ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಪ್ರಸಿದ್ಧ ಕಲಾನುಭವ ಚಾರಿಟೆಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಮೇ 5 ಮತ್ತು 6 ರಂದು ಕನ್ನಡ ಸಂಘದ ಶಕುಂತಲಾ ಸಭಾಗೃಹದಲ್ಲಿ ವಾರ್ಷಿಕ ಸಂಗೀತ ಮಹೋತ್ಸವವನ್ನು ಆಚರಿಸಲಾಯಿತು.
ಕನ್ನಡ ಸಂಘದ ಅಧ್ಯಕ್ಷ ಕುಶಲ ಹೆಗ್ಡೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಕಲಾನುಭವ ಟ್ರಸ್ಟ್‌ನ ಮುಖ್ಯಸ್ಥ, ಸೀಡ್ ಇನ್ಫೋಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾರತಿ ಬರಾಟೆ, ಕಲಾನುಭವ ಟ್ರಸ್ಟ್‌ನ ಕೋಶಾಧಿಕಾರಿ ಪಂಡಿತ್ ಕೈವಲ್ಯ ಕುಮಾರ್ ಹಾಗೂ ವಿಶ್ವಸ್ತ ಸಚಿನ್ ಇಟ್ಕರ್ ಅವರು ಉಪಸ್ಥಿತರಿದ್ದರು.
ಈ ಸಂಗೀತ ಮಹೋತ್ಸವ ಕರ್ನಾಟಕದ ಧಾರವಾಡದ ಸುಪ್ರಸಿದ್ಧ ಶಾಸ್ತ್ರೀಯ ಸಂಗೀತಕಾರ ದಿ| ಪಂಡಿತ್ ಸಂಗಮೇಶ್ವರ್ ಗುರವ್ ಅವರ ಸ್ಮರಣಾರ್ಥ ಆಯೋಜಿಸಲಾಯಿತು.
ಮೊದಲನೆಯ ದಿನ ವಿವೇಕ್ ಸೋನಾರ್ ಅವರಿಂದ ಬಾನ್ಸೂರಿ ವಾದನ ಮತ್ತು ಡಾ| ಜಯಂತಿ ಕುಮೆರೇಶ್ ಅವರಿಂದ ವೀಣಾ ವಾದನ ನಡೆಯಿತು. ಎರಡನೆಯ ದಿನ ಪಂಡಿತ್ ವಿಜಯ ಕೊಪಕರ್ ಹಾಗು ಪಂಡಿತ್ ಕೈವಲ್ಯ ಕುಮಾರ್ ಅವರ ಸುಶ್ರಾವ್ಯ ಗಾಯನದೊಂದಿಗೆ ಮುಕ್ತಾಯವಾಯಿತು.
ಕನ್ನಡ ಸಂಘ ಪುಣೆ ನಿರಂತರ ಸಾಂಸ್ಕೃತಿಕ ಸಂಗೀತ ಮಹೋತ್ಸವಗಳನ್ನು ಆಚರಿಸುತ್ತಿದ್ದು ಮುಖ್ಯವಾಗಿ ಪಂಡಿತ್ ಭೀಮಸೇನ್ ಜೋಷಿ ಮತ್ತು ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಅವರ ಸ್ಮರಣಾರ್ಥ ಸಂಗೀತ ಮಹೋತ್ಸವಗಳಲ್ಲಿ ಪುಣೆಯ ಕನ್ನಡಿಗರು ಮಾತ್ರವಲ್ಲದೆ ಇತರ ಸಂಗೀತ ಪ್ರೇಮಿಗಳು ಹೆಚ್ಚಿನ ಆಸಕ್ತಿಯಿಂದ ಭಾಗವಹಿಸುತ್ತಲಿದ್ದು, ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರ ನೀಡುತ್ತಿ¨ªಾರೆ. ಸಮಾರಂಭದಲ್ಲಿ ಭಾಗವಹಿಸಿದ ಕಲಾವಿದರನ್ನು ವಿಶೇಷ ಪ್ರಶಸ್ತಿಯನ್ನಿತ್ತು ಸಂಘದ ವತಿಯಿಂದ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ಕನ್ನಡ ಮತ್ತು ಮರಾಠಿ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು