Advertisement

ಕಲ್ಲಡ್ಕ-ವಿಟ್ಲ  ಮೂರು ಕಿ.ಮೀ. ರಸ್ತೆ ದ್ವಿಪಥ  ಭಾಗ್ಯ

08:50 AM Aug 11, 2017 | Harsha Rao |

ವಿಟ್ಲ : ಕಲ್ಲಡ್ಕದಿಂದ ವಿಟ್ಲಕ್ಕೆ ಹೋಗುವ ರಸ್ತೆಯ 3 ಕಿ.ಮೀ. ದೂರದ ವೀರಕಂಭವರೆಗಿನ ರಸ್ತೆಗೆ ಅಂತೂ ಭಡ್ತಿ ಭಾಗ್ಯ ದೊರಕಿದೆ. ಇದನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಗೊಳಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಆ. 29ರಂದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಕಾಮಗಾರಿಗೆ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುವುದು. 2018ರ ಮಾರ್ಚ್‌
ನೊಳಗೆ ಈ ಕಾಮಗಾರಿ ಪೂರ್ತಿಯಾಗ ಬೇಕಿದೆ.

Advertisement

ಅಂತಾರಾಜ್ಯ ಹೆದ್ದಾರಿ ಕಡೂರು -ಕಲ್ಲಡ್ಕ- ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಲ್ಲಿ ಕಲ್ಲಡ್ಕದಿಂದ ಸಾರಡ್ಕವರೆಗಿನ ರಸ್ತೆ ಸಮಗ್ರ ಅಭಿವೃದ್ಧಿಯಾಗಿಲ್ಲ. ಮರುಡಾಮರು ಕಾಮಗಾರಿ ನಡೆದು ಹಲವು ವರ್ಷಗಳಾದವು. ಇತ್ತೀಚೆಗೆ ತೇಪೆ ಹಾಕಲಾಗಿತ್ತಾದರೂ, ಪ್ರಸ್ತುತ ರಸ್ತೆಯುದ್ದಕ್ಕೂ ಹೊಂಡಗಳು ಹೆಚ್ಚಾಗಿವೆ. ಅಂತಾರಾಜ್ಯ ಹೆದ್ದಾರಿ  ನಿಯಮಾವಳಿ ಜಾರಿಗೆ ತರಲಾಗಿಲ್ಲ. 

ಅಗಲ ಕಿರಿದಾದ ವಿಟ್ಲ ಪೇಟೆಯಲ್ಲೇ ಈ ಅಂತಾರಾಜ್ಯ ಹೆದ್ದಾರಿ ಸಾಗುತ್ತದೆ. ಕೆಎಸ್‌ಆರ್‌ಟಿಸಿ ಮತ್ತು ಸಿಸಿ ಬಸ್ಸುಗಳು ಈ ರಸ್ತೆಯಲ್ಲಿ ದಿನನಿತ್ಯವೂ ನೂರಕ್ಕೂ ಅಧಿಕ ಟ್ರಿಪ್‌ ಹಾಕುತ್ತಿವೆ. ಆದರೆ ವೀರಕಂಭ, ಗೋಳ್ತಮಜಲು ಮೊದಲಾದೆಡೆ ಅಗಲ
ಕಿರಿದಾಗಿ, ಸಂಚಾರಕ್ಕೆ ಅನನುಕೂಲ ವಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವ
ಇದೇ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ಪ್ರÅಸ್ತಾಪ ಸಲ್ಲಿಸ
ಲಾಗಿದೆ. ಕೇರಳದಲ್ಲಿ ಅಂದರೆ ಸಾರಡ್ಕದಿಂದ ಕಾಂಞಂಗಾಡ್‌ ವರೆಗೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯೆಂದೇ ಬಿಂಬಿಸಲಾಗುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಾಗುವ ಸಂದರ್ಭ ಕರ್ನಾಟಕ ಭಾಗವಾದ ಸಾರಡ್ಕದಿಂದ ಕಲ್ಲಡ್ಕವರೆಗಿನ ರಸ್ತೆಯು ಅದೇ ನಾಮಫಲಕವನ್ನು ಹೊಂದಬೇಕು. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಸರ್ವೆ ನಡೆಸುತ್ತಿರುವ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಕಾಮಗಾರಿ ವ್ಯರ್ಥವಲ್ಲ 
ಈ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಭಡ್ತಿ ಹೊಂದಿದರೂ  ಕಲ್ಲಡ್ಕ-ವೀರಕಂಭ ದ್ವಿಪಥ ಕಾಮಗಾರಿಗೆ ವ್ಯಯ ಮಾಡಿದ 3 ಕೋಟಿ ರೂ. ಅನುದಾನ ವ್ಯರ್ಥವಾಗದು. ಅದು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ
ಯಲ್ಲಿ ಕೊನೆಗೊಳ್ಳುತ್ತದೆ. ರಸ್ತೆಯನ್ನು ವೀರಕಂಭದಿಂದ ಸಾರಡ್ಕದವರೆಗೆ ಮುಂದುವರಿಸಲು ಅನುಕೂಲ ಅಗಲಿದೆ.

Advertisement

ಬಂಡೆ ತೆಗೆದು ರಸ್ತೆ ವಿಸ್ತರಣೆಗೆ 1.5 ಕೋ. ರೂ.
ವೀರಕಂಭ ಮತ್ತು ಕೋಡಪದವು ಜಂಕ್ಷನ್‌ನಿಂದ ವಿಟ್ಲ ಕಡೆಗೆ ಸಾಗುವ ಇಳಿಜಾರು ರಸ್ತೆ ಅಪಾಯಕಾರಿಯಾಗಿದ್ದು,. ಅಗಲ ಕಿರಿದಾಗಿದೆ. ಅನೇಕ ಅಪಘಾತ, ಜೀವಹಾನಿಯೂ ಸಂಭವಿಸಿತ್ತು. ಇಲ್ಲಿ ರಸ್ತೆ ವಿಸ್ತರಣೆಯಾಗಬೇಕು ಎಂಬ 
ಆಗ್ರಹ ನಾಗರಿಕರದ್ದಾಗಿತ್ತು. ಅಲ್ಲಿರುವ ಬಂಡೆಕಲ್ಲುಗಳೇ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಅದನ್ನು ಒಡೆದು ರಸ್ತೆ ನಿರ್ಮಿಸುವುದು  ಅರಣ್ಯ ಇಲಾಖೆಯ ಸಿರಿಚಂದನವನವೂ ಪಕ್ಕದಲ್ಲೇ ಇದೆ. ಇದೀಗ ಈ ಸಮಸ್ಯೆಯನ್ನು ನಿವಾರಿಸಬೇಕಿದೆ. 1.5 ಕೋ. ರೂ.ಗಳ ಅನುದಾನದಲ್ಲಿ ಬಂಡೆ ಒಡೆದು, 2018ರ ಮಾರ್ಚ್‌ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next