Advertisement

ಕೊನೆ ಕಳೆಯೋ ದಿನಗಳು, ಕೊನೆ ತನಕ ಜೊತೆಯಲ್ಲೇ…

03:45 AM Feb 17, 2017 | |

ಇನ್ನೇನು ಜೊತೆಯಾಗಿ ಹೆಚ್ಚಂದ್ರೆ ಮೂರು ತಿಂಗಳು ಇರ್ತೇವೆ, ಆಮೇಲೆ ನಾವೆಲ್ಲೋ, ನೀವೆಲ್ಲೋ ಅನ್ನೋ ಮಾತುಗಳೇ ನನ್ನ ಫ್ರೆಂಡ್ಸ್‌ ಬಾಯಲ್ಲಿ ಕೇಳಿಬರುತ್ತಿವೆ. ಈ ಮಾತುಗಳು ಕಿವಿ ಮೇಲೆ ಬಿದ್ದಾಗ ಅಯ್ಯೋ ಕಣ್ಣುಮುಚ್ಚಿ ತೆರೆಯೋ ಹೊತ್ತಿಗೆ ಮೂರು ವರುಷ, ಮೂರು ತಿಂಗಳಾಗಿ ಬಿಟ್ಟಿತಲ್ವಾ ಅನ್ಸುತ್ತೆ. ಯಾರನ್ನಾದ್ರೂ ಬೈತಿದ್ರೂ “ಇನ್ನು ಬೈಯ್ಯೋದೆಲ್ಲಾ ಮೂರು ತಿಂಗಳು ಬೈತೀರ ಆಮೇಲೆ ಯಾರಿಗೆ ಬೈತೀರಿ’ ಅಂತ ಬೈಯ್ಯೋರ ಬಾಯಿಯನ್ನೂ ಮುಚ್ಚಿಸಿಬಿಡ್ತೇವೆ.

Advertisement

ಡಿಗ್ರಿ ಓದೋವಾಗ ಮಾಡೋ ಎಂಜಾಯ್‌ಮೆಂಟ್‌ ಪಿ.ಜಿ. ದಿನಗಳಲ್ಲಿ ಇರೋದಿಲ್ಲ. ಪ್ರತಿದಿನದಲ್ಲಿ ಒಂದು ಕ್ಲಾಸಿಗಾದ್ರೂ ಬಂಕ್‌ ಹಾಕಿ ಬೈಕ್‌ ಹಿಡ್ಕೊಂಡು ಸುತ್ತಾಡೋ ತರೆಲ ಹುಡುಗ್ರು, ಪ್ರತಿದಿನ ಕ್ಲಾಸಲ್ಲೇ ಕೂರೋ ಗಾಂಧಿ ಪೀಸ್‌ಗಳು, ಆ ಕಡೆನೂ, ಈ ಕಡೆನೂ ಎರಡ್ರಲ್ಲೂ ಸೇರೋ ಮಧ್ಯವರ್ತಿಗಳು ಇವೆಲ್ಲಾ ಇನ್ನು ಎಲ್ಲೆಲ್ಲಿಗೆ ಹೋಗ್ತಾರೋ ನಂತ್ರ ಎಲ್ಲಿ ಸಿಗ್ತಾರೋ ಒಂದೂ ಗೊತ್ತಿಲ್ಲ.

ಕೊನೆಯ ದಿನಗಳು ಬರ್ತಾ ಇದ್ದ ಹಾಗೆ ಇನ್ನೂ ಜಾಸ್ತಿ ದಿನಗಳು ಇರಾರ್ದಿತ್ತಾ ಅನ್ಸುತ್ತೆ. ಕಾಲೇಜ್‌ಗೆ ಸೇರಿದ ಮೊದಲ ವರ್ಷದಿಂದ ಪರಿಚಯವಾಗೋ ಸ್ನೇಹಸಂಬಂಧಗಳು ಕೊನೆ ವರ್ಷ ಮುಗಿಯೋವಾಗ ಸಾಗರದಂತೆ ಹಬ್ಬಿಕೊಂಡಿರುತ್ತೆ. ಕ್ಲಾಸ್‌ ಕ್ಲಾಸ್‌ಗಳಿಂದ ಒಟ್ಟಾಗಿ ಸೇರಿ ಮಾಡೋ ಟ್ಯಾಲೆಂಟ್ಸ್‌ ಡೇ, ಕಾಲೇಜ್‌ ಡೇ, ನ್ಪೋರ್ಟ್ಸ್ ಡೇ ಇವುಗಳಲ್ಲಿ ನಮ್ಮ ಕ್ಲಾಸ್‌ಗೆ ಜಾಸ್ತಿ ಪಾಯಿಂಟ್ಸ್‌ ಬರ್ಬೇಕು ಅಂತ ಲೀಡರ್‌ಶಿಪ್‌ ತೆಗೆದುಕೊಳ್ಳೋ ಸ್ಟ್ರಾಂಗ್‌ ಪರ್ಸನ್ಸ್‌, ಎಲ್ಲರನ್ನೂ ಜೊತೆ ಕೂರಿಸ್ಕೊಂಡು ಪ್ಲಾನಿಂಗ್‌ ಹಾಕೋವಾಗ ಡಿಫ‌ರೆಂಟ್‌ ಐಡಿಯಾ ಕೊಡೋ ನಮ್‌ ಫ್ರೆಂಡ್ಸ್‌ಗಳು, ಈ ಬಾರಿ ಎಷ್ಟು ಖರ್ಚಾದ್ರೂ ಪರ್ವಾಗಿಲ್ಲ. ನಮ್‌ ಟ್ಯಾಲೆಂಟ್‌ನ ಭರ್ಜರಿಯಾಗಿ ತೋರಿಸಿಕೊಡೋಣ ಅನ್ನೋ ಕ್ಲಾಸ್‌ ಮುಖ್ಯಮಂತ್ರಿಗಳು, ನ್ಪೋರ್ಟ್ಸ್ಲ್ಲೂ ಜಾಸ್ತಿ ಪ್ರಶಸ್ತಿ ಬರಬೇಕು ಅಂತೆಲ್ಲಾ ಡೀಪ್‌ ಡಿಸ್ಕಶನ್‌ ಆಗ್ತಾ ಇದ್ರೆ ಲಾಸ್ಟಲ್ಲಿ ಕುಳಿತು ನಮ್ಮದೇ ಲೋಕದಲ್ಲಿ ತೇಲಾಡೋ ನಾಲ್ಕು ಹುಡುಗೀರು. 

ಹುಟ್ಟುಹಬ್ಟಾನ ಫ್ರೆಂಡ್ಸ್‌ ಜೊತೆ ಸೆಲೆಬ್ರೇಷನ್‌ ಮಾಡಿ ಮಜಾ ಮಾಡಿದ ದಿನ, ಸೆಮ್‌ ಮುಗಿಯೋವಾಗ ನಲವತ್ತು ಗಂಟೆ ಲೈಬ್ರರಿ ಅವರ್‌ ಮಾಡಿಲ್ಲ ಅಂತ ಸ್ಟಡೀ ಹಾಲಿಡೇ ಪೂರ್ತಿ ಅಲ್ಲೇ ಕೂತು ನಿದ್ದೆ ಮಾಡೋ ತನಕ ತಲುಪಿದ ಓದು. ಎಗಾಮ್‌ಗೆ ಓದದೇ ಬಂದು ಪಕ್ಕದವನಿಗೆ ಟಾರ್ಚರ್‌ ಕೊಡೋ ಫ್ರೆಂಡ್ಸ್‌ಗಳು. ಕ್ಲಾಸಿಗೆ ಬರೋವಾಗ ಖಾಲಿ ಕೈಯ್ಯಲ್ಲಿ ಬಂದು ದಿನಾ ಒಬ್ಬೊಬ್ಬರಲ್ಲಿ ಪೆನ್‌ ತೆಗೆದುಕಂಡು ಕ್ಲಾಸ್‌ ಮುಗಿಸ್ಕೊಂಡು ಹೋಗೋ ಸಾಚಾಗಳು, ದಿನಾ ಕ್ಲಾಸ್‌ಗೆ ಲೇಟಾಗಿ ಬಂದು ಲೆಕ್ಚರರ್ ಹತ್ರ ಉಗಿಸ್ಕೊಳ್ಳೋ ಲೇಟೆಸ್ಟ್‌ ಗಿರಾಕಿಗಳು ಇನ್ನು ಮೂರು ತಿಂಗಳು ಕಳೆದ ಮೇಲೆ ನೂರು ಕಡೆಗಳಿಗೆ ತೆರಳೆ¤àವೆ ಅನ್ನೋ ನೋವು ನಮ್ಮನ್ನ ಕಾಡುತ್ತೆ.

ಇನ್ನು ಹಾಸ್ಟೆಲ್‌ಗ‌ಳಲ್ಲಿ ಜೊತೆಯಿರೋ ಫ್ರೆಂಡ್ಸ್‌ಗಳಿಗೂ ಹಾಸ್ಟೆಲ್‌ ಬಿಟ್ಟು ತೆರಳ್ಬೇಕಲ್ಲಾ ಅನ್ನೋ ಬೇಸರ. ಒಂದು ರೂಪಾಯಿ ಕಾಯಿನ್‌ನ ಬೆಲೆ ತಿಳಿಸಿಕೊಟ್ಟ ಕಾಯಿನ್‌ ಫೋನ್‌, ಕಾಯಿನ್‌ ಬಾಕ್ಸ್‌ ಹಾಳಾಗಿ ಮನೆಯವರೊಂದಿಗೆ ಮಾತಾಡದೇ ಕಳೆದ ವಾರಗಳು. ಸಣ್ಣ ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡ್ಕೊಳ್ಳೋ ಕ್ಯೂಟ್‌ ಫ್ರೆಂಡ್ಸ್‌ಗಳು. ಹಾಸ್ಟೆಲ್‌ ರೂಲ್ಸ್‌ ಬ್ರೇಕ್‌ ಮಾಡಿ ಸಿಕ್ಕಿಬಿದ್ದು ಬೈಗುಳ ತಿಂದ ದಿನಗಳು ಮುಗಿತಾ ಬರ್ತಾ ಇದೆ ಅಂದ್ರೆ ಕಣ್ಣಲ್ಲಿ ನೀರು ಬಾರದೇ ಇರುತ್ತಾ?

Advertisement

ಕೊನೆಯಲ್ಲಿ ಕಳೆಯೋ ದಿನಗಳು ಕೊನೆತನಕ ನೆನಪಲ್ಲಿ ಉಳಿಯುತ್ತೆ. ಎಲ್ಲಾ ನೋವು-ನಲಿವುಗಳಲ್ಲಿ ಒಂದಾಗಿದ್ದ ಫ್ರೆಂಡ್ಸ್‌ಗಳೆಲ್ಲ ಬೇರೆ ಬೇರೆ ದಿಕ್ಕುಗಳಿಗೆ ಪ್ರಯಾಣ ಬೆಳೆಸೋ ದಿನ ಬರುತ್ತಿದೆ. ಎಲ್ಲರ ಪ್ರಯಾಣದಲ್ಲೂ ಅವರವರ ಜೀವನದ ಹಾದಿ, ಹಾದಿಯುದ್ದಕ್ಕೂ ಮರುಕಳಿಸುತ್ತಾ ಇರೋ ಸಿಹಿಕಹಿ ನೆನಪುಗಳು, ನೆನಪುಗಳನ್ನೇ ಮರೆಸೋ ಕೆಲವೊಂದು ನೋವುಗಳು. ಎಲ್ಲರೂ ಜೊತೆ ಜೊತೆಯಾಗಿ ಇದ್ದ ದಿನ ಮರೆಯಾಗೋ ಕಾಲ ಹತ್ತಿರ ಬರಿ¤ದೆ. 

– ದೀಕ್ಷಾ ಬಿ. ಪೂಜಾರಿ
ಎಸ್‌ಡಿಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next