Advertisement
ದೊಡ್ಡ ದೊಡ್ಡ ಕಲ್ಲು ಬಂಡೆಗಳ ನಡುವೆ ಶಿವ, ಪಾರ್ವತಿ, ಗಣಪ ವಿರಾಜಮಾನರಾಗಿ ಬಂದ ಭಕ್ತರ ಇಷ್ಟಗಳನ್ನು ಈಡೇರಿಸುತ್ತಿದ್ದಾರೆ. ಶಿರಿಯಾರದಲ್ಲಿರುವ ಕಲ್ಲುಗಣಪತಿ ದೇವಾಲಯ ಇಂದಿನ ಆಧುನಿಕ ಯುಗದಲ್ಲೂ ಅಜ್ಞಾತವಾಗಿರುವುದು ವಿಪರ್ಯಾಸವೇ ಸರಿ.
Related Articles
Advertisement
ಉಡುಪಿ ಕುಂದಾಪುರ ಗಡಿಭಾಗವು ಹೌದು:
ಈ ದೇವಾಲಯದ ಹಿಂಭಾಗದಲ್ಲಿ ವಾರಾಹಿ ನದಿಯು ಕವಲೊಡೆದು ಹರಿಯುತ್ತಿದೆ. ನದಿಯ ಒಂದು ಭಾಗ ಉಡುಪಿ ಜಿಲ್ಲೆಗೆ ಸೇರಿದ್ದು ಇನ್ನೊಂದು ಭಾಗ ಕುಂದಾಪುರಕ್ಕೆ ಸೇರಿದ್ದಾಗಿದೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ದೇವಾಲಯದ ಬದಿಯ ಕಲ್ಲಿನ ಪರ್ವತಕ್ಕೆ ಹತ್ತಿನಿಂತರೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
ಕರ್ನಾಟಕದ ನಕ್ಷೆ ಹೋಲುವ ಕಲ್ಲುಬಂಡೆ:
ಈ ದೇವಾಲಯದ ಎದುರಿನ ಬಯಲಿನಲ್ಲಿ ದೊಡ್ಡ ಗಾತ್ರದ ಕಲ್ಲು ಬಂಡೆಯೊಂದಿದ್ದು ಇದು ನಮ್ಮ ಕರ್ನಾಟಕ ರಾಜ್ಯದ ನಕ್ಷೆಯನ್ನೇ ಹೋಲುತ್ತದೆ. ಇಲ್ಲಿನ ಅರ್ಚಕರು ಹೇಳುವಂತೆ ಈ ಕಲ್ಲು ಹಿಂದಿನ ರಾಜರ ಆಳ್ವಿಕೆಯ ಕಾಲಕ್ಕೆ ಸೇರಿದ್ದು ಎಂದು ಪ್ರತೀತಿ.
ಮೂಲ ಸೌಕರ್ಯಗಳ ಕೊರತೆ :
ಈ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಕೆಲವು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕಾರ್ಯ ನಡೆದಿದೆ, ಪ್ರಾಕೃತಿಕ ಸೌಂದರ್ಯ ಹೊಂದಿರುವ ದೇವಾಲಯ ಹೊರಜಗತ್ತಿಗೆ ಪ್ರಚಾರವಾಗದೆ ಅಜ್ಞಾತವಾಗಿಯೇ ಉಳಿದಿರುವುದು ವಿಪರ್ಯಾಸ. ಇಲ್ಲಿಯ ದೇವಾಲಯಕ್ಕೆ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ.
ನಿತ್ಯಪೂಜೆ :
ಇಲ್ಲಿ ಗಣಪತಿ, ಶಿವ, ಪಾರ್ವತಿ ದೇವರ ವಿಗ್ರಹವಿದ್ದು ನಿತ್ಯ ಪೂಜಾ ಕೈಂಕರ್ಯ ನಡೆಯುತ್ತಿದೆ. ವಿಶೇಷ ದಿನಗಳು ಅಂದರೆ ಸಂಕಷ್ಟಿ, ಗಣೇಶ ಚತುರ್ಥಿ ಸಂದರ್ಭಗಳ್ಲಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ವಿಶೇಷ ಪೂಜೆಗಳನ್ನೂ ಮಾಡಿ ಹೋಗುತ್ತಾರೆ.
ದಾರಿ ಹೇಗೆ:
ಪಡುಮುಂಡು ಕಲ್ಲುಗಣಪತಿ ದೇವಾಲಯ ಉಡುಪಿಯಿಂದ ೨೫ಕಿಮೀ ದೂರದಲ್ಲಿದೆ. ಬ್ರಹ್ಮಾವರ, ಬಾರಕೂರು ಮಾರ್ಗವಾಗಿ ಶಿರಿಯಾರದಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ದೇವಾಲಯ ಕಾಣಸಿಗುತ್ತದೆ.