Advertisement

Chikkamagaluru: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

06:23 PM Sep 19, 2024 | Team Udayavani |

ಚಿಕ್ಕಮಗಳೂರು: ಇತ್ತೀಚೆಗೆ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾ ಪೀಠದಲ್ಲಿ ಗುರುಗಳ ದರ್ಶನ, ಗುರುಗಳ ಪಾದ ಪೂಜೆ, ಗರ್ಭಗುಡಿ ಪ್ರವೇಶಿಸುವ ಭಕ್ತರು ಸಂಪ್ರದಾಯಿಕ ವಸ್ತ್ರವನ್ನು ತೊಟ್ಟು ಬರುವಂತೆ ಆಡಳಿತ ಮಂಡಳಿ ಆದೇಶಿಸಿದ ಬಳಿಕ ಜಿಲ್ಲೆಯ ಮತ್ತೊಂದು ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಆದಿಶಕ್ತತ್ಯಾತ್ಮಕ ಹೊರನಾಡು ಶ್ರೀ ಅನ್ನಪೂರ್ಣ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತರಲು ಆಡಳಿತ ಮಂಡಳಿ ಮುಂದಾಗಿದೆ.

Advertisement

ಸಂಪ್ರದಾಯಿಕ ಉಡುಪುಗಳನ್ನು ಧರಿಸಿದವರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಆಡಳಿತ ಮಂಡಳಿ ಹೇಳಿದೆ.

ಆಧುನಿಕ ಉಡುಪು ಧರಿಸಿ ದೇವಸ್ಥಾನಕ್ಕೆ ಭಕ್ತರು ಬರುವುದರಿಂದ ಇತರೆ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಜತೆಗೆ ಸಂಪ್ರದಾಯಿಕ ಉಡುಗೆ ಸಂಪ್ರದಾಯ ಕಣ್ಮರೆಯಾಗುತ್ತಿರುವುದರಿಂದ ದೇವಸ್ಥಾನ ಪ್ರವೇಶಕ್ಕೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಗಂಡಸರು ಮತ್ತು ಗಂಡು ಮಕ್ಕಳು ಶಲ್ಯ, ಪ್ಯಾಂಟ್, ಪಂಚೆ ಧರಿಸಿ ಬರಬೇಕು. ಹೆಂಗಸರು ಮತ್ತು ಹೆಣ್ಣು ಮಕ್ಕಳು ಸೀರೆ ಮತ್ತು ಚೂಡಿದಾರ್‌ ಗಳಂತಹ ಸಂಪ್ರದಾಯಿಕ ಉಡುಪು ಧರಿಸಿ ಬಂದರೆ ಮಾತ್ರ ದೇವಸ್ಥಾನ ಒಳಗೆ ಪ್ರವೇಶಿಸಲು ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next