Advertisement
ಪ್ರಕೃತಿ ವಿಕೋಪದಿಂದಾಗಿ ಪಳ್ಳಿ, ಕಲ್ಕಾರು ಹಾಗೂ ಕೈರಬೆಟ್ಟು ಕಲ್ಯಾ ಪರಿಸರದ ಗ್ರಾಮಗಳ ಸಂಪರ್ಕ ಸೇತುವೆ ಕಡಿತಗೊಂಡಿದ್ದು ಜನ ಸಂಚಾರಕ್ಕೆ ಮಾತ್ರ ಪರದಾಟ ನಡೆಸುವಂತಾಗಿದೆ. ಹಾಳೆಕಟ್ಟೆ, ನೆಲ್ಲಿಗುಡ್ಡೆ, ಕೈರಬೆಟ್ಟು ಪರಿಸರದ ಜನ ನಿತ್ಯ ಕೆಲಸ ಕಾರ್ಯಗಳಿಗೆ ಹಾಗೂ ಶಾಲೆ ಕಾಲೇಜು ಸೇರಲು ಈ ಸೇತುವೆಯನ್ನೇ ದಾಟಿಕೊಂಡು ಹೋಗಬೇಕಿದ್ದು ರಸ್ತೆಯೂ ಕಡಿತಗೊಂಡಿದ್ದು ಎರಡು ಗ್ರಾಮದ ಜನ ಅತ್ತಿತ್ತ ಸಾಗಲು ಪರದಾಟ ನಡೆಸುತ್ತಿರುವ ಸಮಸ್ಯೆಯ ಬಗ್ಗೆ ಈ ಹಿಂದೆ ಉದಯವಾಣಿ ಸಮಗ್ರ ವರದಿಯನ್ನು ಪ್ರಕಟಿಸಿದ್ದ ಬಳಿಕ ಎಚ್ಚೆತ್ತ ಸ್ಥಳಿಯಾಡಳಿತ ಮೋರಿಗಳನ್ನು ಹಾಕಿ ಮತ್ತೆ ಬದಲಿ ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಇದೀಗ ಮತ್ತೆ ಮಣ್ಣಿನ ರಸ್ತೆ ಕೊಚ್ಚಿ ಹೋಗಿ ಮತ್ತೆ ಅದೇ ದುಸ್ಥಿತಿ ಒದಗಿ ಬಂದಿದೆ. ನೆಲ್ಲಿಗುಡ್ಡೆ ಪರಿಸರ ಜನ ಪಳ್ಳಿ, ಕಾರ್ಕಳ ಭಾಗವನ್ನು ಸಂಪರ್ಕಿಸಲು ಪ್ರಮುಖವಾಗಿ ಬಳಕೆ ಮಾಡುತ್ತಿದ್ದ ಸೇತುವೆಯೇ ಕಡಿತಗೊಂಡು ಒಂದು ವಾರ ಕಳೆದರೂ ಸಮರ್ಪಕ ಬದಲಿ ರಸ್ತೆಯ ನಿರ್ಮಾಣವಾಗಿಲ್ಲ.
ಕಲ್ಕಾರು ಸೇತುವೆಯೂ ಕೊಚ್ಚಿ ಹೋಗಿ ವಾಹನ ಸಂಚಾರ ನಡೆಸಲು ಸಾಧ್ಯವಿಲ್ಲದಿದ್ದರೂ ಗುತ್ತಿಗೆದಾರ ಹಾಗೂ ಸ್ಥಳಿಯಾಡಳಿತ ಎಲ್ಲೂ ಸೂಚನಾ ಫಲಕವನ್ನು ಅಳವಡಿಸಿಲ್ಲ. ಹಾಳೆಕಟ್ಟೆ ಹಾಗೂ ಬೆಳ್ಮಣ್ ಪ್ರದೇಶದಿಂದ ಬರುವ ಮಂದಿ ಸೇತುವೆಯ ಸಮೀಪದ ವರೆಗೆ ಬಂದು ಅಲ್ಲಿ ಅಳವಡಿಸಿದ ಬ್ಯಾನರ್ ನೋಡಿ ಮತ್ತೆ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಲೇಜಿಗೆ ಹೋಗಲು ಕಷ್ಟ
ಈ ಸೇತುವೆಯ ಬದಲಿ ಮಣ್ಣಿನ ರಸ್ತೆಯ ಕುಸಿತದವ ಬಗ್ಗೆ ಮಾಹಿತಿ ಇದೆ. ಬುಧವಾರ ಈ ಕಾಮಗಾರಿಯ ಎಂಜಿನಿಯರ್ ರೋಶನ್ ಡಿ’ಕೋಸ್ತಾ ಹಾಗೂ ಗುತ್ತಿಗೆದಾರರು ಸ್ಥಳಕ್ಕಾಗಮಿಸಲಿದ್ದು ಕ್ರಮ ಕೈಗೊಳ್ಳಲಿದ್ದಾರೆ. 2ನೇ ಹಂತದ ಗುತ್ತಿಗೆದಾರರ ಪ್ರಮಾದದಿಂದ ಈ ಕುಸಿತ ನಡೆದಿದ್ದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಿದ್ದೇವೆ.
– ಸುಮಿತ್ ಶೆಟ್ಟಿ , ಜಿ.ಪಂ. ಸದಸ್ಯ
Related Articles
ರಸ್ತೆ ಸರಿಯಿಲ್ಲದ ಕಾರಣ ಕಾಲೇಜಿಗೆ ಸರಿಯಾದ ವೇಳೆಯಲ್ಲಿ ತಲುಪಲು ಕಷ್ಟವಾಗುತ್ತಿದೆ
– ಸಂದೇಶ್, ವಿದ್ಯಾರ್ಥಿ
Advertisement