Advertisement

‘ತೊಡೆ ತಟ್ಟಿಯಾಗಿದೆ ; ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’: ಕಮಲ್ ಹಾಸನ್

04:22 AM Feb 18, 2019 | Karthik A |

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಶತಪ್ರತಿಶತ ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ಹೇಳಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಅವರು ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ ತಮಿಳುನಾಡಿನ ಮತ್ತೊಬ್ಬ ಮಹಾನ್ ನಟನಿಂದ ಈ ಹೆಳಿಕೆ ಬಂದಿರುವುದು ವಿಶೇಷವಾಗಿದೆ.

Advertisement

‘ರಾಜಕೀಯಕ್ಕೆ ಬರುವ ನಿರೀಕ್ಷೆ ಹುಟ್ಟುಹಾಕಿ, ಜನರೊಂದಿಗೆ ಸಕ್ರಿಯವಾಗಿ ಬೆರೆತು ಅವರಲ್ಲಿ ಭರವಸೆ – ನಿರೀಕ್ಷೆಗಳನ್ನು ಹುಟ್ಟುಹಾಕಿ ಕೊನೇ ಕ್ಷಣದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಆಗ ನೀವು ನಗೆಪಾಟಲಿನ ವ್ಯಕ್ತಿಯಾಗುವುದು ಖಂಡಿತ..’ ಎಂದು ಕಮಲ್ ಹಾಸನ್ ಅವರು ಪರೋಕ್ಷವಾಗಿ ರಜನಿಕಾಂತ್ ಅವರಿಗೆ ಟಾಂಗ್ ನೀಡಿದರು.

ಇದೇ ಸಂದರ್ಭದಲ್ಲಿ ಡಿ.ಎಂ.ಕೆ. ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನೂ ಸಹ ಕಮಲ ಹಾಸನ್ ತರಾಟಗೆ ತೆಗೆದುಕೊಂಡರು. ‘ತಮಿಳುನಾಡಿನಲ್ಲಿ ನಾನು ಗ್ರಾಮಸಭಾ ಮೀಟಿಂಗ್ ಗಳನ್ನು ಮಾಡಲು ಪ್ರಾರಂಭಿಸಿದ ಮೇಲೆ ಉಳಿದವರೂ ಮಾಡುತ್ತಿದ್ದಾರೆ, ಗ್ರಾಮ ಸಭೆ ಎಂಬುದು ಇಂದು ನಿನ್ನೆಯ ವ್ಯವಸ್ಥೆಯಲ್ಲ ಅದು ಹಿಂದಿನಿಂದಲೂ ಇದೆ, ಆದರೆ ಇವರಿಗೆಲ್ಲಾ ಈಗಲಾದರೂ ಗ್ರಾಮಸಭೆಗೆ ಹೋಗಿ ಜನರ ಕಷ್ಟಗಳನ್ನು ಕೆಳಬೇಕು ಎಂದು ಅನ್ನಿಸಿರುವುದು ಸಂತೋಷವೇ ಆದರೆ ನಿಮಗೆ ನಾನು ಮಾಡಿದ ಕೆಲಸವನ್ನೇ ನಕಲು ಮಾಡಲು ನಾಚಿಕೆಯಾಗುವುದಿಲ್ಲವೇ’ ಎಂದು ಕಮಲ್ ಕಿಡಿಕಾರಿದರು.

ನಾನು ಹರಿದ ಅಂಗಿಯನ್ನು ಧರಿಸುವುದಿಲ್ಲ, ಒಂದುವೇಳೆ ವಿಧಾನಸಭೆಯಲ್ಲಿ ನನ್ನ ಅಂಗಿ ಹರಿದರೂ ತಾನು ಹೊಸ ಅಂಗಿಯನ್ನು ತೊಟ್ಟುಕೊಳ್ಳುವುದಾಗಿ ಹೇಳುವ ಮೂಲಕ ನೌಟಂಕಿ ರಾಜಕಾರಣ ಮಾಡುತ್ತಿರುವ ಸ್ಟಾಲಿನ್ ವಿರುದ್ಧ ಕಮಲ್ ವ್ಯಂಗ್ಯವಾಡಿದ್ದಾರೆ. ಕಳೆದ ವರ್ಷ ಫೆಬ್ರವರಿ 17ರಂದು ಕೆ. ಪಳನಿಸ್ವಾಮಿ ಅವರು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕ ಸ್ಟಾಲಿನ್ ಅವರು ವಿಧಾನಸಭೆಗೆ ಹರಿದ ಅಂಗಿಯನ್ನು ತೊಟ್ಟುಕೊಂಡು ಬಂದಿದ್ದರು. ಮುಂಬರುವ ದಿನಗಳಲ್ಲಿ ತಮೀಳುನಾಡಿನಲ್ಲಿ ಈ ರೀತಿಯ ನೌಟಂಕಿ ರಾಜಕಾರಣ ನಡೆಯುವುದಿಲ್ಲ ಎಂಬ ಖಡಕ್ ಸಂದೇಶವನ್ನು ಕಮಲ್ ಅವರು ಈ ಮೂಲಕ ತಮಿಳುನಾಡಿನ ಎಲ್ಲಾ ಪಕ್ಷಗಳಿಗೆ ನೀಡಿದಂತಾಗಿ.

Advertisement

Udayavani is now on Telegram. Click here to join our channel and stay updated with the latest news.

Next