ನಂಜನಗೂಡು: ಜುಬಿಲಿಯಂಟ್ಸ್ ಕಿಟ್ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು ನಿಜ ಎಂದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸಂಸದ ಪ್ರತಾಪ ಸಿಂಹ ನಿಜವನ್ನೇ ಹೇಳಿದ್ದಾರೆ. ಆ ಸತ್ಯಕ್ಕೆ ಸ್ಥಳೀಯ ಶಾಸಕರ ಉತ್ತರ ಮಾತ್ರ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡಂತಿದೆ ಎಂದು ವ್ಯಂಗ್ಯವಾಡಿದರು.
ಗುರುವಾರ ನಂಜನಗೂಡಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.2 ತಿಂಗಳ ಹಿಂದೆಯೇ ಮಾಜಿ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ ಹಾಗೂ ತಾವು ಈ ಆಹಾರದ ಕಿಟ್ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು ತನಿಖೆಯಾಬೇಕುಎಂದು ಹೇಳಿದ್ದನ್ನು ಮೆಲುಕು ಹಾಕಿದ ಅವರು, ನಾವು ಹೇಳಿದ್ದ ಸತ್ಯವನ್ನೇ ಈಗ ಬಿಜೆಪಿ ಸಂಸದ ಪ್ರತಾಪಸಿಂಹ್ ಪುಷ್ಟೀಕರಿಸಿದ್ದಾರೆಂದರು. ಅರ್ಥವಾಗಿಲ್ಲ:ಜುಬಿಲಿಯಂಟ್ಸ್ ಕಾರ್ಖಾನೆ ನಂಜನಗೂಡಿನ ಲ್ಲಿದ್ದ ಮಾತ್ರಕ್ಕೆ ಅದು ನಂಜನಗೂಡಿಗೆ ಸೀಮಿತ ವಲ್ಲ. ಅದು ವಿಶ್ವಮಟ್ಟದ ಔಷಧಿಕಾರ್ಖಾನೆ ಎಂಬುದನ್ನು ಮೊದಲು ಶಾಸಕರು ಅರಿಯಲಿ. ಕಾರ್ಖಾನೆ ನೌಕರರು ಹಬ್ಬಿಸಿದ ಸೋಂಕು ಕೇವಲ ನಂಜನಗೂಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ರಲಿಲ್ಲ. ಇದು ಇವರ ಬಾಲಿಶತನಕ್ಕೆ ಅರ್ಥ ವಾಗಬೇಕಲ್ಲ ಎಂದು ಕಟುಕಿದರು.
ಹಿಂಬಾಲಕರಿಗೆ:ಶಾಸಕರೇ ಒಪ್ಪಿಕೊಂಡ ಹಾಗೆಯೇ ಜುಬಿಲಿ ಯಂಟ್ಸ್ ನೀಡಿದ 50 ಸಾವಿರ ಆಹಾರದ ಕಿಟ್ ಹಂಚಿಕೆಯಾಗಿದ್ದು ನಿಜ. ಆದರೆ ಸಾರ್ವಜನಿಕರಿ ಗಲ್ಲ, ಬಡವರಿಗೂ ಅಲ್ಲ. ಶಾಸಕರ ಹಿಂಬಾಲಿಕರಿಗೆ ಮಾತ್ರ ಹಂಚಿಕೆಯಾಗಿದ್ದು ಸತ್ಯ ಎಂದು ಟೀಕಿಸಿದರು.
ಭ್ರಷ್ಟಾಚಾರದ ವಿರುದ್ಧ ಸತ್ಯ ಹೇಳಿದರೆ ಕ್ಷೇತ್ರಕ್ಕೆ ಅಪಮಾನ ಎಂದರೆ ಕುಂಬಳ ಕಾಯಿ ಕಳ್ಳ ಎಂದರೆ ಮೈ ಪರಚಿಕೊಂಡ ಹಾಗೆ ಎಂದು ಕೇಶವಮೂರ್ತಿಹಾಲಿ ಶಾಸಕರ ಮಾತಿಗೆ ಕಿಡಿಕಾರಿದರು. ಅಪ್ರಾಮಾಣಿಕತೆಯ ವಿಷಯ ಬಂದಾಗ ತಾತ ಬಸವಲಿಂಗಪ್ಪ ಮಾವ ಶ್ರೀನಿವಾಸ್ ಪ್ರಸಾದರಕವಚ ಧರಿಸಲು ಹೊರಡುವ ಹರ್ಷವರ್ಧನ ಮೊದಲು ಕಿಟ್ ಅವ್ಯಹಾರದ ತನಿಖೆ ಮಾಡಿಸಲಿ. ಕ್ಷೇತ್ರದ ಎಷ್ಟು ಮನೆಗೆ ಇವರು ಪಡೆದಿರುವಜುಬಿಲಿಯಂಟ್ಸ್ ಕಿಟ್ ತಲುಪಿದೆ. ಹಿಂಬಾಲಕರಿಗೆಷ್ಟು ತಲುಪಿದೆ ಎಂಬ ಹೂರಣ ಹೊರಬರಲಿ ಎಂದು ಒತ್ತಾಯಿಸಿದರು.
ತನಿಖೆ ಮೊಟಕು:ಪ್ರಾಮಾಣಿಕ ಅಧಿಕಾರಿ ಹರ್ಷಗುಪ್ತರ ತನಿಖೆ ಸ್ಥಗಿತವಾಗಲು ಕಿಟ್ ಹಂಚಿಕೆ ಗೋಲ್‌ಮಾಲ್ ಅವ್ಯವಹಾರವೇಕಾರಣ. ತನಿಖೆ ಪೂರ್ಣವಾಗಿದ್ದರೆ ಇವರಹುಳುಕು ಬಯಲಾಗುತ್ತಿತ್ತು. ಅದಕ್ಕಾಗಿಯೇ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.ಪ್ರತಾಪ ಸಿಂಹ ಹೇಳಿದ್ದು ಅಕ್ಷರಶಃ ಸತ್ಯ. ಸತ್ಯ ಹೇಳಲು ಯಾವುದೇ ಕ್ಷೇತ್ರ ಪರಿಧಿ ಬೇಕೇ. ಶಾಸಕರು ಮೊದಲು ಬಾಲಿಶತನದ ಹೇಳಿಕೆ ನಿಲ್ಲಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಕಾಂಗ್ರೆಸ್ ನಗರಾಧ್ಯಕ್ಷ ಸಿ. ಎಂ.ಶಂಕರ್, ಗ್ರಾಮಾಂತರ ಅಧ್ಯಕ್ಷ ಮಹೇಶ ಕುರಹಟ್ಟಿ , ಹುಲ್ಲಳ್ಳಿ ಘಟಕದ ಅಧ್ಯಕ್ಷ ಶ್ರೀಕಂಠನಾಯಕ, ನಗರಸಭಾ ಸದಸ್ಯರಾದ ಗಂಗಾಧರ್, ಸ್ವಾಮಿ, ಗಾಯತ್ರಿ, ಮುಖಂಡರಾದ ರಾಮಲಿಂಗು, ಸಿದ್ದಲಿಂಗಪ್ಪ ಮತ್ತಿತರರಿದ್ದರು.