ಚಿಕ್ಕಮಗಳೂರು : ಪವರ್ ಸ್ಟಾರ್ ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಮೇಲಿನ ಅಭಿಮಾನ ಇಂದಿಗೂ ಕಮ್ಮಿಯಾಗಿಲ್ಲ, ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಸಾವಿರಾರು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿರುವುದು ಅಲ್ಲಲ್ಲಿ ಇವತ್ತಿಗೂ ಕಂಡು ಬರುತ್ತದೆ.
ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಿಡಿ ಮಹೋತ್ಸವ ಇಂಥದ್ದೇ ಒಂದು ಘಟನೆ ರವಿವಾರ ಸಂಜೆ ನಡೆದಿದೆ.
ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೂ ಮುನ್ನ ಭಾರೀ ಪ್ರಮಾಣದ ಕಮಿಷನ್ ಅಕ್ರಮ ವ್ಯವಹಾರ: ಆಲಂ ಪಾಷಾ ಆರೋಪ
ಸಿಡಿ ಮಹೋತ್ಸವದಲ್ಲಿ ಬಾಳೆಹಣ್ಣಿನ ಮೇಲೆ ಅಪ್ಪು ಮತ್ತೆ ಹುಟ್ಟಿ ಬರಲಿಯೆಂದು ಬರೆದು ಅಭಿಮಾನಿಗಳು ಸಿಡಿ ಸುತ್ತುವ ವೇಳೆ ಸಿಡಿ ಮೇಲೆ ಎಸೆದು ಅಭಿಮಾನ ಮೆರೆದಿದ್ದಾರೆ.
ಇದರ ಜತೆ ಹಳವೀರಮ್ಮ ಸಿಡಿ ಮಹೋತ್ಸವದಲ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡ ಕಪ್ ಗೆಲ್ಲಲ್ಲಿ ‘ಈ ಸಲಿ ಕಪ್ ನಮ್ದೇ’ ಎಂದು ಅಭಿಮಾನಿಗಳು ಬಾಳೆಹಣ್ಣಿನ ಮೇಲೆ ಬರೆದು ಸಿಡಿ ಮೇಲೆ ಎಸೆದಿದ್ದಾರೆ.