Advertisement

Hosanagar: ಅಡಗೋಡಿ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ 14-15ನೇ ಶತಮಾನದ್ದು!

04:43 PM Sep 13, 2024 | Esha Prasanna |

ಹೊಸನಗರ: ತಾಲೂಕಿನ ನಗರ ಹೋಬಳಿಯ ಅಡಗೋಡಿಯ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ ಪುರಾತನ ಕಾಲಕ್ಕೆ ಸೇರಿದ್ದೆಂಬ ಅಂಶ ಬೆಳಕಿಗೆ ಬಂದಿದೆ. ಮೂಕಾರ್ತೇಶ್ವರ ದೇಗುಲ ಶಿಥಿಲಗೊಂಡಿದ್ದರಿಂದ ಸಮಿತಿ ಜೀರ್ಣೋದ್ಧಾರಕ್ಕೆ ಮುಂದಾದ್ದರಿಂದ ತಿಳಿದು ಬಂದಿದೆ.

Advertisement

ಶಿವಲಿಂಗ ಕಿತ್ತ ಸಂದರ್ಭದಲ್ಲಿ ಇದರ ವಿನ್ಯಾಸ ವಿಶೇಷವಾಗಿ ಗಮನಸೆಳೆದಿದೆ. ಬಳಿಕ ಕಲ್ಲಿನ ವಿಶೇಷತೆ ಬಗ್ಗೆ ಇತಿಹಾಸ ತಜ್ಞರ ಗಮನಕ್ಕೆ ತಂದಾಗ ಇದು 14- 15 ಶತಮಾನದ ಶಿವಲಿಂಗ ಎಂದು ತಿಳಿದು ಬಂದಿದೆ. ಶಿವಲಿಂಗ ಪೀಠ ಸೇರಿ 4 ಅಡಿ ಎತ್ತರವಿದೆ. 2.5 ಅಡಿಗೂ ಹೆಚ್ಚು ಸುತ್ತಳತೆ ಹೊಂದಿದ್ದು, ಪೀಠದಿಂದ ಶಿವಲಿಂಗ 1.5 ಅಡಿ ಎತ್ತರವಿದೆ.

ಶಿವಲಿಂಗದ ಮಹತ್ವ:
ಕರ್ಣಾಟ ಸಾಮ್ರಾಜ್ಯದ (ವಿಜಯನಗರ) ಕಾಲಮಾನದ ಶಿವಲಿಂಗ (ಪೀಠ ಸಹಿತ) ಇರುವುದು ಗಮನಕ್ಕೆ ಬಂದಿದೆ. ಶಿವಲಿಂಗ ಮತ್ತು ಪೀಠವು 14 -15ನೇ ಶತಮಾನದಾಗಿದ್ದು, ಇತಿಹಾಸ ತಜ್ಞ ಡಾ. ಜಗದೀಶ್ ಅಗಸಿಬಾಗಿಲು, ಪುರಾತತ್ವ ಇಲಾಖೆಯ ಡಾ.ಶೇಜೇಶ್ವರ, ಅಜಯಕುಮಾರ ಶರ್ಮಾ, ಶಿವಲಿಂಗ ಮತ್ತು ಅದರ ಪೀಠದ ಆಧಾರದ ಮೇಲೆ ಇದರ ಕಾಲಮಾನ 14-15ನೇ ಶತಮಾನದ್ದು, ಅಂದರೆ 1301 ರಿಂದ 1500ರ ಕಾಲಘಟ್ಟಕ್ಕೆ ಸೇರಿರಬಹುದು ಎಂದು ಅಂದಾಜಿಸಿದ್ದಾರೆ.

ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ರೂ.20 ಲಕ್ಷ ವೆಚ್ಚ ಅಂದಾಜಿಸಲಾಗಿದೆ. ಲಿಂಗ ಪುರಾತನ ಕಾಲದ ಮಹತ್ವ ಹೊಂದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರಕ್ಕೆ ಮತ್ತಷ್ಟು ಮಹತ್ವ ಬಂದಿದೆ ಎಂದು ಸ್ಥಳೀಯರಾದ ಶುಶ್ರುತ್ ಭಟ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.