಸನ್ ಅವರನ್ನು ಬಿಟ್ಟರೆ ಎದ್ದು ಕಾಣುವ ಒಂದೇ ಒಂದು ಅಂಶವೂ ಇಲ್ಲವೆಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಇಂಡಿಯನ್ -2 ಗಿಂತ ʼಇಂಡಿಯನ್ʼ ಸಿನಿಮಾವನ್ನು 10 ಬಾರಿ ನೋಡಬಹುದು ಎಂದು ಕೆಲವರು ಸೀಕ್ವೆಲ್ ನೋಡಿದ ಬಳಿಕ ಮಾತನಾಡಿಕೊಳ್ಳುತ್ತಿದ್ದಾರೆ.
ʼಇಂಡಿಯನ್ -2ʼ ಥಿಯೇಟರ್ ನಲ್ಲಿರುವಾಗಲೇ ʼಇಂಡಿಯನ್ʼ ನೋಡಲು ಪ್ರೇಕ್ಷಕರು ಬಯಸಿದ್ದಾರೆ. ಇದಕ್ಕಾಗಿ ಓಟಿಟಿಯತ್ತ ಮುಖಮಾಡಿರುವ ಪ್ರೇಕ್ಷಕರು ʼಇಂಡಿಯನ್ʼ ಎಂದು ಸರ್ಚ್ ಮಾಡಿದ್ದಾರೆ.
ನೆಟ್ ಫ್ಲಿಕ್ಸ್ ನಲ್ಲಿ ಭಾನುವಾರದಿಂದಲೇ (ಜು.14ರಿಂದ) ʼಇಂಡಿಯನ್ʼ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ರೀ ಮಾಸ್ಟರ್ಸ್ 4K ವರ್ಷನ್ ನೋಡಲು ಸಿಗಲಿದೆ.
ʼಇಂಡಿಯನ್-2ʼ ಕೆಟ್ಟ ಅಭಿಪ್ರಾಯ ಕೇಳಿ ಬರುತ್ತಿದ್ದು, ಹೀಗಾಗಿ ಪ್ರೇಕ್ಷಕರು ʼಇಂಡಿಯನ್ʼ ನೋಡುವುದೇ ಸೂಕ್ತವೆಂದು ಹೇಳುತ್ತಿದ್ದಾರೆ.
ಇನ್ನು ʼಇಂಡಿಯನ್ -2ʼ ಆಗಸ್ಟ್ 15ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಂಡಿಯನ್ -3 2025ಕ್ಕೆ ರಿಲೀಸ್ ಆಗಲಿದೆ.