Advertisement

ಫೆ.21ಕ್ಕೆ ಕಮಲ್‌ ಪಕ್ಷದ ಹೆಸರು ಘೋಷಣೆ

10:13 AM Jan 18, 2018 | Team Udayavani |

ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ರಾಜಕೀಯ ಪ್ರವೇಶದ ಬೆನ್ನಲ್ಲೇ, ಬಹುಭಾಷಾ ನಟ ಕಮಲ್‌ಹಾಸನ್‌ ಫೆ.21ಕ್ಕೆ ತಮ್ಮ ನೇತೃತ್ವದ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ತಮಿಳುನಾಡಿನ ರಾಮನಾಥಪುರಂನಲ್ಲಿ ಅದ್ದೂರಿ ಕಾರ್ಯಕ್ರಮದಲ್ಲಿ ಅದನ್ನು ಘೋಷಣೆ ಮಾಡಲಾಗುತ್ತದೆ. ರಾಮನಾಥಪುರಂ ಕಮಲ್‌ರ ಹುಟ್ಟೂರು. ಅಲ್ಲಿಂದಲೇ ಅವರು ಬಹುಹಂತಗಳ ತಮಿಳುನಾಡು ಪ್ರವಾಸವನ್ನೂ ಆಯೋಜಿಸಿದ್ದಾರೆ. 

Advertisement

ಈ ಸಂದರ್ಭದಲ್ಲಿ ಅವರು ಮಧುರೈ, ಡಿಂಡಿಗಲ್‌, ಶಿವಗಂಗೆಗಳಿಗೆ ಭೇಟಿ ನೀಡಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಕಮಲ್‌ಹಾಸನ್‌ “ಯಾತ್ರೆ ಆರಂಭವಾದ ತತ್‌ಕ್ಷಣ ರಾಜಕೀಯ ಪಕ್ಷದ ಹೆಸರು, ಚಿಹ್ನೆ ಬಗ್ಗೆ ವಿವರ, ಉದ್ದೆೇಶವೇನು ಎಂಬುದನ್ನು ಜನರಿಗೆ ತಿಳಿಸಲಿದ್ದೇನೆ. ಅದಕ್ಕೆ ತಕ್ಕ ತಯಾರಿಗಳು ಈಗ ನಡೆದಿವೆ’ ಎಂದಿದ್ದಾರೆ. ಈ ಎಲ್ಲ ಬೆಳವಣಿಗಳ ನಡುವೆ ಬುಧವಾರ ಚೆನ್ನೈಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ವೊಂದರಲ್ಲಿ ಕಮಲ್‌- ರಜನಿ ಭಾಗವಹಿಸಿದ್ದರು. ಮತ್ತೂಂದೆಡೆ, ಆರ್‌.ಕೆ.ನಗರ ಕ್ಷೇತ್ರದ ಶಾಸಕ ಟಿಟಿವಿ ದಿನಕರನ್‌ ಮಾತನಾಡಿ ಸದ್ಯಕ್ಕೆ ಹೊಸ ಪಕ್ಷದ ಸ್ಥಾಪನೆ ಇರಾದೆ ಇಲ್ಲ  ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next