ಬೆಂಗಳೂರು: ಕೋವಿಡ್ ಹಿನ್ನೆಲೆ ನಗರದ ಕಲಾಸಿಪಾಳ್ಯಮಾರುಕಟ್ಟೆಯನ್ನು ಬ್ಯಾಟರಾಯನಪುರ ಮತ್ತು ಸಿಂಗೇನಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದ್ದು ಸೋಮವಾರದಿಂದಆ ಪ್ರದೇಶಗಳಲ್ಲಿ ಮಾರಾಟ ಪ್ರಕ್ರಿಯೆ ನಡೆಯಲಿದೆ.
ಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟುವರ್ತಕರ ಸಂಘದ ಪದಾಧಿಕಾರಿ ಗೊಂದಿಗೆ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ನಿರ್ದೇಶಕ ಕರೀಗೌಡ ಅವರುಭಾನುವಾರ ಬ್ಯಾಟರಾಯನಪುರ ಮತ್ತು ಸಿಂಗೇನಅಗ್ರಹಾರ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.ಕೋವಿಡ್ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಯಲ್ಲಿಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಲಾಸಿಪಾಳ್ಯ ತರಕಾರಿಸಗಟು ಮಾರುಕಟ್ಟೆಯನ್ನು ಬ್ಯಾಟರಾಯನಪುರ ಮತ್ತುಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಿದೆ.
ಆದರೆ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ಸ್ಥಳಾಂತರಕ್ಕೆ ಒಪ್ಪುತ್ತೇವೆಎಂದು ತರಕಾರಿ ಮತ್ತು ಹಣ್ಣು ಸಗಟು ವರ್ತಕರು ಪಟ್ಟುಹಿಡಿದಿದ್ದರು.ಆ ಹಿನ್ನೆಲೆಯಲ್ಲಿ ವರ್ತಕರೊಂದಿಗೆ ಕೃಷಿ ಉತ್ಪನ್ನಮಾರುಕಟ್ಟೆ ನಿರ್ದೇಶಕರು ಭೇಟಿ ನೀಡಿದರು.
ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು:ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಈಗಾಗಲೇವರ್ತಕರು ಕೂಡ ಒಪ್ಪಿಗೆ ನೀಡಿದ್ದಾರೆ. ಶೆಡ್ ನಿರ್ಮಾಣಸೇರಿದಂತೆ ಇನ್ನಿತರ ಮೂಲ ಸೌಕರ್ಯಕ್ಕೆ ಮನವಿಮಾಡಿದ್ದಾರೆ. ಶೀಘ್ರದಲ್ಲೆ ಶೆಡ್ ನಿರ್ಮಾಣ ಕಾರ್ಯನಡೆಯಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆನಿರ್ದೇಶಕ ಕರೀಗೌಡ ಹೇಳಿದ್ದಾರೆ.
ನಿರ್ದೇಶಕರಿಂದ ಆಶ್ವಾಸನೆ ದೊರೆತಿದೆ: ತರಕಾರಿಮತ್ತು ಹಣ್ಣು ಸಗಟು ವರ್ತಕರ ಸಂಘ ಅಧ್ಯಕ್ಷ ಆರ್.ವಿ.ಗೋಪಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಹಿರಿಯಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆನಡೆಸಲಾಗಿದೆ. ಸಮಸ್ಯೆಗಳ ಬಗ್ಗೆ ಹಿರಿಯಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದುಹೇಳಿದ್ದಾರೆ ಎಂದು ಹೇಳಿದ್ದಾರೆ.