Advertisement

2019ರ ಚುನಾವಣೆಯಲ್ಲಿ ಕಮಲ್‌ ಹಾಸನ್‌ ಪಕ್ಷ ಸ್ಪರ್ಧೆ

06:30 AM Dec 23, 2018 | Team Udayavani |

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ಕಮಲ್‌ ಹಾಸನ್‌ 2019ರ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಪಕ್ಷ “ಮಕ್ಕಳ್‌ ನೀಧಿ ಮಯ್ಯಮ್‌’ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 

Advertisement

“ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಆಡಳಿತ ಮಂಡಳಿ ಹಾಗೂ ಮುಖಂಡರು ನನಗೇ ನೀಡಿದ್ದಾರೆ. ಹೀಗಾಗಿ, 2019ರ ಮಹಾ ಚುನಾವಣೆಯಲ್ಲಿ ನಮ್ಮ ಪಕ್ಷ ತಮಿಳುನಾಡಿನಲ್ಲಿ ಸ್ಪರ್ಧೆಗಿಳಿಯಲಿದೆ’ ಎಂದಿದ್ದಾರೆ. 

ಇದೇ ವರ್ಷ ಫೆ. 12ರಂದು ತಮ್ಮ “ಮಕ್ಕಳ್‌ ನೀಧಿ ಮಯ್ಯಮ್‌’ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲಗಳು ಎದ್ದಿದ್ದವು. ಈಗ ಕಮಲ್‌ ಆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಆದರೆ, ಚುನಾವಣೆಯಲ್ಲಿ ಮಕ್ಕಳ್‌ ನೀಧಿ ಮಯ್ಯಮ್‌ ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಕುರಿತಾಗಿ ಈಗಲೇ ಏನನ್ನೂ ಹೇಳಲಾಗದು. ಸಮಾನ ಮನಸ್ಕರ ಜತೆ ಮೈತ್ರಿ ಸಾಧಿಸುವ ಇರಾದೆಯಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡ ನಂತರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ತಮಿಳುನಾಡಿನಲ್ಲಿ 20 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೆ, ಆಗ ನಮ್ಮ ಪಕ್ಷವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದೂ ಹೇಳಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next