Advertisement

ಕಲ್ಯಾಣ್‌ ಓಂ ಶಕ್ತಿ ಮಹಿಳಾ ಸಂಸ್ಥೆ: ಗ್ರಾಮೀಣರಿಗೆ ನೆರವು

05:51 PM Jun 28, 2019 | Vishnu Das |

ಕಲ್ಯಾಣ್‌: ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್‌ ಇದರ ವತಿಯಿಂದ ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಮುಂದಾಳತ್ವದಲ್ಲಿ ಮೋಹ್‌ವಾಡಿಯ ಮಕ್ಕಳಿಗೆ ಶಾಲಾ ಪರಿಕರಗಳು ಮತ್ತು ಸೈಕಲ್‌ ವಿತರಣೆ ಹಾಗೂ ಗ್ರಾಮೀಣ ಭಾಗದ ಜನತೆಗೆ ಸೇವಾ ಸೌಲಭ್ಯಗಳ ಪೂರೈಕೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

Advertisement

ವಿವಿಧ ಕ್ಷೇತ್ರಗಳಲ್ಲಿ ಸೇವೆಗಳನ್ನು ಮಾಡುತ್ತಾ ಬಂದಿರುವ ಕಲ್ಯಾಣ್‌ ಪರಿಸರದ ಓಂ ಶಕ್ತಿ ಮಹಿಳಾ ಸಂಸ್ಥೆ ವರ್ಷದ ಆದಿಯಲ್ಲಿ ಕಲ್ಯಾಣ್‌ನಿಂದ 60 ಕೀ. ಮೀ. ದೂರದಲ್ಲಿರುವ ಮೋಹ್‌ವಾಡಿಯ ಆದಿವಾಸಿ ಜನಾಂಗದ 50 ಕುಟುಂಬಗಳಿಗೆ ದೈನಂದಿನ ಬದುಕಿಗೆ ಪೂರಕವಾಗಿ, ಅವರಿಗೆ ಹೈನುಗಾರಿಕೆ ಮತ್ತು ಕೋಳಿ ಸಾಕಣೆಯ ಸೌಲಭ್ಯವನ್ನು ಒದಗಿಸಿ ಕೊಟ್ಟು ಮೋಹ್‌ವಾಡಿಯನ್ನು ಒಂದು ಮಾದರಿ ಹಳ್ಳಿಯಾಗಿ ಮಾರ್ಪಡಿ ಸುವಲ್ಲಿ ಯಶಸ್ವಿಯಾಗಿದೆ.

ಇದೇ ಹಳ್ಳಿಯಲ್ಲಿ 5-6 ಕಿ. ಮೀ. ದೂರದ ಹೈಸ್ಕೂಲ್‌ಗೆ ಕಾಲ್ನಡಿಗೆಯಲ್ಲಿಯೇ ತೆರಳುವ ಸುಮಾರು 30 ವಿದ್ಯಾರ್ಥಿಗಳಿಗೆ ಸೈಕಲ್‌ ವ್ಯವಸ್ಥೆ ಹಾಗೂ ಮೋಹ್‌ವಾಡಿಯ ಸುಮಾರು 80 ಮಕ್ಕಳಿಗೆ ಪಾದರಕ್ಷೆ, ಇನ್ನಿತರ ಶಾಲಾ ಪರಿಕರಗಳನ್ನು ವಿತರಿಸಲಾಯಿತು.

ಅಕಾಲಿಕ ಮಳೆಯಿಂದ ಹಾನಿಗೊಳ ಗಾದ ಪ್ರದೇಶಕ್ಕೆ ಶಾಸಕ ಕಿಶನ್‌ಜಿà ಕಕೋರೆ, ತಹಶೀಲ್ದಾರ್‌, ಜಿಲ್ಲಾ ಪರಿಷತ್‌ನ ಉಪ ಸಭಾಪತಿ ಸೀಮಾ ಘರಾಟ್‌, ಜಿಲ್ಲಾ ಪರಿಷತ್‌ನ ಸದಸ್ಯ ಅನಿಲ್‌ ಘರಾಟ್‌ ಮತ್ತಿತರ ಸರಕಾರಿ ಅಧಿಕಾರಿಗಳೊಂದಿಗೆ ಓಂ ಶಕ್ತಿ ಮಹಿಳಾ ಸಂಸ್ಥೆಯ ಮಹಿಳೆಯರು ಭೇಟಿ ನೀಡಿ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳು ಮತ್ತು ಇನ್ನಿತರ ಸಾಮಗ್ರಿ ವಿತರಿಸಿದರು.

ಮೂಲ ಸೌಕರ್ಯಗಳಿಂದ ವಂಚಿತರಾದ ಶಾಲಾ ಮಕ್ಕಳ ಜ್ಞಾನ ವಿಕಾಸಕ್ಕಾಗಿ ಶಾರದಾ ವಿದ್ಯಾ ಮಂದಿರ್‌ ವೈಶಾಖರೆ ಶಾಲೆಗೆ 2 ಕಂಪ್ಯೂಟರ್‌ಗಳನ್ನು ಪೂರೈಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಹರಿಣಿ ಟಿ. ಶೆಟ್ಟಿ, ಉಪಾಧ್ಯಕ್ಷೆ ಜ್ಯೋತಿ ಎಸ್‌. ಶೆಟ್ಟಿ, ಕೋಶಾಧಿಕಾರಿ ಸುರೇಖಾ ಎಚ್‌. ಶೆಟ್ಟಿ, ಜತೆ ಕೋಶಾಧಿಕಾರಿ ಕುಶಲಾ ಜಿ. ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಶಶಿ ಪಿ. ಶೆಟ್ಟಿ, ರಜನಿ ಎಸ್‌. ಶೆಟ್ಟಿ, ಉಷಾ ಎ. ಶೆಟ್ಟಿ, ಸುಪ್ರೀತಾ ಎಂ. ಭಂಡಾರಿ, ಶಾಲಿನಿ ಎಸ್‌. ಶೆಟ್ಟಿ, ಯಶೋದಾ ಆರ್‌. ಶೆಟ್ಟಿ, ಪ್ರೇಮಾ ಆಳ್ವ, ಕುಮಾರಿ ವಿ. ಶೆಟ್ಟಿ, ಪ್ರಕೃತಿ ಎಸ್‌. ಶೆಟ್ಟಿ, ಇಂದಿರಾ ಎಲ್‌. ಶೆಟ್ಟಿ, ರಂಜಿತಾ ಆರ್‌. ಶೆಟ್ಟಿ, ಸುಧಾ ಡಿ. ಶೆಟ್ಟಿ, ಆಶಾ ವಿ. ಶೆಟ್ಟಿ, ಆಶ್ನಾ ಪಿ. ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತ ನಾಡಿದ ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಅವರು, ಇನ್ನೂ ಹಲವು ಮಕ್ಕಳಿಗೆ ಸಹಾಯ ಮಾಡಲಿದ್ದೇವೆ. ನಮ್ಮ ಈ ಸಮಾಜ ಸೇವೆಗೆ ಶ್ರಮಿಸಿದ ಎಲ್ಲ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ಆಶಿಸಿದರು. ಹರಿಣಿ ಟಿ. ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next