Advertisement

ಮಾರ್ಲಾಡಿ ಕಲ್ಯಾಣಿ ದುರ್ಗಾಪರಮೇಶ್ವರೀ ವರ್ಧಂತಿ, ರಜತ ಮುಖವಾಡ ಸಮರ್ಪಣೆ

12:32 PM Feb 25, 2017 | |

ಸಿದ್ದಾಪುರ: ನಾಡೋಜ ಡಾ| ಜಿ. ಶಂಕರ್‌ ಅವರಿಂದ ಪುನರ್‌ ನಿರ್ಮಾಣಗೊಂಡ ಕಾರೇಬೈಲು ಮಾರ್ಲಾಡಿ ಶ್ರೀ ಸಪರಿವಾರ ಕಲ್ಯಾಣಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಧಂತ್ಯುತ್ಸವ, ರಜತ ಮುಖವಾಡ ಸಮರ್ಪಣೆ, ಮಹಾಪೂಜೆ, ವಾರ್ಷಿಕ ಕೆಂಡಸೇವೆ, ಹಾಲು ಹಬ್ಬವು ವೇ|ಮೂ| ವಿಶ್ವನಾಥ ಕೆದ್ಲಾಯ ಕೋಟೆ ಹಾಗೂ ಅರ್ಚಕ ವೃಂದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು.

Advertisement

ವರ್ಧಂತ್ಯುತ್ಸವ ಅಂಗವಾಗಿ ಬೆಳಗ್ಗೆ ದುರ್ಗಾಹೋಮ, ಪಂಚವಿಶಂತಿ ಕಲಶ ಸ್ಥಾಪನೆ, ಅಖೀಲ ಕಲಾತತ್ವ ಪೂರ್ವಕ ಪ್ರಧಾನ ಹೋಮ, ರಜತ ಮುಖವಾಡ ಸಮರ್ಪಣೆ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಂಗಪೂಜೆ, ಸೇವಾ ಕಾರ್ಯಕ್ರಮಗಳು, ರಾತ್ರಿ ಮಹಾಪೂಜೆ, ಸಂದರ್ಶನ, ಕೆೆಂಡಸೇವೆ, ಪ್ರಸಾದ ವಿತರಣೆ, ಮಾರಿಸೇವೆ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿಗಳು, ತೆಕ್ಕಟ್ಟೆ ಕನ್ನುಕೆರೆ ಓಂಕಾರ ಕಲಾವಿದರ ತಂಡದವರಿಂದ ಎಷ್ಟ್ ಹೇಳೂÅ ಅಸ್ಟೆ ನಾಟಕ ಜರಗಿತು.
ಐರಬೈಲು ಕಿರ್ಲಾಡಿ ವಸಂತಿ ಭುಜಂಗ ಶೆಟ್ಟಿ ಹಾಗೂ ಮನೆಯವರು ರಜತ ಮುಖವಾಡವನ್ನು ದೇವಿಗೆ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next