Advertisement

ಕನ್ನಡ ಭಾಷೆ ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದು: ಸತೀಶ ಕಿಣಿ

01:40 AM Dec 06, 2018 | Karthik A |

ಸಿದ್ದಾಪುರ: ಯಕ್ಷಗಾನ ಕಲೆ ಶ್ರೇಷ್ಠ ಕಲೆಯಾಗಿದೆ. ಯಕ್ಷಗಾನ ಕಲೆಯು ಜನರ ನಿತ್ಯ ಜೀವನದಲ್ಲಿ ಮಹತ್ವದ ಬದಲಾವಣೆಗೆ ಪ್ರೇರಣೆ ನೀಡುತ್ತದೆ. ಎಲ್ಲಿಯೂ ಕೂಡ ಇಂಗ್ಲಿಷ್‌ ಪದಗಳನ್ನು ಬಳಸದೆ ಕನ್ನಡದಲ್ಲಿಯೇ ಸಂಭಾಷಣೆ ನಡೆಸುವ ಕಲೆ ಇದ್ದರೆ ಅದು ಯಕ್ಷಗಾನದಲ್ಲಿ ಮಾತ್ರ ಎಂದು ಬೆಳ್ವೆ ಬಿ. ಸಂದೇಶ್‌ ಕಿಣಿ ಮೆಮೋರಿಯಲ್‌ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ  ಬಿ. ಸತೀಶ್‌ ಕಿಣಿ ಬೆಳ್ವೆ ಹೇಳಿದರು. ಅವರು ಬೆಳ್ವೆ ಬಿ. ಸಂದೇಶ್‌ ಕಿಣಿ ಮೆಮೋರಿಯಲ್‌ ಚಾರಿಟೆಬಲ್‌ ಟ್ರಸ್ಟ್‌ ಸಭಾಭವನದಲ್ಲಿ ಡಿ. 1ರಂದು ನಡೆದ ಗೋಳಿಯಂಗಡಿ ಕಲಾಶ್ರೀ ಯಕ್ಷನಾಟ್ಯ ಬಳಗದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಲೆಯಾದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಅವರು ತಿಳಿಸಿದರು.

Advertisement

ವಾಸ್ತು ತಜ್ಞ ಹಾಗೂ ಪ್ರಸಂಗಕರ್ತ ಕೆ. ಬಸವರಾಜ್‌ ಶೆಟ್ಟಿಗಾರ್‌ ಅವರು ನೂತನವಾಗಿ ಸ್ಥಾಪನೆಗೊಂಡ ಕಲಾಶ್ರೀ ಯಕ್ಷನಾಟ್ಯ ಬಳಗ ಉದ್ಘಾಟಿಸಿ ಮಾತನಾಡಿ,  ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆ ನಾಟ್ಯ, ಮಾಧುರ್ಯ, ತಾಳ, ಲಯಗಳಿಂದ ಕೂಡಿದ ಸಮೃದ್ಧ ಸಂಪತ್ತಿನಿಂದ ಕೂಡಿದೆ ಎಂದರು. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ ಗೋಳಿಯಂಗಡಿ ಶಾಖಾ ವ್ಯವಸ್ಥಾಪಕ ರಾಘವೇಂದ್ರ ಶೆಟ್ಟಿ ಹೆಬ್ಟಾಡಿ, ಚೇತನ್‌ ನೈಲಾಡಿ, ಬೆಳ್ವೆ ಗ್ರಾ. ಪಂ. ಉಪಾಧ್ಯಕ್ಷ ವೈ. ಸುರೇಂದ್ರ ನಾಯ್ಕ ಯಳಂತೂರು, ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಕಲಾಶ್ರೀ ತಂಡದ ಅಧ್ಯಕ್ಷ ಪ್ರವೀಣ್‌ ಪಿ. ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ವಿಶ್ವನಾಥ ಹೆನ್ನಾಬೈಲು, ಗಣಪತಿ ಭಟ್‌ ಗುಂಡಿಬೈಲು, ಗೋಳಿಯಂಗಡಿ  ಅಂಗನವಾಡಿ ಶಿಕ್ಷಕಿ ಗುಲಾಬಿ, ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆ ಕುಚ್ಚಾರು ಇದರ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ. ಜಿ. ಆಚಾರ್ಯ ಹೆಬ್ರಿ ಅವರನ್ನು ಸಮ್ಮಾನಿಸಲಾಯಿತು. ಕಲಾಶ್ರೀ ಯಕ್ಷನಾಟ್ಯ ಬಳಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಾಟ್ಯ ಗಾನ ವೈಭವ ಕಾರ್ಯಕ್ರಮ ನಡೆಯಿತು. ಪ್ರವೀಣ್‌ ಪಿ.ಆಚಾರ್ಯ ಸ್ವಾಗತಿಸಿದರು. ಗಣೇಶ್‌ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿರು. ಯೋಗೀಶ್‌ ನೇರಳಕಟ್ಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next